ಕಾನ್ಪುರ: ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಸೋಮವಾರ (ಸೆಪ್ಟೆಂಬರ್ 30) ತಮ್ಮ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿದ್ದಾರೆ. ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ (IND vs BAN) ನಡುವಿನ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಭಾರತದ ಮಾಜಿ ನಾಯಕ ಅಸಾಮಾನ್ಯ ಸಾಧನೆ ಮಾಡಿದ್ದಾರೆ.
To-Do List:
— Royal Challengers Bengaluru (@RCBTweets) September 30, 2024
SHATTERING RECORDS 🫡
<end of list>
Another day, another VK milestone. Fastest to 2️⃣7️⃣,0️⃣0️⃣0️⃣ International Runs. ⚡️#PlayBold #TeamIndia #INDvBAN #ViratKohli pic.twitter.com/zahBAGlwJo
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 27,000 ರನ್ ಪೂರೈಸಿದ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಕಾನ್ಪುರದಲ್ಲಿ ಪಾತ್ರರಾಗಿದ್ದಾರೆ. ಈ ಹಿಂದೆ ಸಚಿನ್ ತೆಂಡೂಲ್ಕರ್ (Sachin Tendulkar) ಈ ದಾಖಲೆ ಬರೆದಿದ್ದರು. ಭಾರತದ ಮಾಜಿ ಬ್ಯಾಟರ್f 2007 ರಲ್ಲಿ ತಮ್ಮ 623 ನೇ ಇನ್ನಿಂಗ್ಸ್‌ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27,000 ರನ್ ಗಳಿಸಿದ್ದರು. ವಿರಾಟ್ ಕೊಹ್ಲಿ ತಮ್ಮ 594 ನೇ ಇನ್ನಿಂಗ್ಸ್‌ನಲ್ಲಿ ಈ ಮೈಲಿಗಲ್ಲನ್ನು ತಲುಪಿದ್ದಾರೆ.
ಸಚಿನ್ ತೆಂಡೂಲ್ಕರ್, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಮತ್ತು ಶ್ರೀಲಂಕಾದ ಕುಮಾರ ಸಂಗಕ್ಕಾರ ಬಳಿಕ 27,000 ಅಂತರರಾಷ್ಟ್ರೀಯ ರನ್ ಗಳಿಸಿದ ನಾಲ್ಕನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾದರು. ಸಂಗಕ್ಕಾರ ತಮ್ಮ 648 ನೇ ಇನ್ನಿಂಗ್ಸ್ ನಲ್ಲಿ ಈ ಮೈಲಿಗಲ್ಲನ್ನು ತಲುಪಿದರೆ, ಪಾಂಟಿಂಗ್ 650 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದರು.
ಸಕ್ರಿಯ ಕ್ರಿಕೆಟಿಗರಲ್ಲಿ ಈ ಮೈಲಿಗಲ್ಲನ್ನು ಸಾಧಿಸಿದ ಏಕೈಕ ಆಟಗಾರ ಕೊಹ್ಲಿ. ಕಳೆದ ವರ್ಷ ಕೊಹ್ಲಿ 25,000 ಮತ್ತು 26,000 ಅಂತರರಾಷ್ಟ್ರೀಯ ರನ್ ಗಳಿಸಿದ ವೇಗದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಅತಿ ವೇಗವಾಗಿ 27,000 ಅಂತಾರಾಷ್ಟ್ರೀಯ ರನ್ ಗಳಿಸಿದ ಆಟಗಾರರ ಪಟ್ಟಿ ಇಲ್ಲಿದೆ:
- ವಿರಾಟ್ ಕೊಹ್ಲಿ- 594 ಇನ್ನಿಂಗ್ಸ್
- ಸಚಿನ್ ತೆಂಡೂಲ್ಕರ್- 623 ಇನ್ನಿಂಗ್ಸ್
- ಕುಮಾರ ಸಂಗಕ್ಕಾರ- 648 ಇನ್ನಿಂಗ್ಸ್
- ರಿಕಿ ಪಾಂಟಿಂಗ್- 650 ಇನ್ನಿಂಗ್ಸ್
ಭಾರತದ ತ್ವರಿತ ಬ್ಯಾಟಿಂಗ್
ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಅತಿವೇಗದಲ್ಲಿ ಆಡಿ 285 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿದೆ. ಮಳೆ ಮತ್ತು ಒದ್ದೆಯಾದ ಔಟ್ ಫೀಲ್ಡ್ ನಿಂದಾಗಿ ಟೆಸ್ಟ್ ಪಂದ್ಯದ ಎರಡು ಮತ್ತು ಮೂರನೇ ದಿನದಂದು ಆಡ ನಡೆಯದ ಕಾರಣ ಪಂದ್ ಕುತೂಹಲ ಮೂಡಿಸಿದೆ.
ನಾಲ್ಕನೇ ದಿನದಾಟದ ಆರಂಭಕ್ಕೆ ಬಾಂಗ್ಲಾದೇಶ 3 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿತ್ತು. ಮೊಮಿನುಲ್ ಹಕ್ ಅಜೇಯ ಶತಕ ಗಳಿಸಿದರೂ, ಅವರಿಗೆ ಇನ್ನೊಂದು ತುದಿಯಿಂದ ಬೆಂಬಲ ಸಿಗಲಿಲ್ಲ. ಅಂತಿಮವಾಗಿ ಬಾಂಗ್ಲಾದೇಶ 233 ರನ್ಗಳಿಗೆ ಆಲೌಟ್ ಆಯಿತು. ನಂತರ ಭಾರತದ ಆರಂಭಿಕರು ಬ್ಯಾಟ್ ನಿಂದ ಮಿಂಚಿದರು.
ಇದನ್ನೂ ಓದಿ: Ravindra Jadeja : 3000 ರನ್ 300 ವಿಕೆಟ್; ಹೊಸ ದಾಖಲೆ ಬರೆದ ರವೀಂದ್ರ ಜಡೇಜಾ
ನಾಯಕ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಕೇವಲ ಮೂರು ಓವರ್‌ಗಳಲ್ಲಿ ಭಾರತವನ್ನು 51 ರನ್‌ಗಳಿಗೆ ಕೊಂಡೊಯ್ದರು. ರೋಹಿತ್ 11 ಎಸೆತಗಳಲ್ಲಿ 23 ರನ್ ಗಳಿಸಿ ನಿರ್ಗಮಿಸುವ ಮೊದಲು ಈ ಜೋಡಿ ಮೊದಲ ವಿಕೆಟ್‌ಗೆ 55 ರನ್ ಸೇರಿಸಿತು. ಜೈಸ್ವಾಲ್ ಕೇವಲ 51 ಎಸೆತಗಳಲ್ಲಿ 72 ರನ್ ಸಿಡಿಸಿ ಔಟಾದರು. ಶುಬ್ಮನ್ ಗಿಲ್ 39 ರನ್ ಗಳಿಸಿದರೆ, ರಿಷಭ್ ಪಂತ್ ಕೇವಲ 9 ರನ್ ಗಳಿಸಲಷ್ಟೇ ಶಕ್ತರಾದರು. ಕೊಹ್ಲಿ 47 ರನ್ ಬಾರಿಸಿದ್ದರೆ ಕೆ. ಎಲ್ ರಾಹುಲ್ 68 ರನ್ ಬಾರಿಸಿ ಮಿಂಚಿದ್ದಾರೆ.