Friday, 22nd November 2024

‌Virat Kohli: ಬೆಂಗಾಳಿ ಮಾತನಾಡಿದ ವಿರಾಟ್‌ ಕೊಹ್ಲಿ; ವಿಡಿಯೊ ವೈರಲ್

Virat Kohli

ಕಾನ್ಪುರ: ಕಾನ್ಪುರದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳ ಅಂತರದಿಂದ ಗೆದ್ದು ಸರಣಿಯನ್ನು ಕ್ಲೀನ್‌ ಸ್ವೀಪ್‌ ಸಾಧನೆಗೈದಿತ್ತು. ಈ ಪಂದ್ಯದ ಬಳಿಕ ಬಾಂಗ್ಲಾದೇಶದ ಸ್ಪಿನ್ನರ್ ಮೆಹಿದಿ ಹಸನ್ ಮಿರಾಜ್(Mehidy Hasan Miraz) ಅವರು ವಿರಾಟ್‌ ಕೊಹ್ಲಿಗೆ(Virat Kohli) ಬ್ಯಾಟ್‌ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವೇಳೆ ಕೊಹ್ಲಿ ಬೆಂಗಾಳಿಯಲ್ಲಿ(Kohli Speaks Bengali) ಮಾತನಾಡಿದ್ದಾರೆ. ಈ ವಿಡಿಯೊ ವೈರಲ್‌ ಆಗಿದೆ.

ಮೆಹಿದಿ ಹಸನ್ ಅವರು ತಮ್ಮದೇ ಕಂಪನಿಯಲ್ಲಿ ತಯಾರಾದ ಬ್ಯಾಟ್‌ ಅನ್ನು ತಮ್ಮ ನೆಚ್ಚಿನ ಆಟಗಾರನಾದ ಕೊಹ್ಲಿಗೆ ಉಡುಗೊರೆಯಾಗಿ ನೀಡಿದರು. ಬ್ಯಾಟ್‌ ಸ್ವೀಕರಿಸಿದ ವಿರಾಟ್‌ ಕೊಹ್ಲಿ ಬೆಂಗಾಲಿಯಲ್ಲಿ ಪ್ರತಿಕ್ರಿಯಿಸಿದರು. “ಖೂಬ್ ಭಲೋ ಆಚಿ (ಇದು ತುಂಬಾ ಚೆನ್ನಾಗಿದೆ)” ಎಂದು ಮಿರಾಜ್ ಅವರಿಗೆ ಬ್ಯಾಟ್ ನೀಡಿದ್ದಕ್ಕೆ ನಗುನಗುತ್ತಾ ಕೊಹ್ಲಿ ಧನ್ಯವಾದ ತಿಳಿಸಿದರು. ಇದೇ ವೇಳೆ ಕೊಹ್ಲಿ “ವಿಶ್ ಯು ಆಲ್ ದಿ ಬೆಸ್ಟ್. ಒಳ್ಳೆ ಕೆಲಸವನ್ನು ಮುಂದುವರಿಸಿ ಎಂದು ಕೊಹ್ಲಿ ಸಲಹೆ ನೀಡಿದರು. ಈ ಹಿಂದೆ ರೋಹಿತ್‌ ಶರ್ಮ ಅವರಿಗೂ ಮೆಹಿದಿ ಹಸನ್ ಬ್ಯಾಟ್‌ ಗಿಫ್ಟ್‌ ನೀಡಿದ್ದರು.

“ನನಗೆ ಮೆಹಿದಿ ಬಹಳ ಹಿಂದಿನಿಂದಲೂ ಗೊತ್ತು. ಆತ ಪ್ರತಿಭಾನ್ವಿತ ಕ್ರಿಕೆಟಿಗ. ಅವರು ತಮ್ಮ ಸ್ನೇಹಿತರ ಜತೆಗೆ ಸೇರಿಕೊಂಡು ತನ್ನದೇ ಆದ ಬ್ಯಾಟ್ ಕಂಪನಿಯನ್ನು ಪ್ರಾರಂಭಿಸಿದ್ದಕ್ಕಾಗಿ ನಾನು ಆತನ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ. ಅವರಿಗೆ ಶುಭ ಹಾರೈಸುತ್ತೇನೆ. ದೇವರು ಇನ್ನಷ್ಟು ಯಶಸ್ಸು ಮತ್ತು ಈ ಕಂಪನಿ ವಿಶ್ವದೆಲ್ಲೆಡೆ ಖ್ಯಾತಿ ಪಡೆಯಲಿ” ಎಂದು ವಿರಾಟ್‌ ಹಾರೈಸಿದರು.

ಇದನ್ನೂ ಓದಿ Viral News: ಇನ್‌ಕಮ್ ಸರ್ಟಿಫಿಕೇಟ್‌ನಲ್ಲಿ 2 ರೂ. ಮುದ್ರಣ; ಅಧಿಕಾರಿಯ ತಪ್ಪಿಗೆ ಬಡ ಕುಟುಂಬದ ವಿದ್ಯಾರ್ಥಿಗೆ ಸ್ಕಾಲರ್‌ಶಿಪ್‌ ನಷ್ಟ!

ಇದೇ ಪಂದ್ಯದಲ್ಲಿ ಟೆಸ್ಟ್‌ ಮತ್ತು ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಬಾಂಗ್ಲಾದೇಶದ ಹಿರಿಯ ಆಲ್‌ರೌಂಡರ್‌ ಶಕೀಬ್‌ ಅಲ್‌ ಹಸನ್‌(Shakib Al Hasan) ಅವರಿಗೆ ವಿರಾಟ್‌ ಕೊಹ್ಲಿ(Virat Kohli ) ತಮ್ಮ ಬ್ಯಾಟ್‌ ಉಡುಗೊರೆಯಾಗಿ(Virat Kohli gifts bat) ನೀಡಿದ್ದರು. ಕೊಹ್ಲಿ ಮತ್ತು ಶಕೀಬ್‌ ಈ ಹಿಂದೆ ಹಲವು ಬಾರಿ ಪಂದ್ಯವನ್ನಾಡುವಾಗ ಮೈದಾನದಲ್ಲಿ ವಾಗ್ವಾದ ನಡೆಸಿದ್ದರೂ ಕೂಡ ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳದ ಕೊಹ್ಲಿ ಶ್ರೇಷ್ಠ ಕ್ರಿಕೆಟಿಗ ಶಕೀಬ್‌ಗೆ ತಮ್ಮ ಬ್ಯಾಟ್ ನೀಡಿ ಕ್ರೀಡಾಸ್ಫೂರ್ತಿ ಮೆರೆದರು. ಕಾನ್ಪುರ ಟೆಸ್ಟ್‌ ಆರಂಭಕ್ಕೂ ಮುನ್ನ ಶಕೀಬ್‌ ತಮ್ಮ ಟೆಸ್ಟ್‌ ನಿವೃತ್ತಿ ಘೋಷಿಸಿದ್ದರು.