Thursday, 31st October 2024

WPL 2025: ಆರ್‌ಸಿಬಿ ಸೇರಿದ ಡೇನಿಯಲ್ ವ್ಯಾಟ್

ಬೆಂಗಳೂರು: ಮುಂದಿನ ವರ್ಷ ನಡೆಯುವ ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌(WPL 2025) (ಡಬ್ಲ್ಯುಪಿಎಲ್‌) ಆಟಗಾರ್ತಿಯರ ರೀಟೈನ್‌ ಪಟ್ಟಿ(wpl 2025 retention) ಸಲ್ಲಿಸಲು ನವೆಂಬರ್‌ 7 ಅಂತಿಮ ದಿನವಾಗಿದೆ. ಇದಕ್ಕೂ ಮುನ್ನವೇ ಹಾಲಿ ಚಾಂಪಿಯನ್‌ ಆರ್‌ಸಿಬಿ ಫ್ರಾಂಚೈಸಿ ಡೇನಿಯಲ್ ವ್ಯಾಟ್(Danielle Wyatt) ಅವರನ್ನು ಟ್ರೇಡ್‌ ವಿಂಡೋ ಮೂಲಕ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.

ಡೇನಿಯಲ್ ವ್ಯಾಟ್ ಕಳೆದ ಆವೃತ್ತಿಯಲ್ಲಿ ಯುಪಿ ವಾರಿಯರ್ಸ್ ತಂಡದ ಪದ ಆಡಿದ್ದರು. ಅವರನ್ನು 30 ಲಕ್ಷ ರೂ.ಗೆ ಯುಪಿ ತಂಡ ಖರೀದಿಸಿತ್ತು. ಇದೇ ಮೊತ್ತಕ್ಕೆ ಆರ್‌ಸಿಬಿಯು ಟ್ರೇಡ್‌ ವಿಂಡೋ ಮೂಲಕ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.

ʼಡೇನಿಯಲ್ ವ್ಯಾಟ್ ಯುಪಿ ವಾರಿಯರ್ಸ್‌ ತಂಡದಿಂದ ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಅವರನ್ನು ಟ್ರೇಡ್‌ ವಿಂಡೋ ಮೂಲಕ ತಂಡಕ್ಕೆ ಸೇರ್ಪಡೆ ಮಾಡಲಾಗಿದೆ’ ಎಂದು ಡಬ್ಲ್ಯುಪಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ. ಆರ್‌ಸಿಬಿ ಕೂಡ ತನ್ನ ಟ್ವಿಟರ್‌ ಎಕ್ಸ್‌ ಖಾತೆಯಲ್ಲಿ ಡೇನಿಯಲ್ ವ್ಯಾಟ್ ಫೋಟೊ ಹಂಚಿಕೊಂಡು ತಂಡಕ್ಕೆ ಸ್ವಾಗತ ಕೋರಿದೆ.

ಇದನ್ನೂ ಓದಿ IPL 2025 Retentions: ರಿಟೇನ್‌ ಕುತೂಹಲಕ್ಕೆ ಇಂದು ತೆರೆ; ಎಷ್ಟು ಕೋಟಿ ವೆಚ್ಚ ಮಾಡಬಹುದು?

ವೈಟ್ ಅವರು 164 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ. ಇಂಗ್ಲೆಂಡ್‌ ತಂಡದ ಪರ ಅತಿ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ ಆಟಗಾರ್ತಿ ಎಂಬ ಹೆಗ್ಗಳಿಕೆಯೂ ಇವರದ್ದಾಗಿದೆ. ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ 2014ರಲ್ಲಿ ಡೇನಿಯಲ್ ವ್ಯಾಟ್​ “ಕೊಹ್ಲಿ ನನ್ನನ್ನು ಮದುವೆಯಾಗು!!’ ಎಂದು ಟ್ವೀಟ್ ಮೂಲಕ ಪ್ರೇಮ ನಿವೇದನೆ ಮಾಡಿದ್ದರು. ಆದರೆ ಕೊಹ್ಲಿ ಇದಕ್ಕೆ ಕೊಹ್ಲಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಇತ್ತೀಚೆಗೆ ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ಯಾವುದೇ ತಂಡಕ್ಕೂ ಹರಾಜಾಗದ ಬೇಸರದಲ್ಲಿ ವ್ಯಾಟ್​ ‘ಹೃದಯ ಒಡೆದು ಹೋಯಿತು’ ಎಂದು ಟ್ವೀಟ್​ ಮಾಡುವ ಮೂಲಕ ಬೇಸರ ವ್ಯಕ್ತಪಡಿಸಿದ್ದರು. ಇದೀಗ ಕೊಹ್ಲಿ ಆಡುತ್ತಿರುವ ಆರ್‌ಸಿಬಿ ಪ್ರಾಂಚೈಸಿಗೆ ಡೇನಿಯಲ್ ವ್ಯಾಟ್ ಸೇರಿಕೊಂಡಿದ್ದಾರೆ. ಇದೇ ಜೂನ್‌ನಲ್ಲಿ ಡೇನಿಯಲ್ ವ್ಯಾಟ್(Danielle Wyatt) ಅವರು ತನ್ನ ಬಹುಕಾಲ ಗೆಳತಿ ಜಾರ್ಜಿ ಹಾಡ್ಜ್(Georgie Hodge) ಅವರೊಂದಿಗೆ ಮದುವೆಯಾಗಿದ್ದರು.