ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಕರೋನಾ ಸೋಂಕು ಹರುಡುವುದನ್ನು ತಡೆಯುವ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಸಲುವಾಗಿ ಸ್ಟಾರ್ ಹೋಮಿಯೋಪತಿ ಸಂಸ್ಥೆ ವತಿಯಿಂದ ಉಚಿತವಾಗಿ ಬ್ಲೂಸ್ಟಾರ್ ವಿತರಿಸುವ ಕಾರ್ಯಕ್ರಮವನ್ನು ಜಯನಗರದ 4ನೇ ಬ್ಲಾಕ್ನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಜಯನಗರ ಶಾಸಕಿ ಸೌಮ್ಯ ರೆಡ್ಡಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕರೋನಾ ಸೋಂಕು ಹರಡುವ ಕಾಲದಲ್ಲಿ ಸ್ಟಾಾರ್ ಹೋಮಿಯೋಪತಿಯಿಂದ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಔಷಧಿಗಳನ್ನು ಸಾರ್ವಜನಿಕರಿಗೆ ಕೊಡುತ್ತಿರುವುದು ಅತ್ಯುತ್ತಮ ಬೆಳವಣಿಗೆಯಾಗಿದೆ. ಶಕ್ತಿಯುತ ಔಷಧಿಯನ್ನು ಪೌರಕಾರ್ಮಿಕರು, ಸಾರ್ವಜನಿಕರು ನಿತ್ಯ ಸೇವಿಸಿ ಅವರ ಆರೋಗ್ಯವನ್ನು ಅವರೇ ಕಾಪಾಡಿಕೊಳ್ಳಬೇಕಾಗಿದೆ.
ಭಾರತದ ಸ್ಟಾಾರ್ ಆರೋಗ್ಯ ವಿಜ್ಞಾನ ಸಂಸ್ಥೆೆಯ ಆಯುರ್ವೇದದ ಅಂಗ ಸಂಸ್ಥೆೆಯಾಗಿರುವ ಸ್ಟಾಾರ್ ಹೋಮಿಯೋಪತಿ ಅವರು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಹಲವಾರು ಮಳಿಗೆಗಳನ್ನು ತೆರೆದಿದ್ದು, ಮನುಷ್ಯರಿಗೆ ಕರೋನಾ ಸೋಂಕು ಹರಡದಂತೆ ಮುನ್ನೆೆಚ್ಚರಿಕಾ ಕ್ರಮವಾಗಿ ಇದನ್ನು ಬಳಸಬಹುದಾಗಿದೆ. ದೇಹದಲ್ಲಿ ಅತಿ ಹೆಚ್ಚಾಾಗಿ ರೋಗ ನಿರೋಧಕ ಶಕ್ತಿಿಯನ್ನು ಹೆಚ್ಚಿಿಸಿಕೊಳ್ಳುವ
ಶಕ್ತಿಿಯುತ ಬೂಸ್ಟರ್ಗಳನ್ನು ನೀಡಲಾಯಿತು.
ಎನರ್ಜಿ ಬೂಸ್ಟರ್ ಕಿಟ್ ಅನ್ನು ಉಚಿತವಾಗಿ ಪೌರಕಾರ್ಮಿಕರು, ಬಿಬಿಎಂಪಿ ಸಿಬ್ಬಂದಿ, ಸಾರ್ವಜನಿಕರಿಗೆ ಸಾಂಕೇತಿಕವಾಗಿ ವಿತರಿಸಲಾಯಿತು. ಹೋಮಿಯೋಪತಿಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಮನುಷ್ಯನ ದೇಹದಲ್ಲಿ ಶಕ್ತಿಿವರ್ಧಕವಾಗಿ ಕೆಲಸ ಮಾಡುತ್ತದೆ. ರಾಜ್ಯ ಹಾಗೂ ನಗರದಲ್ಲಿ ಕರೋನಾ ಸೋಂಕಿನ ಪ್ರಕರಣಗಳು ಅತಿ ವೇಗವಾಗಿ ಹರಡುತ್ತಿಿರುವ ಸಂದರ್ಭದಲ್ಲಿ ಹೋಮಿಯೋಪತಿ ಸಂಸ್ಥೆೆ ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಅತ್ಯುತ್ತಮವಾದ ಆರ್ಯುವೇದ ಔಷಧವನ್ನು ತಯಾರಿಸಿ ಮಾರುಕಟ್ಟೆೆಗೆ ಬಿಡುಗಡೆ ಮಾಡಲಾಗಿದೆ. ಇನ್ನು ದೇಹವನ್ನು ಸಧೃಡಗೊಳಿಸುವ ಸಲುವಾಗಿ ಎಲ್ಲಾಾ ವಯೋಮಾನದವರು ಸಹಾ ನಿತ್ಯ ಸೇವನೆ ಮಾಡುವುದರಿಂದ ಆರೋಗ್ಯ ಸುಧಾರಿಸುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ಟಾಾರ್ಹೋಮಿಯೋಪತಿ ವ್ಯವಸ್ಥಾಾಪಕ ನಿರ್ದೇಶಕ ಡಾ. ಶ್ರೀನಿವಾಸ ಗುಪ್ತ, ಡಾ.ಉಷಾರಾಣಿ, ಡಾ. ಪೂರ್ಣಿಮಾ ಇದ್ದರು. |
|