Friday, 22nd November 2024

ಟೀಂ ಇಂಡಿಯಾದ ಇಂಗ್ಲೆಂಡ್‌ ಪ್ರವಾಸ ವೇಳಾಪಟ್ಟಿ ಪ್ರಕಟ

ಮುಂಬೈ: ಭಾರತೀಯ ಕ್ರಿಕೆಟ್ ತಂಡ ಮುಂದಿನ ವರ್ಷ ಜುಲೈನಲ್ಲಿ ಇಂಗ್ಲೆಂಡ್‌ನಲ್ಲಿ 6 ಸೀಮಿತ ಓವರ್‌ಗಳ ಕ್ರಿಕೆಟ್ ಪಂದ್ಯಗಳನ್ನ ಆಡಲಿದೆ.

ಭಾರತ ತಂಡವು ಪ್ರಸ್ತುತ ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯಗಳ ಸರಣಿಯನ್ನ ಆಡುತ್ತಿದೆ. ಐದನೇ ಮತ್ತು ಅಂತಿಮ ಟೆಸ್ಟ್ ಮ್ಯಾಂಚೆಸ್ಟರ್ʼನಲ್ಲಿ ಸೆಪ್ಟೆಂಬರ್ 10 ರಿಂದ ನಡೆಯಲಿದೆ.

ಈ ಬಾರಿ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ, ಪ್ರವಾಸದ ಸಮಯ ಪರಿಗಣಿಸಿ, ಅದನ್ನ ಟೆಸ್ಟ್ ಕ್ರಿಕೆಟ್ ಮತ್ತು ಸೀಮಿತ ಓವರ್‌ಗಳ ಸರಣಿಯಾಗಿ ವಿಂಗಡಿಸಲಾಗಿದೆ. ಇಂಗ್ಲೆಂಡ್ ಪುರುಷರ ತಂಡ ಜುಲೈನಲ್ಲಿ ಭಾರತದ ವಿರುದ್ಧ ಸೀಮಿತ ಓವರ್‌ಗಳ ತವರಿನ ಸರಣಿಯನ್ನ ಆಡುತ್ತದೆ ಮತ್ತು ನಂತರ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.

ಭಾರತವು ಜುಲೈ 1 ರಂದು ಓಲ್ಡ್ ಟ್ರಾಫರ್ಡ್ʼನಲ್ಲಿ ಟಿ20 ಅಂತರಾಷ್ಟ್ರೀಯ ಪಂದ್ಯದೊಂದಿಗೆ ಪ್ರವಾಸ ಆರಂಭಿಸಲಿದೆ. ಟ್ರೆಂಟ್ ಬ್ರಿಡ್ಜ್ (ಜುಲೈ 3) ಮತ್ತು ಅಗಿಯಾಸ್ ಬೌಲ್ (ಜುಲೈ 6) ನಲ್ಲಿ ಇನ್ನೆರಡು ಟಿ20 ಪಂದ್ಯಗಳು ನಡೆಯಲಿವೆ. ಏಕದಿನ ಸರಣಿಯು ಎಡ್ಜ್‌ಬಾಸ್ಟನ್ (ಜುಲೈ 9), ಓವಲ್ (ಜುಲೈ 12) ಮತ್ತು ಲಾರ್ಡ್ಸ್ (ಜುಲೈ 14)ನಲ್ಲಿ ನಡೆಯಲಿದೆ.

ಜೋ ರೂಟ್ ಅವರ ಟೆಸ್ಟ್ ತಂಡವು ನ್ಯೂಜಿಲೆಂಡ್ ವಿರುದ್ಧ ಲಾರ್ಡ್ಸ್ʼನಲ್ಲಿ ಜೂನ್ 2 ರಂದು ಟೆಸ್ಟ್ ಸರಣಿ ಆರಂಭಿಸಲಿದ್ದು, ಉಳಿದ ಎರಡು ಟೆಸ್ಟ್ ಪಂದ್ಯಗಳು ಟ್ರೆಂಟ್ ಬ್ರಿಡ್ಜ್ʼನಲ್ಲಿ (ಜೂನ್ 10-14) ಮತ್ತು ಹೆಡಿಂಗ್ಲೆಯಲ್ಲಿ (ಜೂನ್ 23-27) ನಡೆಯಲಿದೆ.

ಭಾರತ : 2022ರಲ್ಲಿ ಇಂಗ್ಲೆಂಡ್ ಪ್ರವಾಸದ ವೇಳಾಪಟ್ಟಿ

ಮೊದಲ ಟಿ 20: ಜುಲೈ 1 ರಂದು, ಓಲ್ಡ್ ಟ್ರಾಫರ್ಡ್
2 ನೇ ಟಿ 20: 3 ಜುಲೈ, ಟ್ರೆಂಟ್ಬ್ರಿಡ್ಜ್
3 ನೇ ಟಿ 20: 6 ನೇ ಜುಲೈ, ಅಗಿಯಾಸ್ ಬೌಲ್

ಏಕದಿನ ಸರಣಿ
1 ನೇ ಏಕದಿನ: ಎಡ್ಜ್‌ಬಾಸ್ಟನ್‌ನಲ್ಲಿ 9 ಜುಲೈ
2 ನೇ ಏಕದಿನ: 12 ಜುಲೈ, ಓವಲ್ ನಲ್ಲಿ
3 ನೇ ಏಕದಿನ: 14 ಜುಲೈ, ಲಾರ್ಡ್ಸ್ ನಲ್ಲಿ.