Sunday, 15th December 2024

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್: ಟೀಂ ಇಂಡಿಯಾ ತಂಡ ಪ್ರಕಟ

ಸೌತಾಂಪ್ಟನ್‌: ಇದೇ ತಿಂಗಳ ಜೂ.18ರಿಂದ ಇಂಗ್ಲೆಂಡ್ ವಿರುದ್ಧ ಸೌತಾಂಪ್ಟನ್ʼನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆಯ ಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯಕ್ಕಾಗಿ ಭಾರತ ಮಂಗಳವಾರ ತನ್ನ 15 ಸದಸ್ಯರ ತಂಡವನ್ನ ಪ್ರಕಟಿಸಿದೆ.

ಅಂತಿಯ 15 ಸದಸ್ಯರ ಬಳಗದಲ್ಲಿ ಸ್ಪಿನ್ನರುಗಳಾದ ರವಿಚಂದ್ರನ್‌ ಅಶ್ವಿನ್‌ ಮತ್ತು ರವೀಂದ್ರ ಜಡೇಜಾ, ವಿಕೆಟ್‌ ಕೀಪರ್‌ಗಳಾಗಿ ರಿಷಭ್‌ ಪಂತ್‌ ಮತ್ತು ವೃದ್ದಿಮಾನ್‌, ವೇಗದ ಬೌಲರುಗಳ ಸ್ಥಾನಕ್ಕೆ ಬೂಮ್ರಾ, ಇಶಾಂತ್‌ ಶರ್ಮಾ, ಮೊಹಮ್ಮದ್‌ ಶಮಿ, ಉಮೇಶ್ ಯಾದವ್‌ ಹಾಗೂ ಮೊಹಮ್ಮದ್‌ ಸಿರಾಜ್‌ ಸ್ಥಾನ ಪಡೆದಿದ್ದಾರೆ. ‌

ಉಳಿದಂತೆ, ಆರಂಭಿಕ ಸ್ಥಾನಕ್ಕೆ ಶುಬ್ಮನ್‌ ಗಿಲ್‌ ಹಾಗೂ ರೋಹಿತ್‌ ಶರ್ಮಾ ಫಿಟ್‌ ಆಗಿದ್ದು, ಮಯಾಂಕ್‌ ಅಗರ್ವಾಲ್‌ ಹಾಗೂ ಕೆ.ಎಲ್‌.ರಾಹುಲ್‌ ಸ್ಥಾನ ವಂಚಿತರಾಗಿದ್ದಾರೆ.

ತಂಡ ಇಂತಿದೆ: ಶುಬ್ಮನ್‌ ಗಿಲ್‌, ರೋಹಿತ್‌ ಶರ್ಮಾ,  ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾ), ಅಜಿಂಕ್ಯ ರಹಾನೆ (ಉ.ನಾ), ಹನುಮ ವಿಹಾರಿ, ರಿಷಭ್‌ ಪಂತ್‌, ವೃದ್ದಿಮಾನ್‌ ಸಹಾ, ರವೀಂದ್ರ ಜಡೇಜಾ, ರವಿಚಂದ್ರನ್‌ ಅಶ್ವಿನ್‌, ಮೊಹಮ್ಮದ್‌ ಶಮಿ, ಉಮೇಶ್‌ ಯಾದವ್‌, ಇಶಾಂತ್‌ ಶರ್ಮಾ, ಮೊಹಮ್ಮದ್‌ ಸಿರಾಜ್‌, ಜಸ್ಪ್ರೀತ್‌ ಬುಮ್ರಾ.