ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಡಿ.26ರಂದು ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯವನ್ನು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ(Boxing Day Test) ಎಂದು ಕರೆಯಲಾಗುತ್ತದೆ. ಕ್ರಿಕೆಟ್ ಪಂದ್ಯಕ್ಕೆ ಬಾಕ್ಸಿಂಗ್ ಎಂಬ ಪದ ಬಳಕೆ ಹೇಗೆ ಬಂತು ಎನ್ನುವ ಕುತೂಹಲ ಹಲವರದ್ದು. ಇದಕ್ಕೆ ಉತ್ತರ ಇಲ್ಲಿದೆ.
ಹೌದು, ಕ್ರಿಸ್ಮಸ್ನ ಮರು ದಿನ ನಡೆಯುವ ಯಾವುದೇ ಟೆಸ್ಟ್ ಪಂದ್ಯವನ್ನು ಕೂಡ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವೆಂದು ಪರಿಗಣಿಸಲಾಗುತ್ತದೆ. ಬಾಕ್ಸಿಂಗ್ ಡೇ ಟೆಸ್ಟ್(Boxing Day Test) ಎಂಬುದು ಆಸ್ಟ್ರೇಲಿಯಾ ವಿರುದ್ಧ ಡಿಸೆಂಬರ್ 26 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆಡಲಾಗುವ ಪ್ರಸಿದ್ಧ ಟೆಸ್ಟ್ ಪಂದ್ಯವಾಗಿದೆ. ಡಿಸೆಂಬರ್ 30 ರಂದು ಅಥವಾ ಅದಕ್ಕೂ ಮೊದಲು ಈ ಪಂದ್ಯ ಕೊನೆಗೊಳ್ಳುತ್ತದೆ. ವಿಕ್ಟೋರಿಯಾ ಮತ್ತು ನ್ಯೂ ಸೌತ್ ವೇಲ್ಸ್ ನಡುವಿನ ಶೆಫೀಲ್ಡ್ ಶೀಲ್ಡ್ ಪ್ರಥಮ-ದರ್ಜೆ ಪಂದ್ಯವನ್ನು ಸೂಚಿಸುವ ಈ ಸಂಪ್ರದಾಯವು 1865ರ ಹಿಂದೆಯೇ ಪ್ರಾರಂಭವಾದ ಕಾರಣ ಇದು ಆಸ್ಟ್ರೇಲಿಯನ್ನರಿಗೆ ಬಹಳ ಮಹತ್ವದ್ದಾಗಿದೆ.
ಆಸ್ಟ್ರೇಲಿಯದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರುತ್ತಾರೆ. ಕ್ರಿಕೆಟ್ ಆಸ್ಟ್ರೇಲಿಯಾ 1980 ರಲ್ಲಿ ಅಧಿಕೃತ ಟೆಸ್ಟ್ ಪಂದ್ಯವನ್ನಾಡುವ ಮೂಲಕ ಬಾಕ್ಸಿಂಗ್ ಡೇ ಸಂಪ್ರದಾಯವು ಆರಂಭವಾಯಿತು. 2013 ರಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವೊಂದರಲ್ಲಿ ಅತ್ಯಧಿಕ ಪ್ರೇಕ್ಷಕರು ಸೇರಿದ ದಾಖಲೆ ನಿಮಾರ್ಣವಾಯಿತು. 271,865 ಮಂದಿ ಹಾಜರಿದ್ದರು. ಇದು ಆ್ಯಶಸ್ ಸರಣಿಯ ಪಂದ್ಯವಾಗಿತ್ತು. ಇಂಗ್ಲೆಂಡ್ ತಂಡ ಎದುರಾಳಿಯಾಗಿತ್ತು. ಈ ಬಾರಿಯ ಭಾರತ ಮತ್ತು ಆಸೀಸ್ ಪಂದ್ಯದ ಮೊದಲ ದಿನದಾಟದ ಟಿಕೆಟ್‌ಗಳೆಲ್ಲ ಈಗಾಗಲೇ ಸೋಲ್ಡ್ ಔಟ್ ಆಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.
ಕೇವಲ ಟೆಸ್ಟ್ ಪಂದ್ಯಗಳಿಗೆ ಸೀಮಿತವಾದ ಬಾಕ್ಸಿಂಗ್ ಡೇ ಏಕೈಕ ಏಕದಿನ ಪಂದ್ಯಕ್ಕೂ ಸಾಕ್ಷಿಯಾಗಿತ್ತು. 1989ರಲ್ಲಿ ನಡೆದಿದ್ದ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಒಂದ್ಯ ಇದಾಗಿತ್ತು. ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ 30 ರನ್ ಗಳಿಂದ ಗೆಲುವು ಸಾಧಿಸಿತ್ತು.
ಇದನ್ನೂ ಓದಿ Vijay Hazare: ಆ ಒಂದು ತಪ್ಪಿನಿಂದ ಕೇರಳ ತಂಡದಲ್ಲಿ ಸ್ಥಾನ ಕಳೆದುಕೊಂಡ ಸಂಜು ಸ್ಯಾಮ್ಸನ್
ಭಾರತದ ದಾಖಲೆ
ಭಾರತ ತಂಡ ಇದುವರೆಗೂ 17 ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳನ್ನು ಆಡಿದೆ. ಇದರಲ್ಲಿ ಗೆದ್ದಿದ್ದು 4 ಪಂದ್ಯಗಳನ್ನು ಮಾತ್ರ. ಕೊನೆಯ ಬಾರಿ ಭಾರತ ಬಾಕ್ಸಿಂಗ್ ಡೇ ಟೆಸ್ಟ್ ಗೆಲುವು ಸಾಧಿಸಿದ್ದು 2021ರಲ್ಲಿ. ಸೆಂಚುರಿಯನ್‌ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ. 113 ರನ್‌ಗಳ ಗೆಲುವು ಒಲಿದಿತ್ತು.
ಆಸ್ಟ್ರೇಲಿಯಾ ವಿರುದ್ಧ ಭಾರತ ಇದುವರೆಗೆ ಒಟ್ಟು 9 ಬಾಕ್ಸಿಂಗ್ ಡೇ ಟೆಸ್ಟ್‌ಗಳನ್ನು ಆಡಿದೆ. ಈ ಪೈಕಿ ಭಾರತ ಗೆಲುವು ಸಾಧಿಸಿದ್ದು 2 ಪಂದ್ಯಗಳು ಮಾತ್ರ. 2018ರಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಬಾಕ್ಸಿಂಗ್ ಡೇಯಲ್ಲಿ ಆಸೀಸ್ ವಿರುದ್ಧ ಮೊದಲ ಜಯ ದಾಖಲಿಸಿತ್ತು. ಇದಾದ ಬಳಿಕ 2020 ರಲ್ಲಿ ಮತ್ತೊಂದು ಗೆಲುವು ಕಂಡಿತ್ತು.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಬಾಕ್ಸಿಂಗ್ ಡೇ ಟೆಸ್ಟ್ ಮುಖಾಮುಖಿಯಾದದ್ದು 1985 ರಲ್ಲಿ. ಈ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತ್ತು. ನಂತರ ಆಸ್ಟ್ರೇಲಿಯಾ ಭಾರತದ ವಿರುದ್ಧ ಸತತ ಐದು ಬಾಕ್ಸಿಂಗ್ ಡೇ ಟೆಸ್ಟ್‌ಗಳನ್ನು ಗೆದ್ದುಕೊಂಡಿತು.