Saturday, 23rd November 2024

ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್: ದ್ವಿತೀಯ ಸ್ಥಾನಕ್ಕೆ ಕುಸಿದ ಟೀಂ ಇಂಡಿಯಾ

ದುಬೈ: ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಅಂತಿಮ ಹಂತಕ್ಕೆ ಬಂದಿದ್ದು, ಐಸಿಸಿ ತಂಡಗಳ ಪರಿಷ್ಕೃತ ಅಂಕಪಟ್ಟಿ ಬಿಡುಗಡೆ ಮಾಡಿದೆ.

ಕೊರೊನಾ ಸಾಂಕ್ರಾಮಿಕ ಕಾರಣದಿಂದಾಗಿ ಸ್ಥಗಿತವಾಗಿದ್ದ ಕ್ರಿಕೆಟ್ ಚಟುವಟಿಕೆ ಮತ್ತೆ ಪುನಾರಂಭ ಆಗಿದೆಯಾದರೂ, ಐಸಿಸಿಯ ಮೊಟ್ಟ ಮೊದಲ ಟೆಸ್ಟ್ ಚಾಂಪಿಯನ್ ಷಿಪ್ ಗೆ ತೀವ್ರ ಹಿನ್ನಡೆಯಾಗಿತ್ತು.

ಮತ್ತೆ ಟೂರ್ನಿಯ ಸಮಯಾವಧಿ ವಿಸ್ತರಣೆ ಮಾಡಲು ಸಾಧ್ಯವಿಲ್ಲದಿರುವುದರಿಂದ ಐಸಿಸಿ ಟೆಸ್ಟ್ ಚಾಂಪಿಯನ್ ಷಿಪ್ ಅನ್ನು ಪೂರ್ಣಗೊಳಿಸಲು ನಿರ್ಧರಿಸಿದೆ. ಹೀಗಾಗಿ ತಂಡಗಳು ಗಳಿಸಿರುವ ಅಂಕಗಳ ಆಧಾರದ ಮೇಲೆ ಫೈನಲ್ ತಂಡಗಳ ನಿರ್ಧಾರ ಮಾಡಲು ಐಸಿಸಿ ಚಿಂತನೆಯಲ್ಲಿ ತೊಡಗಿತ್ತು. ಇದೀಗ ಐಸಿಸಿ ತಂಡಗಳ ಪರಿಷ್ಕೃತ ಅಂಕ ಪಟ್ಟಿ ಬಿಡುಗಡೆ ಮಾಡಿದೆ. ಐಸಿಸಿ ಬಿಡುಗಡೆ ಮಾಡಿರುವ ನೂತನ ಪಟ್ಟಿಯ ಅನ್ವಯ ಈ ಹಿಂದೆ ಎರಡನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ಅಗ್ರ ಸ್ಥಾನಕ್ಕೇರಿದ್ದು, ಅಗ್ರ ಸ್ಥಾನದಲ್ಲಿದ್ದ ಭಾರತ ತಂಡ 2ನೇ ಸ್ಥಾನಕ್ಕೆ ಕುಸಿದಿದೆ.

ಪರಿಷ್ಕೃತ ಅಂಕಪಟ್ಟಿಯಲ್ಲಿ ಈ ಹಿಂದೆ ಅಗ್ರ ಸ್ಥಾನದಲ್ಲಿದ್ದ ಭಾರತ ದ್ವಿತೀಯ ಸ್ಥಾನಕ್ಕೆ ಕುಸಿದಿದೆ. ದ್ವಿತೀಯ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ಅಗ್ರ ಸ್ಥಾನಕ್ಕೇರಿದೆ.

ಸದ್ಯ ಪಾಯಿಂಟ್ಸ್‌ ಪಟ್ಟಿಯಲ್ಲಿ ಭಾರತ ತಂಡವು 360 ಅಂಕಗಳಿಕೆಯೊಂದಿಗೆ ಗರಿಷ್ಠ ಅಂಕಗಳಿಸಿದೆಯಾದರೂ, ಶೇಕಡಾವರು ಅಂಕ ಗಳಿಕೆ ಲೆಕ್ಕಾಚಾರದಲ್ಲಿ ಶೇ.75.0 ಅಂಕಗಳೊಂದಿಗೆ ದ್ವಿತೀಯ ಸ್ಥಾನಕ್ಕೆ ಕುಸಿದಿದೆ.

ಇನ್ನು ಅಗ್ರ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಒಟ್ಟಾರೆ 296 ಅಂಕಗಳೊಂದಿಗೆ ಶೇಕಡಾವಾರು 82.2 ಅಂಕಗಳೊಂದಿಗೆ ಅಗ್ರ ಸ್ಥಾನ ದಲ್ಲಿದೆ. ಉಳಿದಂತೆ ಶೇ.60.8ರಷ್ಟು ಅಂಕಗಳೊಂದಿಗೆ ಇಂಗ್ಲೆಂಡ್ ತಂಡ ಮೂರನೇ ಸ್ಥಾನದಲ್ಲಿದ್ದು, ಶೇ.50ರಷ್ಟು ಗಳಿಕೆಯೊಂದಿಗೆ ನ್ಯೂಜಿಲೆಂಡ್ 4 ಮತ್ತು ಶೇ.39.5 ಅಂಕಗಳಿಕೆಯೊಂದಿಗೆ ಪಾಕಿಸ್ತಾನ 5ನೇ ಸ್ಥಾನದಲ್ಲಿದೆ.