Thursday, 12th December 2024

ತಮೀಮ್ ಇಕ್ಬಾಲ್ ನಿವೃತ್ತಿ ಘೋಷಣೆ

ವದೆಹಲಿ: ಬಾಂಗ್ಲಾ ನಾಯಕ ತಮೀಮ್ ಇಕ್ಬಾಲ್ ಗುರುವಾರ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ.

ತಮ್ಮ 16 ವರ್ಷಗಳ ಅಂತರರಾಷ್ಟ್ರೀಯ ವೃತ್ತಿಜೀವನವನ್ನ ಕೊನೆಗೊಳಿಸುವ ನಿರ್ಧಾರ ಘೋಷಿಸುವಾಗ, 34 ವರ್ಷದ ಆಟಗಾರ ಅಕ್ಷರಶಃ ಕಣ್ಣೀರಿಟ್ಟರು.

“ಅಫ್ಘಾನಿಸ್ತಾನ ವಿರುದ್ಧ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಿತ್ತು, ನಾನು ಇದೀಗ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಪಡೆಯುತ್ತಿದ್ದೇನೆ” ಎಂದು ತಮೀಮ್ ತಿಳಿಸಿದರು.

ಹರಾರೆಯಲ್ಲಿ 2007ರಲ್ಲಿ ಜಿಂಬಾಬ್ವೆ ವಿರುದ್ಧ ಏಕದಿನ ಪಂದ್ಯವಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ತಮೀಮ್, “ಇದು ನನ್ನ ಪಾಲಿಗೆ ಅಂತ್ಯ” ಎಂದರು.