Thursday, 12th December 2024

ಟಿ20 ಮಾದರಿಗೆ ಬಾಂಗ್ಲಾದೇಶದ ಕ್ರಿಕೇಟರ್‌ ತಮೀಮ್ ಇಕ್ಬಾಲ್ ನಿವೃತ್ತಿ

ಢಾಕಾ: ಬಾಂಗ್ಲಾದೇಶದ ಹಿರಿಯ ಆಟಗಾರ, ಏಕದಿನ ತಂಡದ ನಾಯಕ ತಮೀಮ್ ಇಕ್ಬಾಲ್ ಅವರು ಅಂತಾರಾಷ್ಟ್ರೀಯ ಟಿ20 ಮಾದರಿಗೆ ರಾಜೀನಾಮೆ ಘೋಷಿಸಿದ್ದಾರೆ.

ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿದ ನಂತರ ತಮೀಮ್ ತನ್ನ ನಿರ್ಧಾರವನ್ನು ಘೋಷಿಸಿದರು.

33 ವರ್ಷದ ತಮೀಮ್ ತಮ್ಮ ಫೇಸ್ ಬುಕ್ ಖಾತೆಯ ಮೂಲಕ ನಿವೃತ್ತಿ ಘೋಷಿಸಿದ್ದಾರೆ.

ತಮೀಮ್ 2020ರ ಮಾರ್ಚ್ ನಲ್ಲಿ ಕೊನೆಯ ಟಿ20 ಪಂದ್ಯವನ್ನಾಡಿದ್ದರು. ಬಳಿಕ ಗಾಯದ ಸಮಸ್ಯೆ ಮತ್ತು ಇತರ ಕಾರಣಗಳಿಂದ ಅವರು ಟಿ20 ತಂಡದಿಂದ ದೂರ ಉಳಿದಿದ್ದರು.

ಬಾಂಗ್ಲಾ ಪರ 78 ಟಿ20 ಪಂದ್ಯಗಳನ್ನಾಡಿರುವ ತಮೀಮ್ ಇಕ್ಬಾಲ್ 1758 ರನ್ ಗಳಿಸಿದ್ದಾರೆ. ಒಂದು ಶತಕ ಮತ್ತು ಏಳು ಅರ್ಧಶತಕಗಳನ್ನು ಬಾರಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಶತಕ ಬಾರಿಸಿದ ಬಂಗ್ಲಾದೇಶದ ಏಕೈಕ ಬ್ಯಾಟರ್ ತಮೀಮ್.