Tuesday, 26th November 2024

ಅಪಾಯದ ಸುಳಿಯಲ್ಲಿ ನಾಲ್ಕು ಜಿಲ್ಲೆಗಳು

ವಿಶ್ವವಾಣಿ‌ ಸುದ್ದಿಮನೆ
ಬೆಂಗಳೂರು
ಕಳೆದ ಒಂದು ವಾರದಲ್ಲಿ ದೇಶಾದ್ಯಂತ ದಾಖಲೆ ಪ್ರಮಾಣದಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಇದರ ಜತೆಗೆ, ಗುಣಮುಖರಾಗುತ್ತಿರುವವರ ಶೇಕಡಾವಾರು ಪ್ರಮಾಣವೂ ಹೆಚ್ಚಾಗುತ್ತಿವೆ.
ಇನ್ನು, ದೇಶದ ಅತಿಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವ ಹತ್ತು ರಾಜ್ಯಗಳಲ್ಲಿ ಕರ್ನಾಟಕ ಕೂಡಾ ಒಂದು. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಗುಣಮುಖರಾಗುತ್ತಿರುವವರು ಸರಾಸರಿ ಶೇ. 68.32 ಇದೆ.
ಅತಿಹೆಚ್ಚು ಮರಣ ಹೊಂದಿದವರ ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಮೊದಲೆರಡು ಸ್ಥಾನಗಳು ಮಹಾರಾಷ್ಟ್ರ ಮತ್ತು ದೆಹಲಿಗಳಾಗಿವೆ. ದೇಶದ ಒಟ್ಟು ಸಕ್ರಿಯ ಪ್ರಕರಣಗಳು ಸುಮಾರು 6.23ಲಕ್ಷ ವರದಿಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ನೀಡಿದ ಮಾಹಿತಿಯ ಪ್ರಕಾರ, ನಾಲ್ಕು ರಾಜ್ಯಗಳ ಹದಿನಾರು ಜಿಲ್ಲೆಗಳಲ್ಲಿ, ಸೋಂಕಿತರ ಮರಣ ಪ್ರಮಾಣ, ದೇಶದ ಸರಾಸರಿಗಿಂತಲೂ ಹೆಚ್ಚು ಎನ್ನುವ ಎಚ್ಚರಿಕೆಯನ್ನು ನೀಡಿದೆ.
ಹಾಗಾಗಿ, ನಾಲ್ಕು ರಾಜ್ಯಗಳಿಗೆ ತುರ್ತು ಅಲರ್ಟ್ ಹೊರಡಿಸಿರುವ ಕೇಂದ್ರ ಸರಕಾರ, ಹದಿನಾರು ಜಿಲ್ಲೆಗಳಲ್ಲಿ ದೈನಂದಿನ ಪರೀಕ್ಷೆಯನ್ನು ಹೆಚ್ಚಿಸಿಕೊಳ್ಳಲು ಮತ್ತು ಹೆಚ್ಚಿನ ಅಂಬುಲೆನ್ಸ್ ಒದಗಿಸಲು ಸೂಚಿಸಲಾಗಿದೆ. ಕರ್ನಾಟಕ ಸೇರಿ, 4 ರಾಜ್ಯಗಳ 16 ಜಿಲ್ಲೆಗಳು ಅಪಾಯದ ಸುಳಿಗೆ ಸಿಲುಕಿವೆ‌.
ಕಳೆದ ಒಂದು ವಾರದಿಂದ ಸುಮಾರು 10 ಜಿಲ್ಲೆಗಳಲ್ಲಿ ಕರೋನಾ 200ರ ಗಡಿ‌ದಾಟುತ್ತಿದೆ.  ರಾಜ್ಯದಲ್ಲಿ 2 ಲಕ್ಷ ಸನಿಹದಲ್ಲಿ ಕರೊನಾ ಇದೆ. ನಿತ್ಯ ವರದಿಯಾಗುತ್ತಿರುವ ಕರೋನಾ ಸೋಂಕಿತರ ಸಂಖ್ಯೆ ಪರಿಗಣಿಸಿದರೆ ರಾಜ್ಯವೂ ದೇಶದಲ್ಲಿಯೇ ಪ್ರಥಮ ಸ್ಥಾನ ಪಡೆಯುವಲ್ಲಿ ಸಂಶಯವಿಲ್ಲ.
ಅಪಾಯಕ್ಕೆ ಸಿಲುಕಿರುವ ಜಿಲ್ಲೆಗಳು
ಬೆಳಗಾವಿ
ಬೆಂಗಳೂರು ನಗರ
ಕಲಬುರಗಿ
ಉಡುಪಿ