Friday, 22nd November 2024

ಟೆಸ್ಟ್ Ranking: ಕೊಹ್ಲಿ ಸ್ಥಾನ ಹಂಚಿಕೊಂಡ ಕೇನ್ ವಿಲಿಯಮ್ಸನ್

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟೆಸ್ಟ್ ನೂತನ ರ್‍ಯಾಂಕಿಂಗ್‌ನಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಜಿಗಿತ ಕಂಡಿದ್ದಾರೆ.

ವಿಲಿಯಮ್ಸನ್ ಭಾರತದ ನಾಯಕ ವಿರಾಟ್ ಕೊಹ್ಲಿ ಜೊತೆ 2ನೇ ಶ್ರೇಯಾಂಕ ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯಾ ಪ್ರವಾಸ ದಲ್ಲಿರುವ ಕೊಹ್ಲಿ ಇನ್ನಷ್ಟೇ ಟೆಸ್ಟ್ ಸರಣಿ ಆಡಬೇಕಿದೆ. ಉತ್ತಮ ಪ್ರದರ್ಶನ ನೀಡಿದರೆ ರ್‍ಯಾಂಕಿಂಗ್‌ನಲ್ಲಿ ಮೇಲೇರುವ ಸಾಧ್ಯತೆ ಯಿದೆ. ಇನ್ನೊಂದೆಡೆ ಟೆಸ್ಟ್‌ ಆಲ್ ರೌಂಡರ್ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿದ್ದ ವೆಸ್ಟ್ ಇಂಡೀಸ್ ನಾಯಕ ಜೇಸನ್ ಹೋಲ್ಡರ್ ನಂ.1 ಸ್ಥಾನವನ್ನು ಇಂಗ್ಲೆಂಡ್‌ನ ಆಲ್ ರೌಂಡರ್ ಬೆನ್‌ ಸ್ಟೋಕ್ಸ್‌ಗೆ ಬಿಟ್ಟುಕೊಟ್ಟಿದ್ದಾರೆ.

ಟೆಸ್ಟ್‌ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್ 911 ಪಾಯಿಂಟ್ಸ್ ಹೊಂದಿದ್ದಾರೆ. ದ್ವಿತೀಯ ಸ್ಥಾನಿ ವಿಲಿಯಮ್ಸನ್ ಮತ್ತು ಕೊಹ್ಲಿ ಇಬ್ಬರೂ 886 ಪಾಯಿಂಟ್ಸ್‌ ಗಳಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್‌ನಲ್ಲಿ ವಿಲಿಯಮ್ಸನ್ 251 ರನ್ ಗಳಿಸಿದ್ದರು.

ಟೆಸ್ಟ್‌ ರ್‍ಯಾಂಕಿಂಗ್‌ನ ಬೌಲಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್, ನ್ಯೂಜಿಲೆಂಡ್‌ನ ನೀಲ್ ವ್ಯಾಗ್ನರ್ ಮತ್ತು ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ಕ್ರಮವಾಗಿ ಆರಂಭಿಕ 3 ಸ್ಥಾನಗಳಲ್ಲಿದ್ದಾರೆ. ಆಲ್’ರೌಂಡರ್‌ಗಳಲ್ಲಿ ಬೆನ್ ಸ್ಟೋಕ್ಸ್, ಜೇಸನ್ ಹೋಲ್ಡರ್ ಮತ್ತು ಭಾರತದ ರವೀಂದ್ರ ಜಡೇಜಾ ಅಗ್ರ 3ರಲ್ಲಿದ್ದಾರೆ.