Thursday, 12th December 2024

ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ ಟಿ20 ಸರಣಿಗಳ ವೇಳಾಪಟ್ಟಿ ಪ್ರಕಟ

ನವದೆಹಲಿ: ಬಿಸಿಸಿಐ ಪ್ರವಾಸಿ ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಗಳ ವೇಳಾಪಟ್ಟಿಯನ್ನು  ಪ್ರಕಟಿಸಿದೆ.

ಆಸ್ಟ್ರೇಲಿಯ ವಿರುದ್ಧದ ಪಂದ್ಯಗಳು ಮೊಹಾಲಿ (ಸೆ. 20), ನಾಗ್ಪುರ (ಸೆ. 23) ಮತ್ತು ಹೈದರಾಬಾದ್‌ನಲ್ಲಿ (ಸೆ.25)  ನಡೆಯಲಿವೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಸೆ. 28ರಂದು ತಿರುವನಂತಪುರದಲ್ಲಿ ಆರಂಭವಾಗಲಿದೆ.

ಉಳಿದೆರಡು ಪಂದ್ಯಗಳನ್ನು ಗುವಾಹಟಿ (ಅ. 2) ಮತ್ತು ಇಂದೋರ್‌ನಲ್ಲಿ (ಅ. 4) ಆಡಲಾಗುವುದು. ಲಕ್ನೋ (ಅ. 6), ರಾಂಚಿ (ಅ. 9) ಮತ್ತು ಹೊಸದಿಲ್ಲಿಯಲ್ಲಿ (ಅ. 11) ಏಕದಿನ ಪಂದ್ಯಗಳು ನಡೆಯಲಿವೆ.