Monday, 16th September 2024

ಟೋಕಿಯೊ ಒಲಿಂಪಿಕ್ಸ್‌ ಮುಖ್ಯಸ್ಥ ಯೋಶಿರೊ ಮೊರಿ ರಾಜೀನಾಮೆ?

ಟೋಕಿಯೊ: ಮಹಿಳೆಯರು ಸಭೆ ಸಮಾರಂಭಗಳಲ್ಲಿ ಹೆಚ್ಚು ಹೊತ್ತು ಮಾತನಾಡುತ್ತಾರೆ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಟೋಕಿಯೊ ಒಲಿಂಪಿಕ್ಸ್‌ ಮುಖ್ಯಸ್ಥ, ಜಪಾನ್‌ ಮಾಜಿ ಪ್ರಧಾನಿ ಯೋಶಿರೊ ಮೊರಿ ರಾಜೀನಾಮೆ ನೀಡಲಿದ್ದಾರೆ ಎಂದು ವರದಿಯಾಗಿದೆ.

ಫೆಬ್ರುವರಿ ಮೊದಲ ವಾರದಲ್ಲಿ ಜಪಾನಿನ ಒಲಿಂಪಿಕ್ಸ್‌ ಮಂಡಳಿಯ ಸಭೆಯಲ್ಲಿ ಮಾತನಾಡಿದ್ದ ಮೊರಿ, ಮಹಿಳೆಯರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಯೋಶಿರೊ ಹೇಳಿಕೆ ಬಗ್ಗೆ ಟೆನಿಸ್ ತಾರೆ ನವೊಮಿ ಒಸಾಕ, ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಸಂಗೀತಗಾರ ರೂಚಿ ಸಕಮೊಟೊ ಸೇರಿದಂತೆ ಹಲವು ಕ್ರೀಡಾಪಟುಗಳು ಆಕ್ಷೇಪ ವ್ಯಕ್ತಪಡಿಸಿದ್ದರು.

ಒಲಿಂಪಿಕ್ಸ್‌ ಪದಕ ವಿಜೇತರು, ಜಪಾನ್‌ನ ಕ್ರೀಡಾ ಅಧಿಕಾರಿಗಳು ಮತ್ತು ಟೋಕಿಯೊ ಒಲಿಂಪಿಕ್ಸ್ ಕಾರ್ಯಕರ್ತರು ಮೊರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ರಾಜೀನಾಮೆಗಾಗಿ ಆನ್‌ಲೈನ್‌ನಲ್ಲಿ ನಡೆದ ಅಭಿಯಾನಕ್ಕೆ 10 ಲಕ್ಷಕ್ಕೂ ಅಧಿಕ ಮಂದಿ ಸಹಿ ಮಾಡಿದ್ದರು.

 

Leave a Reply

Your email address will not be published. Required fields are marked *