Wednesday, 27th November 2024

Syed Modi badminton: ಸೈಯ್ಯದ್ ಮೋದಿ ಟೂರ್ನಿಯಿಂದ ಹಿಂದೆ ಸರಿದ ಸಾತ್ವಿಕ್‌-ಚಿರಾಗ್ ಜೋಡಿ

ನವದೆಹಲಿ: ಭಾರತ ಸ್ಟಾರ್‌ ಬ್ಯಾಡ್ಮಿಂಟನ್‌ ಡಬಲ್ಸ್ ಜೋಡಿಯಾದ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ(Satwik-Chirag) ಸೈಯ್ಯದ್ ಮೋದಿ ಇಂಟರ್‌ ನ್ಯಾಷನಲ್ ಸೂಪರ್ 300 ಬ್ಯಾಡ್ಮಿಂಟನ್(Syed Modi badminton) ಟೂರ್ನಿಯಿಂದ ಹಿಂದೆಸರಿದಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ ನಂತರ ಸಾತ್ವಿಕ್‌ಗೆ ಭುಜದ ನೋವು ಕಾಡಿತ್ತು ಹೀಗಾಗಿ ಅವರು ಸ್ಪರ್ಧಾತ್ಮಕ ಬ್ಯಾಡ್ಮಿಂಟನ್‌ನಿಂದ ದೂರವಿದ್ದರು. ಕಳೆದ ವಾರ ಚೀನಾ ಮಾಸ್ಟರ್ಸ್‌ ಟೂರ್ನಿ ಮೂಲಕ ಪುನರಾಗಮನ ಮಾಡಿ ಸೆಮಿಫೈನಲ್ ತಲುಪಿದ್ದರು. ಇದೀಗ ಮತ್ತೆ ಗಾಯಕ್ಕೆ ತುತ್ತಾಗಿರುವ ಕಾರಣ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ವಿಶ್ವದ ಮಾಜಿ ಅಗ್ರ ಕ್ರಮಾಂಕದ ಆಟಗಾರರಾಗಿದ್ದ ಕಾರಣ ಸಾತ್ವಿಕ್‌-ಚಿರಾಗ್ ಜೋಡಿಗೆ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ನೀಡಲಾಗಿತ್ತು. ಅಲ್ಲದೆ ಈ ಜೋಡಿ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು.

‘ಸಾತ್ವಿಕ್ ಪೂರ್ಣವಾಗಿ ಚೇತರಿಸಿಲ್ಲ. ಅವರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ಅವರಿಗೆ ತರಬೇತಿ ನೀಡುತ್ತಿದ್ದ ಬಿ.ಸುಮೀತ್ ರೆಡ್ಡಿ ‘ಪಿಟಿಐ’ಗೆ ತಿಳಿಸಿದರು. ಭಾರತದ ತಾರೆಯರಾದ ಪಿ.ವಿ. ಸಿಂಧು ಮತ್ತು ಲಕ್ಷ್ಯ ಸೇನ್‌ ಕಣದಲ್ಲಿದ್ದು ಪ್ರಶಸ್ತಿಯ ಬರ ನೀಗಿಸುವ ಛಲದಲ್ಲಿದ್ದಾರೆ.

ಇದನ್ನೂ ಓದಿ IPL 2025: ʻಅಭಿಮಾನಿಗಳು ತಂಡದ ಆತ್ಮʼ-ಆರ್‌ಸಿಬಿಗೆ ಭಾವನಾತ್ಮಕ ವಿದಾಯ ಹೇಳಿದ ಮೊಹಮ್ಮದ್‌ ಸಿರಾಜ್‌!

ನವದೆಹಲಿ: ಉದ್ದೀಪನ ಸೇವನೆ ಪರೀಕ್ಷೆಗಾಗಿ ಮೂತ್ರ ಮಾದರಿ ನೀಡಲು ನಿರಾಕರಿಸಿ ನಿಯಮ ಉಲ್ಲಂಘನೆ ಮಾಡಿದ ಒಲಿಂಪಿಯನ್‌ ಕುಸ್ತಿಪಟು ಬಜರಂಗ್‌ ಪೂನಿಯಾ(Bajrang Punia) ಅವರಿಗೆ ರಾಷ್ಟ್ರೀಯ ಉದ್ದೀಪನ ನಿಗ್ರಹ ಸಂಸ್ಥೆ (ನಾಡಾ) ನಾಲ್ಕು ವರ್ಷಗಳ ಅಮಾನತು ಶಿಕ್ಷೆ ವಿಧಿಸಿದೆ. ನಾಡಾದ ಡೋಪಿಂಗ್‌ ವಿರೋಧಿ ನಿಯಮಗಳ ಆರ್ಟಿಕಲ್‌ 10.3.1ರ ಉಲ್ಲಂಘನೆಯಿಂದ ಈ ಶಿಕ್ಷೆ ವಿಧಿಸಲಾಗಿದೆ.

ಉದ್ದೀಪನ ಪರೀಕ್ಷೆಗೆ ಮಾದರಿ ನೀಡಲು ನಿರಾಕರಿಸಿದರು ಎಂದು ಕಳೆದ ಏಪ್ರಿಲ್‌ನಲ್ಲಿ ನಾಡಾ, ಬಜರಂಗ್‌ ಅವರನ್ನು ಮೊದಲ ಬಾರಿ ನಿಷೇಧಿಸಿತ್ತು. ಬಳಿಕ ನಿಷೇಧವನ್ನು ತೆಗೆಯಲಾಗಿತ್ತು. ಬಳಿಕ ಜೂನ್‌ನಲ್ಲಿ ಮತ್ತೆ ನಿಷೇಧ ಹೇರಲಾಗಿತ್ತು. ಇದೀಗ ನಾಲ್ಕು ವರ್ಷಗಳ ಅಮಾನತು ಶಿಕ್ಷೆ ವಿಧಿಸಲಾಗಿದೆ.

ನಿಯಮ ಉಲ್ಲಂಘನೆ ಎಂದು ಪರಿಗಣಿಸಿರುವ ನಾಡಾ, ಈ ಹಿಂದೆ ಬಜರಂಗ್‌ ಅವರನ್ನು 2ನೇ ಬಾರಿ ತಾತ್ಕಾಲಿಕವಾಗಿ ಅಮಾನತುಗೊಳಿಸಿತ್ತು. ಆದರೆ ತನ್ನ ಮೇಲಿನ ಅಮಾನತನ್ನು ವಿರೋಧಿಸಿ ಬಜರಂಗ್‌ ನಾಡಾ ಅಧಿಕಾರಿಗಳು ಮೂತ್ರದ ಮಾದರಿ ಕೊಂಡೊಯ್ಯಲು ತಂದಿದ್ದ ಕಿಟ್‌ನ ಅವಧಿ ಮೀರಿತ್ತು. ಇದನ್ನು ನಾನು ಪ್ರಶ್ನಿಸಿದ್ದೆ. ಇದಕ್ಕಾಗಿ ನನ್ನನ್ನು ನಾಡಾ ಗುರಿಯಾಗಿಸಿದೆ ಎಂದು ಆರೋಪಿಸಿ ದೆಹಲಿ ಹೈಕೋರ್ಟ್‌ನ(Delhi High Court) ಮೊರೆ ಹೋಗಿದ್ದರು.