Saturday, 14th December 2024

US Open: ಸೆಮಿ ಫೈನಲ್‌ ತಲುಪಿದ ಅರಿನಾ ಸಬಲೆಂಕಾ

US Open

ನ್ಯೂಯಾರ್ಕ್‌: ಭುಜದ ಗಾಯದ ನೋವಿನಿಂದ ವಿಂಬಲ್ಡನ್‌ನಿಂದ ಹೊರಗುಳಿದಿದ್ದ ಬಲ್ಗೇರಿಯಾದ ಅರಿನಾ ಸಬಲೆಂಕಾ(Aryna Sabalenka) ಅವರು ಪ್ರಸಕ್ತ ಸಾಗುತ್ತಿರುವ ಅಮೆರಿಕ ಓಪನ್‌ನಲ್ಲಿ(US Open) ಸೆಮಿಫೈನಲ್‌ ತಲುಪಿದ್ದಾರೆ. ಬುಧವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ 2ನೇ ಶ್ರೇಯಾಂಕದ ಸಬಲೆಂಕಾ ಚೀನಾದ 7ನೇ ಶ್ರೇಯಾಂಕದ ಜೆಂಗ್‌ ಕ್ವಿನ್ವೆನ್‌ ವಿರುದ್ಧ6-1, 6-2 ನೇರ ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದರು.ಶುಕ್ರವಾರ ನಡೆಯುವ ಸೆಮಿಫೈನಲ್‌ ಪಂದ್ಯದಲ್ಲಿ ಸಬಲೆಂಕಾ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಕೊಕೊ ಗಾಫ್ ಅವರನ್ನು ಮಣಿಸಿದ ಆತಿಥೇಯ ನಾಡಿನ ಎಮ್ಮಾ ನವಾರೊ ಸವಾಲು ಎದುರಿಸಲಿದ್ದಾರೆ.

ಪ್ಯಾರಿಸ್‌ ಒಲಿಂಪಿಕ್‌ ಚಾಂಪಿಯನ್‌ ಆಗಿದ್ದ ಜೆಂಗ್‌ ಕ್ವಿನ್ವೆನ್‌ ಅವರ ಆಟ ಯುಎಸ್‌ ಓಪನ್‌ನಲ್ಲಿ ನಡೆಯಲಿಲ್ಲ.ಸಬಲೆಂಕಾ ಅವರ ಬಲಿಷ್ಠ ಸರ್ವ್‌ಗಳ ಮುಂದೆ ಸಂಪೂರ್ಣ ನರ್ವಸ್‌ ಆಗಿ ಸೋಲು ಕಂಡರು. ಮೊದಲ ಸೆಟ್‌ನಲ್ಲಿ ಕೇವಲ ಒಂದು ಏಸ್‌ ಮಾತ್ರ ಗೆದ್ದರು. ದ್ವಿತೀಯ ಸುತ್ತಿನಲ್ಲಿ 2 ಏಸ್‌ ಗೆದ್ದರು. ಸಬಲೆಂಕಾ ಇತ್ತೀಚೆಗೆ ಮುಕ್ತಾಯ ಕಂಡಿದ್ದ ಸಿನ್ಸಿನಾಟಿ ಓಪನ್‌ ಟೆನಿಸ್‌(ATP Cincinnati Open) ಪಂದ್ಯಾವಳಿಯಲ್ಲಿ ಒಂದೇ ಒಂದು ಸೆಟ್‌ ಕಳೆದುಕೊಳ್ಳದೆ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದರು. ಇದೀಗ ವರ್ಷದ ಕೊನೆಯ ಗ್ರಾನ್ ಸ್ಲಾಮ್ ಪ್ರಶಸ್ತಿಯನ್ನು ಎತ್ತಿ ಹಿಡಿಯುವ ಆತ್ಮವಿಶ್ವಾಸದಲ್ಲಿ ಗೆಲುವಿನ ಓಟವನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ US Open: ಮಿಶ್ರ ಡಬಲ್ಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಬೋಪಣ್ಣ ಜೋಡಿ

https://x.com/usopen/status/1831129855221498275

ಮಂಗಳವಾರ ನಡೆದಿದ್ದ ಮಹಿಳಾ ಸಿಂಗಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ವಿಶ್ವದ ನಂ.1 ಆಟರ್ಗಾತಿ ಪೋಲೆಂಡ್‌ನ‌ ಇಗಾ ಸ್ವಿಯಾಟೆಕ್‌ ರಷ್ಯಾದ ಲುಡ್ಮಿಲಾ ಸಾಮ್ಸನೋವಾ ಅವರನ್ನು 6-4, 6-1 ಅಂತರದಿಂದ ಮಣಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದರು. ಇದು ಸ್ವಿಯಾಟೆಕ್‌ ಅವರ  100ನೇ ಗ್ರ್ಯಾನ್‌ಸ್ಲಾಮ್‌ ಪಂದ್ಯವಾಗಿತ್ತು. ಈ ಸ್ಮರಣೀಯ ಪಂದ್ಯದಲ್ಲಿ ಅವರು ಗೆಲುವು ಸಾಧಿಸಿದ್ದು ವಿಶೇಷ. ನಾಳೆ(ಗುರುವಾರ) ನಡೆಯುವ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸ್ವಿಯಾಟೆಕ್‌ ಅಮೆರಿಕದ ಜೆಸ್ಸಿಕಾ ಪೆಗುಲಾ ವಿರುದ್ಧ ಕಣಕ್ಕಿಳಿಯಲಿದ್ದಾರೆ.