ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ವಿರಾಟ್ ಕೊಹ್ಲಿ ಅವರನ್ನು ವಿಶ್ವಕಪ್ 2023ರ ಇದುವರೆಗಿನ ಅತ್ಯಂತ ಬೆಸ್ಟ್ ಫೀಲ್ಡರ್ ಎಂದು ಪರಿಗಣಿಸಿದೆ. ಪಂದ್ಯಾವಳಿಯ ಮೊದಲ 13 ದಿನಗಳಲ್ಲಿ, ವಿರಾಟ್ ಕೊಹ್ಲಿ ತಮ್ಮ ಫೀಲ್ಡಿಂಗ್ ಮೂಲಕ ಮೈದಾನದಲ್ಲಿ ಹೆಚ್ಚಿನ ಪ್ರಭಾವವನ್ನು ಬೀರಿ ದ್ದಾರೆ.
ಐಸಿಸಿ ಮೈದಾನದಲ್ಲಿ ಅತ್ಯಂತ ಪರಿಣಾಮಕಾರಿ ಫೀಲ್ಡರ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಅದರಲ್ಲಿ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಪಂದ್ಯಾವಳಿ ಯಲ್ಲಿ ಕೊಹ್ಲಿ ಇಲ್ಲಿಯವರೆಗೆ ಮೂರು ಕ್ಯಾಚ್ ಗಳನ್ನು ಹಿಡಿದಿದ್ದಾರೆ.
ನ್ಯೂಜಿಲೆಂಡಿನ ಮ್ಯಾಟ್ ಹೆನ್ರಿ ಮತ್ತು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಗಿಂತ ಸಂಖ್ಯೆಯಲ್ಲಿ ಎರಡು ಕಡಿಮೆಯಾಗಿದೆ. ಆದರೆ ಅವರು ಮೈದಾನದಲ್ಲಿ ಹೆಚ್ಚಿನ ಪ್ರಭಾವ ಬೀರಿದ್ದಾರೆ. ಐಸಿಸಿ ಅವರಿಗೆ ಅತ್ಯಧಿಕ 22.30 ರೇಟಿಂಗ್ ಪಾಯಿಂಟ್ ನೀಡಿದೆ. ಇಂಗ್ಲೆಂಡಿನ ಜೋ ರೂಟ್ 21.73 ರೇಟಿಂಗ್ ಪಾಯಿಂಟ್ ಗಳನ್ನು ಹೊಂದಿದ್ದು ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಟೂರ್ನಿಯಲ್ಲಿ ರೂಟ್ ಇದುವರೆಗೆ 4 ಕ್ಯಾಚ್ ಗಳನ್ನು ಹಿಡಿದಿದ್ದಾರೆ. ಭಾರತ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದ ತಲಾ 2 ಆಟಗಾರರು ಪಟ್ಟಿಯಲ್ಲಿ ಟಾಪ್ -10 ನಲ್ಲಿದ್ದಾರೆ. ರವೀಂದ್ರ ಜಡೇಜಾ 11ನೇ ಸ್ಥಾನದಲ್ಲಿದ್ದಾರೆ.
ಟೀಮ್ ಇಂಡಿಯಾ ಟೂರ್ನಮೆಂಟ್ ನಲ್ಲಿ ಇದುವರೆಗೆ 14 ಕ್ಯಾಚ್ ಗಳನ್ನು ತೆಗೆದುಕೊಂಡಿದೆ. 10 ರನ್ ಗಳನ್ನು ಉಳಿಸಿದೆ ಮತ್ತು ಅನೇಕ ಉತ್ತಮ ಎಸೆತ ಗಳನ್ನು ನೀಡಿದೆ.
ಟೂರ್ನಿಯಲ್ಲಿ ಭಾರತ ತನ್ನ ಮೊದಲ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ಈ ವಿಶ್ವಕಪ್ಪಿನ ಪ್ರತಿ ಪಂದ್ಯದ ನಂತರ, ಭಾರತ ತಂಡದ ಫೀಲ್ಡಿಂಗ್ ಕೋಚ್ ನಿಂದ ಅತ್ಯುತ್ತಮ ಫೀಲ್ಡರ್ ಗೆ ಪದಕ ನೀಡಲಾಗುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದ ನಂತರ ವಿರಾಟ್ ಕೊಹ್ಲಿಗೆ ಪದಕವನ್ನು ನೀಡಲಾ ಯಿತು.
ಅಫ್ಘಾನಿಸ್ತಾನ ವಿರುದ್ಧದ ಎರಡನೇ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಮತ್ತು ಪಾಕಿಸ್ತಾನ ವಿರುದ್ಧದ ಮೂರನೇ ಪಂದ್ಯದ ನಂತರ ವಿಕೆಟ್ ಕೀಪರ್ ಬ್ಯಾಟ್ಸಮ್ಯಾನ್ ಕೆ.ಎಲ್ ರಾಹುಲ್ ಅತ್ಯುತ್ತಮ ಫೀಲ್ಡರ್ ಪದಕ ಪಡೆದರು.