Saturday, 23rd November 2024

ಚೇಸಿಂಗ್‌ನಲ್ಲಿ ಎಡವಿದ ಸನ್‌ರೈಸಸ್, ಅಂಕಪಟ್ಟಿಯಲ್ಲಿ ಮುಂಬೈಗೆ ಅಗ್ರಸ್ಥಾನ

ಶಾರ್ಜಾ: ಸನ್‌ರೈಸರ‍್ಸ್ ಹೈದರಾಬಾದ್ ತಂಡವನ್ನು 34 ರನ್ನುಗಳಿಂದ ಸೋಲಿಸಿತಲ್ಲದೆ, ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಕಳೆದ ಕೆಲವು ದಿನಗಳಿಂದ ಅಂಕಪಟ್ಟಿಯಲ್ಲಿ ತಂಡಗಳು ಮೊದಲನೇ ಸ್ಥಾನಕ್ಕೇರಿ, ಕೆಳಗಿಳಿಯುತ್ತಲೇ ಇವೆ. ಇದಕ್ಕೆ, ಇತರ ಪಂದ್ಯಗಳ ಫಲಿತಾಂಶ ಕಾರಣ ವಾಗುತ್ತಿರುವುದು ಸಹಜ.

ಆರಂಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅಗ್ರಸ್ಥಾನದಲ್ಲಿತ್ತು. ಬಳಿಕ, ರಾಯಲ್ ಚಾಲೆಂರ‍್ಸ್ ಬೆಂಗಳೂರು ತಂಡ ಆರು ಅಂಕ ಗಳಿಸಿ, ಅಗ್ರಸ್ಥಾನಕ್ಕೇರಿತು. ಇದರ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತಾ ನೈಡ್ ರೈಡರ‍್ಸ್ ತಂಡವನ್ನು ಸೋಲಿಸಿ, ಮೊದಲನೇ ಸ್ಥಾನಕ್ಕೇರಿತು. ಭಾನುವಾರ, ಸನ್‌ರೈಸರ‍್ಸ್ ತಂಡವನ್ನು ಸೋಲಿಸಿ, ಮುಂಬೈ ಇಂಡಿಯನ್ಸ್ ಅಗ್ರಸ್ಥಾನದಲ್ಲಿ ವಿರಾಜಮಾನ ವಾಯಿತು. ಮುಂಬೈ ಇಂಡಿಯನ್ಸ್ ತಂಡ ರನ್‌ರೇಟ್‌ನಲ್ಲೂ ಮುಂಚೂಣಿಯಲ್ಲಿದೆ. ಆದರೆ, ಈಗಾಗಲೇ ಐದು ಪಂದ್ಯಗಳ ನ್ನಾಡಿದ್ದು, ಎರಡರಲ್ಲಿ ಸೋಲುಂಡಿದೆ. ರನ್‌ರೇಟ್‌ನಲ್ಲಿ ನಂತರದ ಸ್ಥಾನ ಕಿಂಗ್ಸ್ ಎಲೆವೆನ್ ಪಂಜಾಬಿದ್ದು. ಒಂದೇ ಪಂದ್ಯವನ್ನು ಗೆದ್ದಿದ್ದರೂ, +0.521 ರನ್‌ರೇಟ್ ಇಟ್ಟುಕೊಂಡಿದೆ.

ಶಾರ್ಜಾದಲ್ಲಿ ನಡೆದ ಐಪಿಎಲ್ ನ 17 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮುಂಬೈ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ರೋಹಿತ್ ಒಂದು ಸಿಕ್ಸರ್ ಗಳಿಸಿ, ಪೆವಿಲಿಯನ್ ಸೇರಿಕೊಂಡರು. ಕೀಪರ್ ಡಿ’ಕಾಕ್ ಅವರ ಅರ್ಧಶತಕ ಹಾಗೂ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಪಾಂಡ್ಯ ಸಹೋದರರು ಮತ್ತು ಪೋಲಾರ್ಡ್ ಅವರ ಸ್ಪೋಟಕ ಬ್ಯಾಟಿಂಗಿನಿAದ ತಂಡದ ಮೊತ್ತ ಇನ್ನೂರರ ಗಡಿ ದಾಟಿತು.

ಉತ್ತರವಾಗಿ, ಸನ್‌ರೈರ‍್ಸ್ಗೆ ನಾಯಕ ಡೇವಿಡ್ ವಾರ್ನರ್ ಅವರ ಆಟವೇ ಮುಖ್ಯವಾಯಿತು. ಅರ್ಧಶತಕ ಗಳಿಸಿ ಕೊನೆಹಂತದಲ್ಲಿ ಓಟಾದರು. ಮನೀಶ್ ಪಾಂಡೆ 30 ರನ್ ಗಳಿಸಿದರು. ಯಾರಿಂದಲೂ ದೀರ್ಘ ಇನ್ನಿಂಗ್ಸ್ ಬರಲಿಲ್ಲ. ವೇಗಿ ಟ್ರೆಂಟ್ ಬೌಲ್ಟ್, ಜೇಮ್ಸ್ ಆಂರ‍್ಸನ್ ಮತ್ತು ಬುಮ್ರಾ ತಲಾ ಎರಡು ವಿಕೆಟ್ ಕಿತ್ತರು.  ಪಂದ್ಯಶ್ರೇಷ್ಠ ಪ್ರಶಸ್ತಿ ಟ್ರೆಂಟ್ ಬೌಲ್ಟ್ಗೆ ಒಲಿಯಿತು.

ಗುರಿ ಬೆನ್ನತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಆರಂಭದಲ್ಲಿ ಜಾನಿ ಬೈರ್ ಸ್ಟೋವ್ 25 ರನ್ ಗಳಿಸಿ ಔಟಾದರು. ಆರಂಭಿಕ ಆಟಗಾರ ನಾಯಕ ಡೇವಿಡ್ ವಾರ್ನರ್‌ ಸನ್ ರೈಸರ್ಸ್ ಹೈದರಾಬಾದ್‌ ತಂಡಕ್ಕೆ ಬೆನ್ನೆಲುಬಾಗಿ ನಿಂತರು. ನಂತರ ಮನೀಶ್ ಪಾಂಡೆ 30 ರನ್ ಗಳಿಸಿ ಜೇಮ್ಸ್ ಪ್ಯಾಟಿನ್ಸನ್ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು.

ಬಳಿಕ ಬಂದ ಕೇನ್ ವಿಲಿಯಮ್ಸನ್ ಕೇವಲ 3 ರನ್ ಗಳಿಸಿ ಟ್ರೆಂಟ್ ಬೋಲ್ಟ್ ಬೌಲಿಂಗ್‌ನಲ್ಲಿ ಔಟಾದರು. ಪ್ರಿಯಮ್ ಗರ್ಗ್ 8 ರನ್ ಗಳಿಸಿ ಔಟಾಗಿದ್ದು, ನಂತರ ಆರಂಭಿಕ ಆಟಗಾರ ನಾಯಕ ಡೇವಿಡ್ ವಾರ್ನರ್‌ 44 ಎಸೆತಗಳಲ್ಲಿ 60 ರನ್ ಗಳಿಸಿದ್ದು ಔಟಾದರು. ಸತತ ವಿಕೆಟ್‍ ಗಳನ್ನು ಕಳೆದುಕೊಳ್ಳುವ ಮೂಲಕ ಸನ್ ರೈಸರ್ಸ್ ತಂಡ 7 ವಿಕೆಟ್ ನಷ್ಟಕ್ಕೆ 174ರನ್ ಗಳಿಸಿದರು ಗುರಿ ತಲುಪು ವಲ್ಲಿ ವಿಫಲವಾದರು. ಈ ಮೂಲಕ ಸನ್ ರೈಸರ್ಸ್ ಹೈದರಾಬಾದ್‌ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 34 ರನ್ ಗಳಿಂದ ಭರ್ಜರಿ ಜಯ ಸಾಧಿಸಿತು.