Thursday, 12th December 2024

Viral Video: ಭಾರತದ ಕಳಪೆ ಫೀಲ್ಡಿಂಗ್‌ ಕಂಡು ನಗು ತಾಳಲಾರದೆ ಮುಖ ಮುಚ್ಚಿಕೊಂಡ ಪಾಕ್‌ ಆಟಗಾರ್ತಿ

Aliya Riaz

ದುಬೈ: ಭಾನುವಾರ ನಡೆದಿದ್ದ ಮಹಿಳಾ ಟಿ20 ವಿಶ್ವಕಪ್‌(ICC Womens T20 World Cup) ಟೂರ್ನಿಯ ಡಬಲ್‌ ಹೆಡರ್‌ನ ಮೊದಲ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ(India Women vs Pakistan Women) ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಆಶಾ ಶೋಭನಾ(Asha Sobhana) ಸುಲಭದ ಕ್ಯಾಚ್‌ ಒಂದನ್ನು ಕೈಚೆಲ್ಲಿದ್ದರು. ಇದನ್ನು ಕಂಡು ಡಗೌಟ್‌ನಲ್ಲಿ ಕುಳಿತಿದ್ದ ಪಾಕ್‌ ತಂಡದ ಆಲ್‌ರೌಂಡರ್‌ ಅಲಿಯಾ ರಿಯಾಜ್(Aliya Riaz) ನಗು ತಾಳಲಾರದೆ ಮುಖ ಮುಚ್ಚಿಕೊಂಡು ನಕ್ಕಿದ್ದಾರೆ. ಈ ವಿಡಿಯೊ ವೈರಲ್‌(Viral Video) ಆಗಿದೆ.

ಅರುಂಧತಿ ರೆಡ್ಡಿ ಓವರ್‌ನಲ್ಲಿ ಪಾಕ್‌ ಆರಂಭಿಕ ಆಟಗಾರ್ತಿ ಮುನೀಬಾ ಅಲಿ(Muneeba Ali) ರ‍್ಯಾಂಪ್ ಶಾಟ್ ಆಡಲು ಯತ್ನಿಸಿದರು. ಚೆಂಡು ನೇರವಾಗಿ ಆಶಾ ಕೈಗೆ ಬಿತ್ತು. ಸುಲಭದಲ್ಲಿ ಹಿಡಿಯಬಹುದಾದ ಈ ಕ್ಯಾಚ್‌ ಅನ್ನು ಆಶಾ ಕೈಚೆಲ್ಲಿದರು, ಇದನ್ನು ಕಂಡ ಅಲಿಯಾ ರಿಯಾಜ್ ಒಂದೇ ಸಮನೆ ನಗಲು ಆರಂಭಿಸಿಸಿದರು. ಮೈದಾನದ ಕ್ಯಾಮೆರಾದಲ್ಲಿ ಅಲಿಯಾ ನಗುತ್ತಿರುವ ದೃಶ್ಯ ತೋರಿಸಿದರೂ ಕೂಡ ಅವರು ನಗು ತಾಳಲಾರದೆ ಮುಖ ಮುಚ್ಚಿಕೊಂಡು ನಗು ಮುಂದುವರಿಸಿದರು.

ದುಬೈ ಇಂಟರ್‌ನ್ಯಾಶನಲ್‌ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ತಾನ 8 ವಿಕೆಟ್‌ಗೆ 105 ರನ್‌ ಬಾರಿಸಿದರೆ, ಭಾರತ18.5  ಓವರ್‌ಗಳಲ್ಲಿ4 ವಿಕೆಟಿಗೆ 106 ರನ್‌ ಬಾರಿಸಿ ಗೆಲುವಿನ ನಗೆ ಬೀರಿತ್ತು.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರೂ ಕೂಡ ಅಂಕಪಟ್ಟಿಯಲ್ಲಿ ಪಾಕಿಸ್ತಾನಕ್ಕಿಂತ ಕೆಳಗಿನ ಸ್ಥಾನದಲ್ಲಿದೆ. ಸೆಮಿಫೈನಲ್‌ ಪ್ರವೇಶಿಸಬೇಕಿದ್ದರೆ ಭಾರತ ಮುಂದೆ ಆಡಲಿರುವ 2 ಪಂದ್ಯಗಳಲಿಯೂ ದೊಡ್ಡ ಅಂಯರದಿಂದ ಗೆಲ್ಲಬೇಕಿದೆ. ಸಣ್ಣ ಅಂತರದ ಗೆಲುವು ಸಾಧಿಸಿ ಪ್ರಯೋಜನವಿಲ್ಲ. ಸದ್ಯ ಭಾರತ -1.217 ನೆಟ್‌ ರನ್‌ರೇಟ್‌ನೊಂದಿಗೆ 4ನೇ ಸ್ಥಾನದಲ್ಲಿದೆ. ನ್ಯೂಜಿಲ್ಯಾಂಡ್‌ ಅಗ್ರಸ್ಥಾನ, ಆಸೀಸ್‌ ಮತ್ತು ಪಾಕಿಸ್ತಾನ ಕ್ರಮವಾಗಿ 2ನೇ ಮತ್ತು 3ನೇ ಸ್ಥಾನದಲ್ಲಿದೆ. ಭಾರತದ ಮುಂದಿನ ಎದುರಾಳಿ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ.

ಇದನ್ನೂ ಓದಿ Yogi Adityanath: ನಗು ಮೊಗದೊಂದಿಗೆ ಕ್ರಿಕೆಟ್‌ ಆಡಿದ ಯೋಗಿ ಆದಿತ್ಯನಾಥ್‌; ಇಲ್ಲಿದೆ ವಿಡಿಯೊ

ಮುಂದಿನ ಪಂದ್ಯಕ್ಕೆ ಕೌರ್‌ ಅನುಮಾನ

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕತ್ತು ನೋವಿನ ಗಾಯಕ್ಕೆ ತುತ್ತಾಗಿ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ಮೈದಾನ ತೊರೆದಿದ್ದ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಮುಂದಿನ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ. ಒಂದೊಮ್ಮೆ ಅವರು ಲಂಕಾ ವಿರುದ್ಧದ ಪಂದ್ಯದಿಂದ ಹೊರಗುಳಿದರೆ, ಉಪನಾಯಕಿ ಸ್ಮೃತಿ ಮಂಧಾನ ತಂಡವನ್ನು ಹಂಗಾಮಿ ನಾಯಕಿಯಾಗಿ ಮುನ್ನಡೆಸಬಹುದು. ಲಂಕಾ ವಿರುದ್ಧದ ಪಂದ್ಯ ಬುಧವಾರ ನಡೆಯಲಿದೆ.