ಬ್ರಿಸ್ಬೇನ್: ಆಸ್ಟ್ರೇಲಿಯಾ ಮತ್ತು ಭಾರತ ನಡುವಣ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಹಣಾಹಣಿ ಬ್ರಿಸ್ಬೇನ್‌ನಲ್ಲಿ ಆರಂಭ ವಾಗಿದೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೈನ್, ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ನಿರೀಕ್ಷೆಯಂತೆ ಮೊಹಮ್ಮದ್ ಸಿರಾಜ್ ಬೌಲಿಂಗ್ ಆರಂಭಿಸಿದ್ದು, ಡೇವಿಡ್ ವಾರ್ನರ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ನಂತರದಲ್ಲಿ ಶಾರ್ದೂಲ್ ಠಾಕೂರ್ ಮತ್ತೊಂದು ವಿಕೆಟ್ ಪಡೆದುಕೊಂಡಿದ್ದಾರೆ. ಮೊದಲಾರ್ಧದಲ್ಲಿ ಪಂದ್ಯದ ಮೇಲೆ ಆಸೀಸ್ ಹಿಡಿತ ಸಾಧಿಸಿತು.
ಮೂರನೇ ಕ್ರಮಾಂಕದ ಮಾರ್ಕಸ್ ಲ್ಯಾಬಶ್ಗನ್ನೆ ಆಕರ್ಷಕ ಶತಕ ಸಿಡಿಸಿ, ತಂಡಕ್ಕೆ ಚೇತರಿಕೆಯ ಟಾನಿಕ್ ನೀಡಿದರು. ಇವರಿಗೆ ವಿಕೆಟ್ ಕೀಟಪ್ ಬ್ಯಾಟ್ಸಮನ್ ಸಾಥ್ ನೀಡಿದರು. ಇವರಿಬ್ಬರನ್ನು ಪಾದಾರ್ಪಣೆ ವೇಗಿ ಟಿ.ನಟರಾಜನ್ ಪೆವಿಲಿಯನ್ ಗಟ್ಟಿದರು.
ಈ ನಡುವೆ ವೇಗಿ ನವದೀಪ್ ಸೈನಿ ಗಾಯಾಳಾಗಿದ್ದು, ಮೈದಾನದಿಂದ ಹೊರ ನಡೆದರು. ಅವರ ಓವರುಗಳ ಖಾತೆಯನ್ನು ಉಪನಾಯಕ ರೋಹಿತ್ ಶರ್ಮಾ ಪೂರ್ಣಗೊಳಿಸಿದರು. ಇತ್ತೀಚಿನ ವರದಿ ಪ್ರಕಾರ, ಆಸ್ಟ್ರೇಲಿಯಾ 75 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 235 ರನ್ ಗಳಿಸಿ ಆಟವಾಡುತ್ತಿದೆ. ಕ್ಯಾಮರೂನ್ ಗ್ರೀನ್ ಹಾಗೂ ನಾಯಕ ಟಿಮ್ ಪೇನ್ ಇನ್ನಿಂಗ್ಸ್ ಮುಂದುವರಿಸಿದ್ದಾರೆ.
ಸಿರಾಜ್ ಬೌಲಿಂಗ್ ಮೇಲೆ ನಿರೀಕ್ಷೆ
ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದು, ಟೀಮ್ ಇಂಡಿಯಾ ಭರವಸೆಯ ಬೌಲರ್‌ಗಳು ಆಸಿಸ್ ತಂಡವನ್ನು ಕಟ್ಟಿಹಾಕುವ ಯತ್ನದಲ್ಲಿದ್ದಾರೆ. ಈ ಪೈಕಿ ಮೊಹಮ್ಮದ್ ಸಿರಾಜ್ ಮೇಲೆ ಟೀಮ್ ಇಂಡಿಯಾ ಹೆಚ್ಚಿನ ನಿರೀಕ್ಷೆ ಇರಿಸಿಕೊಂಡಿದೆ.
ಬೂಮ್ರಾ ಆಡದಿರುವ ಕಾರಣ, ವೇಗಿ ಸಿರಾಜ್, ಟೀಂ ಇಂಡಿಯಾ ಬೌಲಿಂಗ್ ವಿಭಾಗದ ನೇತೃತ್ವ ವಹಿಸಿದ್ದಾರೆ. ಪಂದ್ಯವನ್ನು ಉತ್ತಮ ಹಂತಕ್ಕೆ ತಂದು, 1-1 ಸಮಬಲ ಸಾಧಿಸಿರುವುದರಿಂದ ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದ್ದಾಗಿದೆ.