Monday, 16th September 2024

ವೆಸ್ಟ್ ಇಂಡೀಸ್ ತಂಡ ವಿಶ್ವಕಪ್’ಗೆ ಅನರ್ಹ..!

ಮುಂಬೈ: ಕ್ರಿಕೆಟ್ ವಿಶ್ವಕಪ್ ಭಾರತದ ಆತಿಥ್ಯದಲ್ಲಿ ನಡೆಯುತ್ತಿದ್ದು, ಅಕ್ಟೋಬರ್ ತಿಂಗಳಿನಿಂದ ಪಂದ್ಯಾವಳಿಗಳು ಆರಂಭ ವಾಗಲಿವೆ. ಇದೇ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ತಂಡ ವಿಶ್ವಕಪ್’ಗೆ ಅನರ್ಹಗೊಂಡಿದೆ.

ಹರಾರೆಯಲ್ಲಿ ನಡೆದ ಸೂಪರ್ ಸಿಕ್ಸ್ ಕ್ವಾಲಿಫೈಯರ್ ಪಂದ್ಯದಲ್ಲಿ 7 ವಿಕೆಟ್ ಗಳಿಂದ ವೆಸ್ಟ್ ಇಂಡೀಸ್ ತಂಡ ಪರಾಭವ ಗೊಂಡಿದ್ದು, ಅರ್ಹತಾ ಸುತ್ತಿನಿಂದ ಹೊರ ಬಿದ್ದಿದೆ. ಸತತ ಎರಡು ಆವೃತ್ತಿಗಳಲ್ಲಿ ವಿಶ್ವಕಪ್ ಚಾಂಪಿಯನ್ ಪಟ್ಟ ಧರಿಸಿದ್ದ ವೆಸ್ಟ್ ಇಂಡೀಸ್ ತಂಡ ಈಗ ತೀವ್ರ ನಿರಾಸೆ ಅನುಭವಿಸಿದೆ.

ಒಂದು ಕಾಲದಲ್ಲಿ ಕ್ರಿಕೆಟ್ ಲೋಕದ ಅನಭಿಷಿಕ್ತ ರಾಜನಂತೆ ಮೆರೆಯುತ್ತಿದ್ದ ತಂಡ ಈ ಹಂತ ತಲುಪಲು ಅಲ್ಲಿನ ಕ್ರೀಡಾ ಲೋಕ ದಲ್ಲಿ ರಾಜಕೀಯ ಬೆರೆತಿರುವುದೇ ಕಾರಣ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *