Thursday, 3rd October 2024

48ನೇ ವರ್ಷಕ್ಕೆ ಕಾಲಿರಿಸಿದ ‘ಗ್ರೇಟ್‌ ವಾಲ್’ ರಾಹುಲ್ ದ್ರಾವಿಡ್

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ 3ನೇ ಟೆಸ್ಟ್‌ ಪಂದ್ಯದಲ್ಲಿ ಸೋಲಿನಂಚಿಗೆ ಹೋಗಿದ್ದ ಫಲಿತಾಂಶವನ್ನು ಭಾರತ ‘ಡ್ರಾ’ದೆಡೆಗೆ ತಿರುಗಿಸಿ ಕೊಂಡಿದೆ. ಜನವರಿ 11ಕ್ಕೆ ರಾಹುಲ್ ದ್ರಾವಿಡ್ 48ನೇ ವರ್ಷಕ್ಕೆ ಕಾಲಿರಿಸುತ್ತಿದ್ದಾರೆ.

ಈ ಮೂಲಕ ಭಾರತೀಯ ಕ್ರಿಕೆಟ್‌ ಕಂಡ ‘ಗ್ರೇಟ್‌ ವಾಲ್’ ಖ್ಯಾತಿಯ ಭಾರತದ ಮಾಜಿ ಕ್ರಿಕೆಟರ್, ಕನ್ನಡಿಗ ರಾಹುಲ್ ದ್ರಾವಿಡ್ ಅವರಿಗೆ ಟೀಮ್ ಇಂಡಿಯಾ ವಿಶೇಷ ಉಡುಗೊರೆ ನೀಡಿದೆ.

ಇದೇ ದಿನ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಮುಕ್ತಾಯಗೊಂಡ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. 1973ರ ಜನವರಿ 11ರಂದು ಜನಿಸಿರುವ ದ್ರಾವಿಡ್ ಅವರ ಹುಟ್ಟು ಹಬ್ಬದ ದಿನವೇ ಸೋಲುವ ಪಂದ್ಯವನ್ನು ಡ್ರಾ ಮಾಡಿ ಕೊಂಡಿರುವ ಭಾರತದ ಸಾಧನೆಗೆ ಮೆಚ್ಚಿ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಟ್ವೀಟ್ ಮಾಡಿದೆ.