Friday, 22nd November 2024

ಐಸಿಸಿ ಮಹಿಳಾ ವಿಶ್ವಕಪ್ 2022ಗೆ ಟೀಂ ಇಂಡಿಯಾ ಪ್ರಕಟ

#Team India Women

ನವದೆಹಲಿ: ನ್ಯೂಜಿಲ್ಯಾಂಡ್ ನಲ್ಲಿ ಮಾರ್ಚ್ 4 ಮತ್ತು ಏಪ್ರಿಲ್ 3ರ ನಡುವೆ ನಡೆಯಲಿರುವ ಐಸಿಸಿ ಮಹಿಳಾ ವಿಶ್ವಕಪ್ 2022ಕ್ಕೆ 15 ಸದಸ್ಯರ ತಂಡ ವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಗುರುವಾರ ಪ್ರಕಟಿಸಿದೆ.

ಮಿಥಾಲಿ ರಾಜ್ ಭಾರತ ತಂಡವನ್ನು ಮುನ್ನಡೆಸಲಿದ್ದು, ಹರ್ಮನ್ ಪ್ರೀತ್ ಕೌರ್  ವಿಶ್ವಕಪ್ ನಲ್ಲಿ ಉಪನಾಯಕರಾಗಿ ತಂಡದಲ್ಲಿದ್ದಾರೆ. ತಂಡದಿಂದ ಗೈರು ಹಾಜರಾದವರಲ್ಲಿ ವೇಗದ ಬೌಲರ್ ಶಿಖಾ ಪಾಂಡೆ ಮತ್ತು ಫಾರ್ಮ್ ನಲ್ಲಿರುವ ಬ್ಯಾಟರ್ ಜೆಮಿಮಾ ರೊಡ್ರಿಗಸ್ ಸೇರಿದ್ದಾರೆ. ಫೆಬ್ರವರಿಯಲ್ಲಿ ನ್ಯೂಜಿಲ್ಯಾಂಡ್ ನಲ್ಲಿ 5 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.

ಭಾರತವು ಮಾರ್ಚ್ 6 ರಂದು ಮೌಂಟ್ ಮೌಂಗನುಯಿಯಲ್ಲಿರುವ ಪಾಕಿಸ್ತಾನದ ವಿರುದ್ಧ ವಿಶ್ವಕಪ್ ಪಂದ್ಯಾವಳಿ ಪ್ರಾರಂಭಿಸಲಿದೆ. ಮಿಥಾಲಿ ರಾಜ್ 2017 ರಲ್ಲಿ ನಡೆದ ಹಿಂದಿನ ಮಹಿಳಾ ವಿಶ್ವಕಪ್ ನ ಫೈನಲ್ ಗೆ ಭಾರತವನ್ನು ಮುನ್ನಡೆಸಿದರು. ಸೆಮಿ ಫೈನಲ್ ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ ನಂತರ ಭಾರತ ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿತು.

ನ್ಯೂಜಿಲ್ಯಾಂಡ್ ಏಕದಿನ ಮತ್ತು ಮಹಿಳಾ ವಿಶ್ವಕಪ್ ತಂಡ 

ಮಿಥಾಲಿ ರಾಜ್ (ನಾಯಕ), ಹರ್ಮನ್ ಪ್ರೀತ್ ಕೌರ್ (ಉಪನಾಯಕ), ಸ್ಮೃತಿ ಮಂಧಾನಾ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ್ ರಾಣಾ, ಜುಲನ್ ಗೋಸ್ವಾಮಿ, ಪೂಜಾ ವಸ್ತ್ರಕರ್, ಮೇಘನಾ ಸಿಂಗ್, ರೇಣುಕಾ ಸಿಂಗ್ ಠಾಕೂರ್, ತನಿಯಾ ಭಾಟಿಯಾ (ವಿಕೆಟ್ ಕೀಪರ್), ರಾಜೇಶ್ವರಿ ಗಾಯಕವಾಡ್, ಪೂನಮ್ ಯಾದವ್.

ಸ್ಟ್ಯಾಂಡ್ ಬೈ ಆಟಗಾರರು: ಎಸ್. ಮೇಘನಾ, ಏಕ್ತಾ ಬಿಷ್ಟ್, ಸಿಮ್ರಾನ್ ದಿಲ್ ಬಹದ್ದೂರ್.

ನ್ಯೂಜಿಲ್ಯಾಂಡ್ ನಲ್ಲಿ ನಡೆದ ಟಿ20 ಪಂದ್ಯಗಳಿಗೆ ಭಾರತ ತಂಡ

ಹರ್ಮನ್ ಪ್ರೀತ್ ಕೌರ್ (ನಾಯಕ), ಸ್ಮೃತಿ ಮಂಧಾನಾ (ಉಪನಾಯಕ), ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ್ ರಾಣಾ, ಪೂಜಾ ವಸ್ತ್ರಕರ್, ಮೇಘನಾ ಸಿಂಗ್, ರೇಣುಕಾ ಸಿಂಗ್ ಠಾಕೂರ್, ತನಿಯಾ ಭಾಟಿಯಾ (ವಿಕೆಟ್ ಕೀಪರ್), ರಾಜೇಶ್ವರಿ ಗಾಯಕ್ ವಾಡ್, ಪೂನಮ್ ಯಾದವ್, ಏಕ್ತಾ ಬಿಷ್ಟ್, ಎಸ್.ಮೇಘನಾ, ಸಿಮ್ರಾನ್ ದಿಲ್ ಬಹದ್ದೂರ್.