ಬೆಂಗಳೂರು: ಐಪಿಎಲ್ 18ನೇ ಆವೃತ್ತಿಯ ಎರಡು ದಿನಗಳ ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯ ಕಂಡಿದ್ದು ಎಲ್ಲ 10 ಫ್ರಾಂಚೈಸಿಗಳು ಬಲಿಷ್ಠ ತಂಡವನ್ನು ಕಟ್ಟಿದೆ. 62 ವಿದೇಶಿಯರ ಸಹಿತ ಒಟ್ಟು 182 ಆಟಗಾರರು 2 ದಿನಗಳ ಹರಾಜಿನಲ್ಲಿ ಬಿಕರಿಯಾದರು. 2025ರ ಮಾರ್ಚ್ 14ರಿಂದ ಮೇ 25ರವರೆಗೆ ಟೂರ್ನಿ ನಡೆಯಲಿದೆ. ಇದೀಗ ಆರ್ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ(Virat Kohli) ಮತ್ತೆ ನಾಯಕನಾಗಲಿದ್ದಾರೆ ಎನ್ನಲಾಗಿದೆ.
ಹರಾಜಿಗೂ ಮುನ್ನ ಕನ್ನಡಿಗ ಕೆ.ಎಲ್ ರಾಹುಲ್ ಕೂಡ ಆರ್ಸಿಬಿ ತಂಡಕ್ಕೆ ಬರಲಿದ್ದಾರೆ, ಅವರೇ ತಂಡದ ನಾಯಕನಾಗಲಿದ್ದಾರೆ ಎನ್ನಲಾಗಿತ್ತು. ಅಭಿಮಾನಿಗಳು ಕೂಡ ರಾಹುಲ್ ತವರಿನ ತಂಡಕ್ಕೆ ಬರಲಿದ್ದಾರೆ ಎಂದು ಕಾದು ಕುಳಿತಿದ್ದರು. ಆದರೆ ಆರ್ಸಿಬಿ ಅವರನ್ನು ಖರೀದಿಯೇ ಮಾಡಲಿಲ್ಲ. ರಾಹುಲ್14 ಕೋಟಿ ಮೊತ್ತಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾದರು. ಸದ್ಯ ಆರ್ಸಿಬಿಯಲ್ಲಿ ಭಾರತೀಯ ಮೂಲದ ಸ್ಟಾರ್ ಆಟಗಾರರಾಗಿ ಕಾಣಿಸಿಕೊಂಡಿರುವುದು ವೇಗಿ ಭುವನೇಶ್ವರ್ ಕುಮಾರ್ ಮತ್ತು ವಿರಾಟ್ ಕೊಹ್ಲಿ, ವಿದೇಶಿ ಆಟಗಾರರ ಪೈಕಿ ಫಿಲ್ ಸಾಲ್ಟ್ ಮತ್ತು ಟಿಮ್ ಡೇವಿಡ್. ಮೂಲಗಳ ಪ್ರಕಾರ ಕೊಹ್ಲಿಯೇ ಆರ್ಸಿಬಿಗೆ ಮತ್ತೆ ನಾಯಕನಾಗಲಿದ್ದಾರೆ ಎನ್ನಲಾಗಿದೆ.
ವಿರಾಟ್ ಕೊಹ್ಲಿ 2013ರಲ್ಲಿ ಆರ್ಸಿಬಿಯ ಪೂರ್ಣ ಪ್ರಮಾಣದ ನಾಯಕನಾಗಿ ನೇಮಕಗೊಂಡಿದ್ದರು. 2021ರ ತನಕ ಅವರು ಆರ್ಸಿಬಿಯನ್ನು ಮುನ್ನಡೆಸಿದ್ದರು. ಭಾರತ ತಂಡದ ಮೂರು ಮಾದರಿಯ ನಾಯಕತ್ವದ ಒತ್ತಡದಿಂದ ಅವರು ಐಪಿಎಲ್ ನಾಯಕತ್ವದಿಂದ ಕೆಳಗಿಳಿದಿದ್ದರು. ಇದೀಗ ಅವರಿ ಭಾರತ ತಂಡದ ನಾಯಕನಾಗಿಲ್ಲ ಜತೆಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೂ ವಿದಾಯ ಹೇಳಿದ್ದಾರೆ. ಒತ್ತಡ ರಹಿತವಾಗಿರುವ ಅವರು ಮತ್ತೆ ಆರ್ಸಿಬಿ ನಾಯಕನಾದರೂ ಅಚ್ಚರಿಯಿಲ್ಲ. ಕಳೆದ ಬಾರಿಯ ಆವೃತ್ತಿಯಲ್ಲಿ ಡು ಪ್ಲೆಸಿಸ್ ಅಲಭ್ಯದ ವೇಳೆ ಕೊಹ್ಲಿ ಉಸ್ತುವಾರಿ ನಾಯಕನಾಗಿ ಕೆಲವು ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದರು.
ಕೊಹ್ಲಿ ನಾಯಕತ್ವದಲ್ಲಿ ಒಟ್ಟು 140 ಪಂದ್ಯಗಳನ್ನು ಆಡಿದ್ದ ಆರ್ಸಿಬಿ 66 ಪಂದ್ಯಗಳನ್ನು ಜಯಿಸಿದೆ. 70 ಪಂದ್ಯಗಳಲ್ಲಿ ಸೋಲು ಕಂಡಿದೆ. ಐಪಿಎಲ್ ಇತಿಹಾಸದಲ್ಲಿ ವಿನ್ನಿಂಗ್ಸ್ ಸರಾಸರಿಯಲ್ಲಿ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರ ನಾಯಕತ್ವದ ಸರಾಸರಿ ಗೆಲುವು ಶೇ. 46.15 ರಷ್ಟಿದೆ. ದಾಖಲೆ ಧೋನಿ ಹೆಸರಿನಲ್ಲಿದೆ. ಧೋನಿ ನಾಯಕತ್ವದ ಗೆಲುವಿನ ಸರಾಸರಿ 60.38 ರಷ್ಟಿದೆ.
ಇದನ್ನೂ ಓದಿ Unsold Players: ಮೆಗಾ ಹರಾಜಿನಲ್ಲಿ ಅನ್ಸೋಲ್ಡ್ ಆಟಗಾರರ ಪಟ್ಟಿ ಹೀಗಿದೆ
ಆರ್ಸಿಬಿ ತಂಡ
ವಿರಾಟ್ ಕೊಹ್ಲಿ(ರಿಟೇನ್), ರಜತ್ ಪಾಟೀದಾರ್(ರಿಟೇನ್), ಯಶ್ ದಯಾಳ್(ರಿಟೇನ್), ಜೋಶ್ ಹ್ಯಾಸಲ್ವುಡ್ (12.50 ಕೋಟಿ), ಫಿಲ್ ಸಾಲ್ಟ್ (11.50 ಕೋಟಿ), ಜಿತೇಶ್ ಶರ್ಮ (11 ಕೋಟಿ), ಲಿಯಾಮ್ ಲಿವಿಂಗ್ಸ್ಟೋನ್ (8.75 ಕೋಟಿ), ರಸಿಕ್ ಸಲಾಂ (6 ಕೋಟಿ), ಸುಯಶ್ ಶರ್ಮ (2.60 ಕೋಟಿ). ಭುವನೇಶ್ವರ್ ಕುಮಾರ್ (10.75 ಕೋಟಿ), ಕೃನಾಲ್ ಪಾಂಡ್ಯ (5.75 ಕೋಟಿ), ಟಿಮ್ ಡೇವಿಡ್ (3 ಕೋಟಿ), ಜೇಕಬ್ ಬೆಥೆಲ್ (2.60 ಕೋಟಿ), ದೇವದತ್ ಪಡಿಕ್ಕಲ್ (2 ಕೋಟಿ), ನುವಾನ್ ತುಷಾರ (1.60 ಕೋಟಿ), ರೊಮಾರಿಯೊ ಶೆರ್ಡ್ (1.50 ಕೋಟಿ), ಸ್ವಪ್ನಿಲ್ ಸಿಂಗ್ (50 ಲಕ್ಷ), ಮನೋಜ್ ಭಾಂಡಗೆ (30 ಲಕ್ಷ), ಸ್ವಸ್ತಿಕ್ ಚಿಕರ (30 ಲಕ್ಷ), ಮೋಹಿತ್ ರಾಥೀ (30 ಲಕ್ಷ), ಅಭಿನಂದನ್ ಸಿಂಗ್ (30 ಲಕ್ಷ), ಲುಂಗಿ ಎನ್ಗಿಡಿ (1 ಕೋಟಿ).