Friday, 10th January 2025

Yuzvendra Chahal: ಧನಶ್ರೀ ವರ್ಮಾ ಜತೆ ವಿಚ್ಛೇದನದ ವದಂತಿ ಬಗ್ಗೆ ಯುಜುವೇಂದ್ರ ಚಹಲ್‌ ಪ್ರತಿಕ್ರಿಯೆ!

Team India spinner Yuzvendra Chahal breaks silence amid rumours of divorce with Dhanashree Verma

ನವದೆಹಲಿ: ತಮ್ಮ ಪತ್ನಿ ಧನಶ್ರೀ ವರ್ಮಾ ಅವರೊಂದಿಗೆ ವಿಚ್ಛೇದನದ ವದಂತಿ ಬಗ್ಗೆ ಇದೇ ಮೊದಲ ಬಾರಿ ಭಾರತದ ಹಿರಿಯ ಸ್ಪಿನ್ನರ್‌ ಯುಜ್ವೇಂದ್ರ ಚಹಲ್‌ (Yuzvendra Chahal) ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯ ಸ್ಟೋರಿಯಲ್ಲಿ ತಮ್ಮ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ತಮ್ಮ ಹಾಗೂ ತಮ್ಮ ಪತ್ನಿ ನಡುವೆ ಯಾವುದೇ ರೀತಿಯ ವಿಚ್ಛೇದನ ಪ್ರಕ್ರಿಯೆ ನಡೆದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಕಳೆದ ಹಲವು ದಿನಗಳ ಹಿಂದೆ ಯುಜ್ವೇಂದ್ರ ಚಹಲ್‌ ಹಾಗೂ ಧನಶ್ರೀ ವರ್ಮ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಒಬ್ಬರಿಗೊಬ್ಬರು ಅನ್‌ಫಾಲೋ ಮಾಡಿದ್ದರು. ಈ ವಿಷಯ ಬಹಿರಂಗವಾಗುತ್ತಿದ್ದಂತೆ ಸೋಶಿಯಲ್‌ ಮೀಡಿಯಾದಲ್ಲಿ ಯುಜ್ವೇಂದ್ರ ಚಹಲ್‌ ಮತ್ತು ಧನಶ್ರೀ ವರ್ಮಾ ದಂಪತಿ ವಿಚ್ಛೇದನ ಪಡೆದಿದ್ದಾರೆಂದು ಚರ್ಚೆಗಳು ನಡೆದಿದ್ದವು. ಈ ಬಗ್ಗೆ ಹಲವು ಸುದ್ದಿ ಮಾಧ್ಯಮಗಳು ಕೂಡ ವರದಿಗಳನ್ನು ಮಾಡಿದ್ದವು.

ವಿಚ್ಛೇದನ ವದಂತಿ ಬಗ್ಗೆ ಚಹಲ್‌

ಇದೀಗ ಯುಜ್ವೇಂದ್ರ ಚಹಲ್‌ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಸ್ಪಷ್ಟತೆ ನೀಡಿದ್ದಾರೆ. “ನನ್ನ ಎಲ್ಲಾ ಅಭಿಮಾನಿಗಳ ಅಚಲವಾದ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ, ಇಲ್ಲದಿದ್ದರೆ ನಾನು ಇಲ್ಲಿಯವರೆಗೆ ಬರುತ್ತಿರಲಿಲ್ಲ. ಆದರೆ ಈ ಪಯಣ ತುಂಬಾ ದೂರವಾಗಿದೆ!!! ನನ್ನ ದೇಶ, ನನ್ನ ತಂಡ ಮತ್ತು ನನ್ನ ಅಭಿಮಾನಿಗಳಿಗಾಗಿ ಇನ್ನೂ ಅನೇಕ ನಂಬಲಾಗದ ಓವರ್‌ಗಳು ಉಳಿದಿವೆ!!! ನಾನು ಒಬ್ಬ ಕ್ರೀಡಾಪಟು ಎಂದು ಹೆಮ್ಮೆಪಡುತ್ತಿರುವಾಗ, ನಾನೊಬ್ಬ ಮಗ, ಸಹೋದರ ಮತ್ತು ಸ್ನೇಹಿತ ಎಂಬುದನ್ನು ಮರೆಯಬಾರದು. ಇತ್ತೀಚಿನ ಕೆಲ ಕುತೂಹಲಕಾರಿ ಬೆಳವಣಿಗೆಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಇದು ವಿಶೇಷವಾಗಿ ನನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದೆ. ಆದಾಗ್ಯೂ, ಕೆಲವು ಸೋಶಿಯಲ್‌ ಮೀಡಿಯಾ ಪೋಸ್ಟ್‌ಗಳನ್ನು ಗಮನಿಸಿದ್ದೇನೆ. ಇದು ನಿಜವಾಗಿರಬಹುದು ಅಥವಾ ಸುಳ್ಳಾಗಿರಬಹುದು,” ಎಂದು ತಮ್ಮ ಸ್ಟೋರಿಯಲ್ಲಿ ಬರೆದಿದ್ದಾರೆ.

“ಮಗನಾಗಿ, ಸಹೋದರನಾಗಿ ಮತ್ತು ಸ್ನೇಹಿತನಾಗಿ, ನಾನು ಎಲ್ಲರಿಗೂ ಈ ಊಹಾಪೋಹಗಳಿಗೆ ಒಳಗಾಗಬೇಡಿ ಎಂದು ವಿನಮ್ರವಾಗಿ ವಿನಂತಿಸುತ್ತೇನೆ. ಏಕೆಂದರೆ ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ಅಪಾರ ನೋವನ್ನುಂಟುಮಾಡಿದೆ. ಯಾವಾಗಲೂ ಎಲ್ಲರಿಗೂ ಒಳ್ಳೆಯದನ್ನು ಬಯಸಿ, ಯಾವುದೇ ಶಾರ್ಟ್‌ಕಟ್‌ಗಳು ಇಲ್ಲದೆ ಸಮರ್ಪಣೆ ಮತ್ತು ಕಠಿಣ ಪರಿಶ್ರಮದ ಮೂಲಕ ಯಶಸ್ಸು ಪಡೆಯಬೇಕೆಂಬ ನನ್ನ ಕುಟುಂಬದ ಮೌಲ್ಯಗಳು ನನಗೆ ಸಾಕಷ್ಟು ಕಲಿಸಿವೆ. ದೈವಿಕ ಆಶೀರ್ವಾದಗಳೊಂದಿಗೆ ಈ ಮೌಲ್ಯಗಳಿಗೆ ನಾನು ಬದ್ಧನಾಗಿರುತ್ತೇನೆ. ಸಹಾನುಭೂತಿ ಇಲ್ಲದೆ, ನಾನು ನಿಮ್ಮ ಪ್ರೀತಿ ಮತ್ತು ಬೆಂಬಲವನ್ನು ಪಡೆಯಲು ಶಾಶ್ವತವಾಗಿ ಶ್ರಮಿಸುತ್ತೇನೆ,” ಎಂದು ಯುಜ್ವೇಂದ್ರ ಚಹಲ್‌ ಹೇಳಿದ್ದಾರೆ.

ಸೋಶಿಯಲ್‌ ಮೀಡಿಯಾ ಪೋಸ್ಟ್‌ಗಳನ್ನು ಟೀಕಿಸಿದ್ದ ಧನಶ್ರೀ ವರ್ಮಾ

“ಕಳೆದ ಕೆಲವು ದಿನಗಳು ನನ್ನ ಮತ್ತು ನನ್ನ ಕುಟುಂಬಕ್ಕೆ ನಂಬಲಾಗದಷ್ಟು ಕಠಿಣವಾಗಿವೆ. ನಿರಾಧಾರ ಬರವಣಿಗೆ, ಸತ್ಯವನ್ನು ಪರಿಶೀಲಿಸದಿರುವುದು ಮತ್ತು ದ್ವೇಷವನ್ನು ಹರಡುವ ಮುಖರಹಿತ ಟ್ರೋಲ್‌ಗಳಿಂದ ನನ್ನ ಖ್ಯಾತಿಯ ಪಾತ್ರ ಹತ್ಯೆಯಾಗಿದೆ,” ಎಂದು ಧನಶ್ರೀ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯ ಸ್ಟೋರಿಯಲ್ಲಿ ಬರೆದಿದ್ದಾರೆ.

“ಹೆಸರು ಮಾಡಲು ಹಾಗೂ ನನ್ನ ಸಮಗ್ರತೆಗಾಗಿ ನಾನು ಹಲವು ವರ್ಷಗಳಿಂದ ಶ್ರಮಿಸಿದ್ದೇನೆ. ನನ್ನ ಮೌನವು ದೌರ್ಬಲ್ಯದ ಸಂಕೇತವಲ್ಲ; ಆದರೆ ಶಕ್ತಿಯ ಸಂಕೇತವಾಗಿದೆ. ನಕಾರಾತ್ಮಕತೆಯು ಆನ್‌ಲೈನ್‌ನಲ್ಲಿ ಸುಲಭವಾಗಿ ಹರಡುತ್ತದೆ, ಆದರೆ ಇತರರನ್ನು ಮೇಲಕ್ಕೆತ್ತಲು ಧೈರ್ಯ ಮತ್ತು ಸಹಾನುಭೂತಿ ಬೇಕಾಗುತ್ತದೆ. ನಾನು ನನ್ನ ಸತ್ಯದ ಮೇಲೆ ಕೇಂದ್ರೀಕರಿಸಲು ಮತ್ತು ನನ್ನ ಮೌಲ್ಯಗಳನ್ನು ಹಿಡಿದಿಟ್ಟುಕೊಂಡು ಮುಂದುವರಿಯಲು ಆಯ್ಕೆ ಮಾಡುತ್ತೇನೆ. ಸಮರ್ಥನೆಯ ಅಗತ್ಯವಿಲ್ಲದೆ ಸತ್ಯವು ಎತ್ತರದಲ್ಲಿದೆ,” ಎಂದು ಧನಶ್ರೀ ಸ್ಪಷ್ಟಪಡಿಸಿದ್ದರು.

ಈ ಸುದ್ದಿಯನ್ನು ಓದಿ: R Ashwin: ‘ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ’- ಆರ್‌ ಅಶ್ವಿನ್‌ ವಿವಾದಾತ್ಮಕ ಹೇಳಿಕೆ!

Leave a Reply

Your email address will not be published. Required fields are marked *