ನವದೆಹಲಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆರ್ ಅಶ್ವಿನ್ (R Ashwin) ವಿದಾಯ ಹೇಳಿದ್ದರು. ಆ ಮೂಲಕ ತಮ್ಮ 14 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನವನ್ನು ಹಿರಿಯ ಆಫ್ ಸ್ಪಿನ್ನರ್ ಮುಗಿಸಿದ್ದರು. 38ರ ಪ್ರಾಯದ ಆಟಗಾರ ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ 537 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಅನಿಲ್ ಕುಂಬ್ಳೆ (619) ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ. ಇದರ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ಅವರು 3503 ರನ್‌ಗಳನ್ನು ಕಲೆ ಹಾಕಿದ್ದಾರೆ. ಟೆಸ್ಟ್ ಜತೆಗೆ 156 ಒಡಿಐ ವಿಕೆಟ್‌ಗಳು ಹಾಗೂ 71 ಟಿ20ಐ ವಿಕೆಟ್‌ಗಳನ್ನು ಕೂಡ ಅವರು ಕಬಳಿಸಿದ್ದಾರೆ.
ಆರ್ ಅಶ್ವಿನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್ ವಿದಾಯ ಹೇಳಿದ ಬಳಿಕ ಬಿಸಿಸಿಐ ಆಯ್ಕೆದಾರರಿಗೆ ತಲೆ ನೋವು ತಂದಿದ್ದಾರೆ. ಏಕೆಂದರೆ ಬರೋಬ್ಬರಿ ಒಂದೂವರೆ ದಶಕದಿಂದ ಭಾರತ ತಂಡಕ್ಕೆ ಕೀ ಸ್ಪಿನ್ನರ್ ಆಗಿದ್ದ ಅಶ್ವಿನ್‌ಗೆ ಜಾಗಕ್ಕೆ ಯಾವ ಸ್ಪಿನ್ನರ್ ಅನ್ನು ಆಡಿಸಬೇಕೆಂಬುದು ಬಿಸಿಸಿಐನ ಮುಂದಿನ ಸವಾಲಾಗಿದೆ. ಈ ಸಾಲಿನಲ್ಲಿ ಚೆನ್ನೈ ಮೂಲದ ವಾಷಿಂಗ್ಟನ್ ಸುಂದರ್ ಮುಂಚೂಣಿಯಲ್ಲಿದ್ದಾರೆ.
#WATCH | #RAshwin's mother cries while hugging son, father gets emotional as #India legend returns home after retirement@ashwinravi99 #Ashwin #Cricket
— Hindustan Times (@htTweets) December 19, 2024
(📽️: ANI) pic.twitter.com/9e0jnnAMjW
ಭಾರತ ತಂಡದಲ್ಲಿ ಆರ್ ಅಶ್ವಿನ್ ಸ್ಥಾನ ತುಂಬಬಲ್ಲ ನಾಲ್ವರು ಸ್ಪಿನ್ನರ್‌ಗಳು
- ವಾಷಿಂಗ್ಟನ್ ಸುಂದರ್
ಆಸ್ಟ್ರೇಲಿಯಾ ಪ್ರವಾಸದ ಭಾರತ ತಂಡದಲ್ಲಿರುವ ವಾಷಿಂಗ್ಟನ್ ಸುಂದರ್ ಅವರು, ಆರ್ ಅಶ್ವಿನ್ ಅವರ ಸ್ಥಾನವನ್ನು ತುಂಬುವ ಸ್ಪಿನ್ನರ್‌ಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಅಂದ ಹಾಗೆ ಪರ್ತ್ ಟೆಸ್ಟ್ ಪಂದ್ಯದಲ್ಲಿ ಆರ್ ಅಶ್ವಿನ್ ಅವರನ್ನು ಕೈ ಬಿಟ್ಟು ವಾಷಿಂಗ್ಟನ್ ಸುಂದರ್ ಅವರನ್ನು ಆಡಿಸಲಾಗಿತ್ತು.
ಆಫ್ ಸ್ಪಿನ್ ಜೊತೆಗೆ ವಾಷಿಂಗ್ಟನ್ ಸುಂದರ್ ರೆಡ್ ಬಾಲ್‌ನಲ್ಲಿ ಗುಣಮಟ್ಟದ ಬ್ಯಾಟಿಂಗ್ ಅನ್ನು ಹೊಂದಿದ್ದಾರೆ. ಆಫ್ ಸ್ಪಿನ್ನರ್ ಇಲ್ಲಿಯವರೆಗೂ ಆಡಿದ ಏಳು ಟೆಸ್ಟ್ ಪಂದ್ಯಗಳಿಂದ 24 ವಿಕೆಟ್‌ಗಳು ಹಾಗೂ 387 ರನ್‌ಗಳನ್ನು ಬಾರಿಸಿದ್ದಾರೆ. ಇವರು ಬೌಲಿಂಗ್ ಜತೆಗೆ ಬ್ಯಾಟಿಂಗ್‌ನಲ್ಲಯೂ ತಂಡಕ್ಕೆ ಉತ್ತಮ ಸಂಯೋಜನೆಯನ್ನು ನೀಡಲಿದ್ದಾರೆ.
2. ಕುಲ್ದೀಪ್ ಯಾದವ್
ಭಾರತ ತಂಡದ ಪರ 106 ಏಕದಿನ ಪಂದ್ಯಗಳು ಹಾಗೂ 40 ಟಿ20ಐ ಪಂದ್ಯಗಳನ್ನು ಆಡಿರುವ ಲೆಗ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರು ಆರ್ ಅಶ್ವಿನ್ ಅವರ ಸ್ಥಾನವನ್ನು ತುಂಬುವ ಸ್ಪಿನ್ನರ್‌ಗಳ ರೇಸ್‌ನಲ್ಲಿದ್ದಾರೆ. ಅವರು ಇಲ್ಲಿಯವರೆಗೂ 13 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 56 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರ ಜತೆಗೆ ಅವರು ನಾಲ್ಕು ಬಾರಿ ಐದು ವಿಕೆಟ್ ಸಾಧನೆ ಮಾಡಿದ್ದಾರೆ. ಚೈನಾಮನ್ ಶೈಲಿಯಲ್ಲಿ ಚೆಂಡನ್ನು ತಿರುಗಿಸಬಲ್ಲ ಕುಲ್ದೀಪ್, ಬ್ಯಾಟಿಂಗ್‌ನಲ್ಲಿಯೂ ಸುಧಾರಣೆ ಕಂಡಿದ್ದಾರೆ.
3. ತನುಷ್ ಕೋಟಿಯನ್
ಮುಂಬೈ ತಂಡದ ದೇಶಿ ಕ್ರಿಕೆಟ್‌ನಲ್ಲಿ ಎಲ್ಲರ ಗಮನ ಸೆಳೆದಿರುವ ತನುಷ್ ಕೋಟಿಯನ್ ಅವರು ಕೂಡ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಆಗಿದ್ದು, ಭಾರತ ಟೆಸ್ಟ್ ತಂಡದಲ್ಲಿ ಆರ್ ಅಶ್ವಿನ್ ಅವರ ಸ್ಥಾನವನ್ನು ತುಂಬುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇವರು 33 ಪ್ರಥಮ ದರ್ಜೆ ಪಂದ್ಯಗಳಿಂದ 25.70ರ ಸರಾಸರಿಯಲ್ಲಿ 101 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇವರು ಆಸ್ಟ್ರೇಲಿಯಾ ಎದುರು ಭಾರತ ʻಎʼ ಪರ ಆಡಿದ್ದರು. ಇನ್ನು ಬ್ಯಾಟಿಂಗ್‌ನಲ್ಲಿ ಅವರು ಎರಡು ಶತಕಗಳು ಹಾಗೂ 13 ಅರ್ಧಶತಕಗಳ ಮೂಲಕ 1,525 ರನ್‌ಗಳನ್ನು ಕಲೆ ಹಾಕಿದ್ದಾರೆ.
4. ಅಕ್ಷರ್ ಪಟೇಲ್
ಕಳೆದ ಹಲವು ವರ್ಷಗಳಿಂದ ಭಾರತ ಟೆಸ್ಟ್ ತಂಡದಲ್ಲಿ ಮೂರನೇ ಸ್ಪಿನ್ನರ್ ಆಗಿ ಅಕ್ಷರ್ ಪಟೇಲ್ ಆಡುತ್ತಿದ್ದಾರೆ. ಭಾರತ ಪರ ಆಡಿದ 14 ಟೆಸ್ಟ್ ಪಂದ್ಯಗಳಿಂದ ಅವರು 55 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ ಅವರು ಬ್ಯಾಟಿಂಗ್‌ನಲ್ಲಿಯೂ 646 ರನ್‌ಗಳನ್ನು ಗಳಿಸಿದ್ದಾರೆ. ಇದರ ಹೊರತಾಗಿಯೂ ರವೀಂದ್ರ ಜಡೇಜಾ ಇರುವ ಕಾರಣ ಅಕ್ಷರ್ ಪಟೇಲ್ ಭಾರತ ಟೆಸ್ಟ್ ತಂಡದಲ್ಲಿ ನಿಯಮಿತವಾಗಿ ಆಡುತ್ತಿಲ್ಲ. ರವೀಂದ್ರ ಜಡೇಜಾ ಟೆಸ್ಟ್‌ಗೆ ನಿವೃತ್ತಿ ಪಡೆದ ಬಳಿಕ ಅವರ ಸ್ಥಾನವನ್ನು ಬಹುಶಃ ಅಕ್ಷರ್ ಪಟೇಲ್ ತುಂಬಬಹುದು.
ಈ ಸುದ್ದಿಯನ್ನು ಓದಿ: R Ashwin: ಅಶ್ವಿನ್ ದಿಢೀರ್ ವಿದಾಯ ನಿರ್ಧಾರಕ್ಕೆ ಕಾರಣವೇನು?