Tuesday, 7th January 2025

AUS vs IND: ಸುಳ್ಳು ಆರೋಪ ಮಾಡಿದ ಆಸೀಸ್‌ ಅಭಿಮಾನಿಗಳಿಗೆ ತಕ್ಕ ತಿರುಗೇಟು ಕೊಟ್ಟ ಕೊಹ್ಲಿ; ವಿಡಿಯೊ ವೈರಲ್‌

ಸಿಡ್ನಿ: ಆಸ್ಟ್ರೇಲಿಯಾ(AUS vs IND) ಮತ್ತು ಭಾರತ ನಡುವೆ ಸಿಡ್ನಿಯಲ್ಲಿ ಇಂದು(ಭಾನುವಾರ) ಮುಕ್ತಾಯ ಕಂಡ ಟೆಸ್ಟ್‌ ಪಂದ್ಯದಲ್ಲಿ ಆಸೀಸ್‌ ಅಭಿಮಾನಿಗಳು(Australian Fans) ಭಾರತ ತಂಡದ ಆಟಗಾರರ ವಿರುದ್ಧ ಚೆಂಡು ವಿರೂಪದ ಆರೋಪ ಮಾಡಿದರು. ಇದಕ್ಕೆ ವಿರಾಟ್‌ ಕೊಹ್ಲಿ(Virat Kohli) ತಕ್ಕ ಉತ್ತರ ನೀಡಿದ ವಿಡಿಯೊವೊಂದು ಭಾರೀ ವೈರಲ್‌ ಆಗಿದೆ. ಕೊಹ್ಲಿಯ ಈ ನಡೆಗೆ ಭಾರತೀಯ ಅಭಿಮಾನಿಗಳು ಶಭಾಷ್‌! ಎಂದಿದ್ದಾರೆ.

ಮೂರನೇ ದಿನದಾಟವಾದ ಭಾನುವಾರ ಭಾರತ ತಂಡ ಫೀಲ್ಡಿಂಗ್‌ ನಡೆಸುತ್ತಿದ್ದ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಆಸ್ಟ್ರೇಲಿಯಾದ ಕ್ರಿಕೆಟ್‌ ಅಭಿಮಾನಿಗಳು ಭಾರತೀಯ ಆಟಗಾರರು ಸ್ಯಾಂಡ್‌ ಪೇಪರ್‌ ಬಳಿಸಿ ವಿಕೆಟ್‌ ಕೀಳುತ್ತಿದ್ದಾರೆ ಎಂದು ಲೇವಡಿ ಮಾಡುತ್ತಿದ್ದರು. ಈ ವೇಳೆ ವಿರಾಟ್‌ ಕೊಹ್ಲಿ ತಕ್ಕ ತಿರುಗೇಟು ನೀಡುವ ಮೂಲಕ ಆಸೀಸ್‌ ಅಭಿಮಾನಿಗಳ ಬಾಯಿ ಮುಚ್ಚಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಚೆಂಡು ವಿರೂಪ ಮಾಡಿ ಒಂದು ವರ್ಷ ನಿಷೇಧಕ್ಕೊಳಗಾದ ಸ್ಟೀವನ್‌ ಸ್ಮಿತ್‌ ವಿಕೆಟ್‌ ಬೀಳುತ್ತಿದ್ದಂತೆ ವಿರಾಟ್‌ ಕೊಹ್ಲಿ ಅವರು ಲೇವಡಿ ಮಾಡಿದ ಅಭಿಮಾನಿಗಳಿಗೆ ನಮ್ಮ ಬಳಿ ಸ್ಯಾಂಡ್ ಪೇಪರ್ ಇಲ್ಲ ಎಂದು ಜೇಬು ತೋರಿಸುವ ಮೂಲಕ ತಕ್ಕ ತಿರುಗೇಟು ನೀಡಿದರು. ಕೊಹ್ಲಿಯ ಈ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

2ನೇ ದಿನದಂತ್ಯಕ್ಕೆ 6 ವಿಕೆಟ್‌ಗೆ 141 ರನ್‌ ಗಳಿಸಿ, ಒಟ್ಟಾರೆ 145 ರನ್‌ ಮುನ್ನಡೆ ಪಡೆದಿದ್ದ ಭಾರತ ಮೂರನೇ ದಿನವಾದ ಭಾನುವಾರ 157 ರನ್‌ಗೆ ಆಲೌಟ್‌ ಆಯಿತು. 162 ರನ್‌ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 4 ವಿಕೆಟ್‌ ಕಳೆದುಕೊಂಡು 162 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು. ಬೂಮ್ರಾ ಬೆನ್ನು ನೋವಿನ ಸಮಸ್ಯೆಯಿಂದಾಗಿ ಕೇವಲ ಬ್ಯಾಟಿಂಗ್‌ ಮಾತ್ರ ನಡೆಸಿದರು. ಬೌಲಿಂಗ್‌ ನಡೆಸದೇ ಇದದ್ದು ಕೂಡ ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಮೂರನೇ ದಿನ ಭಾರತಕ್ಕೆ ಗಳಿಸಲಾದ್ದು ಕೇವಲ 16 ರನ್‌ ಮಾತ್ರ.

Leave a Reply

Your email address will not be published. Required fields are marked *