Thursday, 19th September 2024

ಪ್ರೇಕ್ಷಕರ ಹಾಜರಿಯಲ್ಲಿ ಟಿ20 ಸರಣಿ: ಬಿಸಿಸಿಐ ಪ್ಲಾನ್‌

ಚೆನ್ನೈ: ಸುದೀರ್ಘ ಕಾಲದ ನಂತರ ಭಾರತದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಯೋಜನೆಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಮರು ಚಾಲನೆ ದೊರೆಯಲಿದೆ.

ಆದರೆ ಕೊರೊನಾ ವೈರಸ್‌ನ ಕಾರಣದಿಂದಾಗಿ  ಸರಣಿಯ ಮೊದಲ ಎರಡು ಪಂದ್ಯಗಳು ಪ್ರೇಕ್ಷಕರ ಗೈರು ಹಾಜರಿಯಲ್ಲೇ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ.

ಟೆಸ್ಟ್ ಸರಣಿ ನಾಲ್ಕು ಪಂದ್ಯಗಳಲ್ಲೂ ಪ್ರೇಕ್ಷಕರ ಅಲಭ್ಯತೆಯಲ್ಲಿಯೇ ಸರಣಿ ಆಯೋಜಿಸಿದರೂ ಚುಟುಕು ಕ್ರಿಕೆಟ್ ಸರಣಿಗೆ ಇದೇ ರೀತಿ ಮುಂದುವರಿಯಲು ಬಿಸಿಸಿಐಗೆ ಇಷ್ಟವಿಲ್ಲ. ಟಿ20 ಕ್ರಿಕೆಟ್ ಸರಣಿಯನ್ನು ಪ್ರೇಕ್ಷಕರ ಹಾಜರಿಯಲ್ಲಿ ಆಯೋಜಿಸಲು ಬಿಸಿಸಿಐ ಉತ್ಸುಕವಾಗಿದೆ.

ಉಭಯ ತಂಡಗಳು ಮೊದಲಿಗೆ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲಿದೆ. ಬಳಿಕ 5 ಪಂದ್ಯಗಳ ಟಿ20 ಸರಣಿ ವಿಶ್ವದ ಬೃಹತ್ ಕ್ರಿಕೆಟ್ ಸ್ಟೇಡಿಯಮ್ ಎಂಬ ಖ್ಯಾತಿಯ ಅಹ್ಮದಾಬಾದ್‌ನ ಮೊಟೆರಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಸರಣಿಗೆ ಪ್ರೇಕ್ಷಕರಿಗೆ ಅವಕಾಶ ನೀಡಲು ಬಿಸಿಸಿಐ ಚಿಂತಿಸುತ್ತಿದೆ. ಈ ಸರಣಿ ಮಾರ್ಚ್ 12ರಿಂದ ಆರಂಭಗೊಳ್ಳಲಿದೆ.

ಸಾಕಷ್ಟು ಕುತೂಹಲದಿಂದ ಕಾಯುತ್ತಿರುವ ಇಂಗ್ಲೆಂಡ್ ವಿರುದ್ಧದ ರೋಚಕ ಟಿ20 ಸರಣಿಗೆ ಪ್ರೇಕ್ಷಕರನ್ನು ಕರೆತರಲು ಬಿಸಿಸಿಐ ಪ್ರಯತ್ನಿಸುತ್ತಿದೆ. 50 ಶೇಕಡಾ ಸಮೀಪದವರೆಗೆ ಭರ್ತಿ ಮಾಡುವ ಯೋಜನೆಯಿದೆ. ಆದರೆ ಅಂತಿಮ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದಿದ್ದಾರೆ.

ಮೊದಲ ಎರಡು ಪಂದ್ಯಗಳು ಚೆನ್ನೈನಲ್ಲಿ ನಡೆಯಲಿದ್ದು, ನಾಯಕ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಮತ್ತು ಇಶಾಂತ್ ಶರ್ಮಾ ತಂಡವನ್ನು ಮರಳಿ ಸೇರಿಕೊಂಡಿದ್ದಾರೆ.

Leave a Reply

Your email address will not be published. Required fields are marked *