Thursday, 12th December 2024

ಕ್ರಿಕೆಟ್ ಚರಿತ್ರೆಯ ಈ ದಿನ ನಡೆಯಿತು ಚಮತ್ಕಾರ…

ಸೆಪ್ಟೆಂಬರ್ 19, 2007ರಂದು ಭಾರತದ ಸ್ಫೋಟಕ ಬ್ಯಾಟರ್ ಯುವರಾಜ್ ಸಿಂಗ್ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ತಂಡದ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್‌ನಲ್ಲಿ ಸತತ ಆರು ಸಿಕ್ಸರ್‌ಗಳನ್ನು ಬಾರಿಸಿ ವಿಶ್ವದಾಖಲೆ ನಿರ್ಮಿಸಿದರು.

ಈ ಪಂದ್ಯವು ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಸೂಪರ್ 8 ಮುಖಾಮುಖಿಯಾಗಿತ್ತು. ನ್ಯೂಜಿ ಲೆಂಡ್ ವಿರುದ್ಧ ತನ್ನ ಮೊದಲ ಸೂಪರ್ 8 ಪಂದ್ಯವನ್ನು ಸೋತಿದ್ದ ಭಾರತ, ಪಂದ್ಯಾವಳಿಯಲ್ಲಿ ಜೀವಂತ ವಾಗಿರಲು ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನು ಗೆಲ್ಲಲೇಬೇಕಾಗಿತ್ತು.

ಡರ್ಬನ್‌ನ ಕಿಂಗ್ಸ್‌ಮೀಡ್‌ನಲ್ಲಿ ಹಣಾಹಣಿಯನ್ನು ನಿಗದಿಪಡಿಸಲಾಗಿತ್ತು. ಭಾರತದ ಇನ್ನಿಂಗ್ಸ್‌ನಲ್ಲಿ ಕೇವಲ 20 ಎಸೆತಗಳು ಬಾಕಿ ಇರುವಾಗ ಯುವರಾಜ್ ಸಿಂಗ್ ಮೈದಾನಕ್ಕಿಳಿದರು. ಇಂಗ್ಲೆಂಡ್‌ನ ಆಂಡ್ರ್ಯೂ ಫ್ಲಿಂಟಾಫ್ ಅವರೊಂದಿಗಿನ ವಾಗ್ವಾದವು ಎಡಗೈ ಬ್ಯಾಟ್ಸ್‌ಮನ್‌ ಯುವರಾಜ್ ಸಿಂಗ್‌ರನ್ನು ಕೆರಳಿಸಿತ್ತು. ಯುವರಾಜ್ ಸಿಂಗ್ 19ನೇ ಓವರ್‌ನಲ್ಲಿ ಸ್ಟುವರ್ಟ್ ಬ್ರಾಡ್ ಬೌಲಿಂಗ್‌ನಲ್ಲಿ ಸಿಕ್ಸರ್‌ಗಳ ಸುರಿಮಳೆಗೈದರು, ಬೃಹತ್ ಸ್ಕೋರ್‌ನತ್ತ ಮುನ್ನಡೆಸಿದರು.

ಯುವರಾಜ್ ಸಿಂಗ್ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಯಾವುದೇ ಬ್ಯಾಟ್ಸ್‌ಮನ್‌ನಿಂದ ವೇಗವಾಗಿ ಅರ್ಧಶತಕ ದಾಖಲಿಸಿದ ದಾಖಲೆಯನ್ನು ನಿರ್ಮಿಸಿದರು.

ಆರು ಸಿಕ್ಸರ್ ಚಚ್ಚಿಸಿಕೊಂಡ ಸ್ಟುವರ್ಟ್ ಬ್ರಾಡ್ ಅವರು ತಮ್ಮ ವೃತ್ತಿಜೀವನವನ್ನು ಆಗಲೇ ಪ್ರಾರಂಭಿಸುತ್ತಿರುವ ಯುವ ವೇಗದ ಬೌಲರ್ ಆಗಿದ್ದರು.

ಅಂತಿಮವಾಗಿ, ಸೆಪ್ಟೆಂಬರ್ 19, 2007 ಯುವರಾಜ್ ಸಿಂಗ್ ಮತ್ತು ಸ್ಟುವರ್ಟ್ ಬ್ರಾಡ್ ನಡುವಿನ ಮುಖಾಮುಖಿಯು ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಮಹತ್ವದ ದಿನವಾಗಿದೆ.