Friday, 22nd November 2024

ಹಾಕಿ ವಿಶ್ವಕಪ್‌ ಪದಕ ವಿಜೇತ ವರೀಂದರ್ ಸಿಂಗ್ ಇನ್ನಿಲ್ಲ

ಚಂಡೀಗಢ: ಭಾರತದ ಕೆಲವು ಸ್ಮರಣೀಯ ವಿಜಯಗಳಲ್ಲಿ ಅವಿಭಾಜ್ಯ ಅಂಗವಾ ಗಿದ್ದ ಒಲಿಂಪಿಕ್ ಮತ್ತು ವಿಶ್ವಕಪ್ ಪದಕ ವಿಜೇತ ವರೀಂದರ್ ಸಿಂಗ್ ಅವರು ಪಂಜಾಬ್‌ನ ಜಲಂಧರ್‌ನಲ್ಲಿ ನಿಧನರಾಗಿದ್ದಾರೆ.

75 ವರ್ಷದ ವರೀಂದರ್ ಸಿಂಗ್ ಅವರು 1975ರಲ್ಲಿ ಕೌಲಾಲಂಪುರದಲ್ಲಿ ನಡೆದ ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ತಂಡದ ಭಾಗ ವಾಗಿದ್ದರು. ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಭಾರತಕ್ಕೆ ಏಕೈಕ ಚಿನ್ನದ ಪದಕವಾಗಿ ಉಳಿದಿದೆ.

ಸಿಂಗ್ ಅವರು 1972 ರ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. 1973 ರ ಆಮ್ಸ್ಟರ್‌ಡ್ಯಾಮ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಅಷ್ಟೇ ಅಲ್ಲದೇ, 1974 ಮತ್ತು 1978 ರ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದರು. ಇನ್ನೂ 1975ರ ಮಾಂಟ್ರಿಯಲ್ ಒಲಿಂಪಿಕ್ಸ್‌ನಲ್ಲಿಯೂ ಸ್ಪರ್ಧಿಸಿದ್ದರು.

2007 ರಲ್ಲಿ ವರೀಂದರ್ ಅವರಿಗೆ ಪ್ರತಿಷ್ಠಿತ ಮೇಜರ್‌ ಧ್ಯಾನ್ ಚಂದ್ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಯಿತು. ಸಿಂಗ್ ನಿಧನಕ್ಕೆ ಹಾಕಿ ಇಂಡಿಯಾ ಸಂತಾಪ ಸೂಚಿಸಿದೆ.