ಮುಂಬಯಿ: ಟೀಮ್ ಇಂಡಿಯಾದ ಮಾಜಿ ವೇಗಿ ಜಹೀರ್ ಖಾನ್(Zaheer Khan) ಅವರು ತಮ್ಮ ಪತ್ನಿ ಸಾಗರಿಕಾ ಘಾಟ್ಗೆ(Sagarika Ghatge) ಜತೆಗೂಡಿ ಮಹಾರಾಷ್ಟ್ರದ ಶಿರಡಿಯ ಶ್ರೀ ಸಾಯಿಬಾಬಾ ಮಂದಿರಕ್ಕೆ(Shirdi Sai Baba Temple) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಪ್ರತಿಕ್ರಿಯೆ ನೀಡಿದ ಜಹೀರ್, ನನ್ನ ಜನ್ಮಸ್ಥಳ ಶ್ರೀರಾಮಪುರ ಹೀಗಾಗಿ, ಶಿರಡಿಯೊಂದಿಗೆ ನನಗೆ ನಿಕಟ ಸಂಬಂಧವಿದೆ ಎಂದು ಹೇಳಿದರು.
ಜಹೀರ್ ಖಾನ್ ಮುಸ್ಲಿಂ ಸಮುದಾಯದವರಾಗಿದ್ದರೂ ಹಿಂದುಗಳ ಹಬ್ಬವನ್ನು ಕೂಡ ಪತ್ನಿ ಜತೆ ಆಚರಿಸುತ್ತಿರುತ್ತಾರೆ. ಇದೇ ಕಾರಣಕ್ಕೆ ಅವರ ವಿರುದ್ಧ ಮುಸ್ಲಿಂ ಮೂಲಭೂತವಾದಿಗಳು ಆಗಾಗ ಟೀಕೆಗಳನ್ನು ದ್ವೇಷಪೂರಿತ ಕಾಮೆಂಟ್ಗಳ ಮೂಲಕ ನಿಂದನೆ ಮಾಡುತ್ತಿರುತ್ತಾರೆ.
ʼನನ್ನ ಜನ್ಮಸ್ಥಳ ಶ್ರೀರಾಮಪುರ, ಹಾಗಾಗಿ ಶಿರಡಿಯೊಂದಿಗೆ ನನಗೆ ನಿಕಟ ಸಂಬಂಧವಿದೆ. ನಾನು ಹಲವಾರು ಬಾರಿ ಇಲ್ಲಿ ಕ್ರಿಕೆಟ್ ಆಡಿದ್ದೇನೆ. ನಾನು ಪ್ರತಿಬಾರಿ ಇಲ್ಲಿ ಕ್ರಿಕೆಟ್ ಆಡುವಾದ ಇಲ್ಲಿಗೆ ಬರುತ್ತಿದೆ. ನನ್ನ ಪತ್ನಿ ಕೂಡ ಸಾಯಿಬಾಬಾ ಭಕ್ತೆ. ಹೀಗಾಗಿ ಈ ಬಾರಿ ಜತೆಯಾಗಿ ಬಂದು ಪೂಜೆ ಸಲ್ಲಿಸಿದ್ದೇವೆʼ ಎಂದು ಜಹೀರ್ ಮಾಧ್ಯಮದ ಜತೆ ಮಾತನಾಡುವ ವೇಳೆ ಹೇಳಿದರು. ಸಾಯಿಬಾಬಾ ಮಂದಿರ ಟ್ರಸ್ಟ್ ವತಿಯಿಂದ ಜಹೀರ್ ಮತ್ತು ಸಾಗರಿಕಾಗೆ ಸಾಯಿಬಾಬಾ ಪ್ರತಿಮೆ ನೀಡಿ ಗೌರವಿಸಲಾಯಿತು.
ಬಾಲಿವುಡ್ ನಟಿ ಸಾಗರಿಕಾ ಘಾಟ್ಕೆ ಅವರನ್ನು ಜಹೀರ್ ಅವರು 2017ರಲ್ಲಿ ವಿವಾಹವಾಗಿದ್ದರು. ಸಾಗರಿಕಾ ಘಾಟ್ಕೆ ಚಕ್ ದೇ ಇಂಡಿಯಾ ಸಿನಿಮಾ ಮೂಲಕ ಪ್ರಚಾರಕ್ಕೆ ಬಂದರು. ಅದಕ್ಕೂ ಮುನ್ನ ಅವರು ಭಾರತೀಯ ಹಾಕಿ ತಂಡದಲ್ಲಿ ಆಡಿದ್ದರು. ಮುಂದೆ ಬಾಲಿವುಡ್‌ನಲ್ಲಿ ಸಾಗರಿಕಾ ಹೆಸರು ಮಾಡಿದರು. ಇದೇ ಕಾರಣಕ್ಕೆ ಜಹೀರ್ ನಡುವೆ ಪ್ರೀತಿ ಬೆಳೆದಿತ್ತು.
ಜಹೀರ್ ಕ್ರಿಕೆಟ್ ಸಾಧನೆ
ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಆಗಿ ಜಹೀರ್ ಖಾನ್ ಅಪಾರ ಸಾಧನೆ ಮಾಡಿದ್ದಾರೆ. 2011ರ ಏಕದಿನ ವಿಶ್ವಕಪ್ನಲ್ಲಿ ಮಪದಲ ಓವರ್ ಮೇಡನ್ ಎಸೆದು ಎದುರಾಳಿ ಲಂಕಾ ತಂಡದ ಮೇಲೆ ಒತ್ತಡ ಹೇರಿದ್ದರು. ಭಾರತ ಪರ 200 ಏಕದಿನ ಪಂದ್ಯ ಆಡಿರುವ ಅವರು 282 ವಿಕೆಟ್ ಕಬಳಿಸಿದ್ದಾರೆ. 92 ಟೆಸ್ಟ್ಗಳಿಂದ 311 ವಿಕೆಟ್, 17 ಟಿ20 ಪಂದ್ಯಗಳಿಂದ 17 ವಿಕೆಟ್ ಪಡೆದಿದ್ದಾರೆ. ಐಪಿಎಲ್ನಲ್ಲಿ ಭರ್ತಿ 100 ಪಂದ್ಯ ಆಡಿ 102 ವಿಕೆಟ್ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು 610 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ.