ದುಬಾೖ: ಅಕ್ಟೋಬರ್ 3ರಿಂದ ಯುಎಇಯಲ್ಲಿ ನಡೆಯುವ ಬಾಂಗ್ಲಾದೇಶ ಆತಿಥ್ಯದ ಮಹಿಳಾ ಟಿ20 ವಿಶ್ವಕಪ್ ಕ್ರಿಕೆಟ್(Women’s T20 World Cup) ಪಂದ್ಯಾವಳಿಗೆ ಅಂಪೈರ್ಗಳನ್ನು ಹೆಸರಿಸಲಾಗಿದೆ. ಒಟ್ಟು 10 ಅಂಪೈರ್, 3 ರೆಫ್ರಿಗಳನ್ನು ಹೆಸರಿಸಿದೆ. ಭಾರತದಿಂದ ಇಬ್ಬರಿಗೆ ಅವಕಾಶ ಸಿಕ್ಕಿದೆ. ಇವರೆಂದರೆ ಜಿ.ಎಸ್. ಲಕ್ಷ್ಮೀ ಮತ್ತು ವೃಂದಾ ರಾಠಿ. ಜಿಎಸ್ ಲಕ್ಷ್ಮೀ(GS Lakshmi) ಅವರು ಮ್ಯಾಚ್ ರೆಫರಿಯಾಗಿ ಕರ್ತವ್ಯ ನಿಭಾಯಿಸಿದರೆ, ವೃಂದಾ ರಾತಿ(Vrinda Rathi) ಮುಖ್ಯ ಅಂಪೈರ್ ಆಗಿದ್ದಾರೆ. ಲೀಗ್ ಹಂತದ ಅಂತ್ಯದಲ್ಲಿ ಸೆಮಿಫೈನಲ್ಸ್ಗೆ ಅಂಪೈರ್ಗಳ ನೇಮಕ ಮಾಡಲಾಗುತ್ತದೆ. ಸೆಮಿ ಫೈನಲ್ಸ್ ಮುಗಿದ ಬಳಿಕ ಫೈನಲ್ ಪಂದ್ಯದ ಅಂಪೈರ್ಗಳಗಳನ್ನು ಅಂತಿಮಗೊಳಿಸಲಾಗುತ್ತದೆ.
ಜಿಂಬಾಬ್ವೆಯ ಸಾರಾ ದಂಬನೆವಾನಾ ಮಹಿಳಾ ಟಿ 20 ವಿಶ್ವಕಪ್ಗೆ ಅಂಪೈರ್ ಆಗಿ ಪಾದರ್ಪಣೆ ಮಾಡಲಿದ್ದಾರೆ. ಕ್ಲೇರ್ ಪೊಲೊಸಾಕ್ ಅವರು ನಾಲ್ಕು ಹಿಂದಿನ ಮಹಿಳಾ T20 ವಿಶ್ವಕಪ್ ಪಂದ್ಯಾವಳಿಗಳಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕಿಮ್ ಕಾಟನ್ ಮತ್ತು ಜಾಕ್ವೆಲಿನ್ ವಿಲಿಯಮ್ಸ್ಗೆ ಇದು ನಾಲ್ಕನೇ ಟಿ20 ವಿಶ್ವಕಪ್ ಟೂರ್ನಿಯಾಗಿದೆ. ಇಬ್ಬರೂ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಹಿಂದಿನ ಆವೃತ್ತಿಯ ಫೈನಲ್ನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ IND vs BAN: ಮೂರನೇ ದಿನದಾಟಕ್ಕೂ ಮಳೆ ಭೀತಿ
ಭಾರತ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 4ರಂದು ನ್ಯೂಜಿಲ್ಯಾಂಡ್ ವಿರುದ್ಧ ಆಡಲಿದೆ. ಈ ಪಂದ್ಯದ ಫೀಲ್ಡ್ ಅಂಪೈರ್ಗಳೆಂದರೆ ಜಾಕ್ವೆಲಿನ್ ವಿಲಿಯಮ್ಸ್ ಮತ್ತು ಇಂಗ್ಲೆಂಡ್ನ ಅನ್ನಾ ಹ್ಯಾರಿಸ್. ಆಸ್ಟ್ರೇಲಿಯಾದ ಕ್ಲೇರ್ ಪೊಲೋಸಾಕ್ ಟಿವಿ ಅಂಪೈರ್ ಆಗಿದ್ದಾರೆ. ಅಕ್ಟೋಬರ್ 6 ರಂದು ನಡೆಯುವ ಭಾರತ-ಪಾಕಿಸ್ತಾನ ನಡುವಿನ ಮಹತ್ವದ ಪಂದ್ಯಕ್ಕೆ ಆಸ್ಟ್ರೇಲಿಯದ ಎಲೋಯಿಸ್ ಶೆರಿಡಾನ್ ಮತ್ತು ದಕ್ಷಿಣ ಆಫ್ರಿಕಾದ ಲಾರೆನ್ ಏಜೆನ್ಬಾಗ್ ಫೀಲ್ಡ್ ಅಂಪೈರ್ಗಳಾಗಿದ್ದಾರೆ. ವೆಸ್ಟ್ ಇಂಡೀಸ್ನ ಜಾಕ್ವೆಲಿನ್ ವಿಲಿಯಮ್ಸ್ ಟಿವಿ ಅಂಪೈರ್ ಆಗಿ ನೇಮಿಸಲ್ಪಟ್ಟಿದ್ದಾರೆ.
ಅಂಪೈರ್ಗಳ ಪಟ್ಟಿ
ಲಾರೆನ್ ಅಜೆನ್ಬಾಗ್, ಕಿಮ್ ಕಾಟನ್, ಸಾರಾ ದಂಬನೆವಾನಾ, ಅನ್ನಾ ಹ್ಯಾರಿಸ್, ನಿಮಾಲಿ ಪೆರೆರಾ, ಕ್ಲೇರ್ ಪೊಲೊಸಾಕ್, ವೃಂದಾ ರಾತಿ, ಸ್ಯೂ ರೆಡ್ಫರ್ನ್, ಎಲೋಯಿಸ್ ಶೆರಿಡನ್, ಜಾಕ್ವಿಲಿನ್ ವಿಲಿಯಮ್ಸ್. ಪಂದ್ಯದ ರೆಫ್ರಿಗಳು: ಶಾಂಡ್ರೆ ಫ್ರಿಟ್ಜ್, ಜಿಎಸ್ ಲಕ್ಷ್ಮಿ, ಮಿಚೆಲ್ ಪೆರೇರಾ.
ವಿಶ್ವಕಪ್ ಪಂದ್ಯಾವಳಿ ಅಕ್ಟೋಬರ್ 3 ರಿಂದ ಆರಂಭವಾಗಿ 20 ರವರೆಗೆ ನಡೆಯಲಿದೆ. ದುಬಾೖ ಮತ್ತು ಶಾರ್ಜಾದಲ್ಲಿ ಒಟ್ಟಾರೆ 23 ಪಂದ್ಯಗಳು ನಡೆಯಲಿವೆ. ಒಟ್ಟು 19 ದಿನ ಪಂದ್ಯಾವಳಿ ಸಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ನಲ್ಲಿ ಮುಖಾಮುಖಿಯಾಗಲಿದೆ. ದಿನದ ಮತ್ತೊಂದು ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಕಣಕ್ಕಿಳಿಯಲಿದೆ. ಲೀಗ್ ಹಂತದ ಯಾವುದೇ ಪಂದ್ಯಗಳಿಗೆ ಮೀಸಲು ದಿನವಿಲ್ಲ. ಕೇವಲ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮಾತ್ರ ಮೀಸಲು ದಿನ ನಿಗದಿಯಾಗಿದೆ.