Monday, 25th November 2024

ಕರೋನಾ ಆರ್ಭಟ: 14 ಸೋಂಕಿತರ ಸಾವು

ಬೆಂಗಳೂರು: ರಾಜ್ಯದಲ್ಲಿ ಡ್ರ್ಯಾಗನ್ ಮಹಾಮಾರಿ ಕರೋನಾ ಅರ್ಭಟ ಹೆಚ್ಚಾಗಿದ್ದು, ರಾಜ್ಯದಲ್ಲಿ ಇಂದು ಬರೋಬ್ಬರಿ 14 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಕರೋನಾ ಸಾವಿನ್ ಸಂಖ್ಯೆ 164ಕ್ಕೇರಿದೆ. ಉಳಿದಂತೆ ಅನ್ಯಕಾರಣಗಳಿಂದ ನಾಲ್ವರು ಮೃತಪಟ್ಟಿದ್ದಾರೆ.
ಬಳ್ಳಾರಿಯ 28 ವರ್ಷದ ಯುವಕ ಕೊರೊನಾಗೆ ಬಲಿಯಾಗಿದ್ದು, ಬೆಂಗಳೂರಿನಲ್ಲಿ 5, ಬಳ್ಳಾರಿ 4, ರಾಮನಗರ, ಕಲಬುರಗಿ ತಲಾ 2, ತುಮಕೂರಿನಲ್ಲಿ ಒಂದು ಸಾವಿನ ಪ್ರಕರಣ ವರದಿಯಾಗಿದೆ. ರಾಜ್ಯದಲ್ಲಿ 112 ಮಂದಿ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು ನಗರದವೊಂದರಲ್ಲೇ ಅತಿ ಹೆಚ್ಚು 63 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಾವನ್ನಪ್ಪಿದರ ವಿವರ:
1) ರೋಗಿ 7,606: ಬೆಂಗಳೂರು ನಗರದ 59 ವರ್ಷದ ಮಹಿಳೆ. ವಿಷಮ ಶೀತ ಜ್ವರ ಮತ್ತು ಉಸಿರಾಟದ ಸಮಸ್ಯೆಯಿಂದ ಜೂನ್ 10 ನಿಗದಿತ ಆಸ್ಪತ್ರೆಗೆ ದಾಖಲಾಗಿದ್ದರು. ಮಧುಮೇಹದಿಂದ ಸಮಸ್ಯೆ ಹೊಂದಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಜೂನ್ 24 ರಂದು ಸಾವನ್ನಪ್ಪಿದ್ದರು.
2) ರೋಗಿ 7,816: ಬೆಂಗಳೂರು ನಗರದ 54 ವರ್ಷದ ಮಹಿಳೆ. ವಿಷಮ ಶೀತ ಜ್ವರ ಹಾಗೂ ಉಸಿರಾಟದ ಸಮಸ್ಯೆ ಕಾರಣದಿಂದ ಜೂನ್ 17 ರಂದು ನಿಗದಿತ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಜೂನ್ 23 ರಂದು ಸಾವನ್ನಪ್ಪಿದ್ದರು.
3) ರೋಗಿ 9,071: ಬಳ್ಳಾರಿ ಜಿಲ್ಲೆಯ 59 ವರ್ಷದ ಪುರುಷ. ವಿಷಮ ಶೀತ ಜ್ವರ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಜೂನ್ 20 ರಂದು ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂನ್ 23 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.
 4) ರೋಗಿ 9,665: ಬಳ್ಳಾರಿ ಜಿಲ್ಲೆಯ 73 ವರ್ಷದ ವೃದ್ಧ. ವಿಷಮ ಶೀತ ಜ್ವರ, ಉಸಿರಾಟದ ಸಮಸ್ಯೆ ಹಾಗೂ ಕೆಮ್ಮನಿಂದ ಬಳಲುತ್ತಿದ್ದರು. ಮಧುಮೇಹದ ಸಮಸ್ಯೆ, ಅಧಿಕ ರಕ್ತದೊತ್ತಡ ಆರೊಗ್ಯ ಸಮಸ್ಯೆ ಹೊಂದಿದ್ದರು. ಜೂನ್ 21 ರಂದು ನಿಗದಿತ ಆಸ್ಪತ್ರೆಗೆ ದಾಖಲಾಗಿದ್ದ ಇವರು ಜೂನ್ 24 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.
5) ರೋಗಿ 9,844: ಕಲಬುರಗಿ ಜಿಲ್ಲೆಯ 78 ವರ್ಷದ ವೃದ್ಧ. ತೀವ್ರ ಉಸಿರಾಟದ ಸಮಸ್ಯೆ, ಕೆಮ್ಮುನಿಂದ ಬಳಲುತ್ತಿದ್ದರು. ಅಧಿಕ ರಕ್ತದೊತ್ತಡ ಹಾಗೂ ದೀರ್ಘಕಾಲದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು.
6) ರೋಗಿ 9845: ಕಲಬುರಗಿಯ 55 ವರ್ಷದ ಪುರುಷ. ಉಸಿರಾಟದ ತೊಂದರೆ, ಕೆಮ್ಮು, ಸಾರಿಯಿಂದ ಬಳಲುತ್ತಿದ್ದರು. ಜೂನ್ 21ರಂದು ದಾಖಲಾಗಿದ್ದ ರೋಗಿ ಚಿಕಿತ್ಸೆ ಫಲಕಾರಿಯಾಗದೇ ಜೂನ್ 22ರಂದು ನಿಧನರಾಗಿದ್ದಾರೆ. ಈ ವ್ಯಕ್ತಿ ಹೃದಯ ಸಂಬಂಧಿ ಕಾಯಿಲೆ ಮತ್ತು ಲಿವರ್ ಸಮಸ್ಯೆಯಿಂದಲೂ ಬಳಲುತ್ತಿದ್ದರು
7) ರೋಗಿ 9860: ಬಳ್ಳಾರಿಯ 43 ವರ್ಷದ ವ್ಯಕ್ತಿ. ಜ್ವರದ ಲಕ್ಷಣಗಳು, ಉಸಿರಾಟದ ತೊಂದರೆ ಮತ್ತು ಹೊಟ್ಟೆ ನೋವು ಸಹ ಕಾಣಿಸಿಕೊಂಡಿತ್ತು. ಜೂನ್ 22ರಂದು ದಾಖಲಾದ ದಿನವೇ ರೋಗಿ ಸಾವನ್ನಪ್ಪಿದ್ದು, ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು.
8) ರೋಗಿ 9878: ಬಳ್ಳಾರಿಯ 28 ವರ್ಷದ ಯುವಕ. ವಿಷಮ ಶೀತ ಜ್ವರದ ಲಕ್ಷಣಗಳು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೂನ್ 22ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
9) ರೋಗಿ 9900: ತುಮಕೂರಿನ 56 ವರ್ಷದ ಪುರುಷ. ಉಸಿರಾಟದ ತೊಂದರೆ ಕಾಣಿಕೊಂಡ ಹಿನ್ನೆಲೆಯಲ್ಲಿ ಜೂನ್ 22ರಂದು ನಿಗದಿತ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಜೂನ್ 23ರಂದು ನಿಧನರಾಗಿದ್ದಾರೆ. ರೋಗಿ ಜ್ವರ, ಉಸಿರಾಟದ ತೊಂದರೆ, ಕೆಮ್ಮು, ಡಯಾಬಿಟಿಸ್, ರಕ್ತದೊರತ್ತಡ ಮತ್ತು ನರಗಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು.
 10) ರೋಗಿ 9925: ರಾಮನಗರದ 53 ವರ್ಷದ ಪುರುಷನಾಗಿದ್ದು, ವಿಷಮ ಶೀತ ಜ್ವರದ ಲಕ್ಷಣಗಳು ಕಾಣಿಸಿಕೊಂಡಿತ್ತು. ಜೂನ್ 24ರಂದ ನಿವಾಸದಲ್ಲಿಯೇ ರೋಗಿ ಸಾವನ್ನಪ್ಪಿದ್ದಾನೆ. ಸಾವನ್ನಪ್ಪಿರುವ ರೋಗಿ ಡಯಾಬಿಟಿಸ್ ನಿಂದ ಬಳಲುತ್ತಿದ್ದರು.
11) ರೋಗಿ 9926: ರಾಮನಗರದ 60 ವರ್ಷದ ವೃದ್ಧ. ರೋಗಿ 8515ರ ಸಂಪರ್ಕದಿಂದ ಸೋಂಕು ತಗುಲಿತ್ತು. ಜೂನ್ 21ರಂದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತುಇ ಚಿಕಿತ್ಸೆ ಫಲಕಾರಿಯಾಗದೇ ಜೂನ್ 24ರಂದು ನಿಧನರಾಗಿದ್ದಾರೆ. ಸಾವನ್ನಪ್ಪಿರುವ ರೋಗಿ ಡಯಾಬಿಟಿಸ್, ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.
12) ರೋಗಿ 9961: ಬೆಂಗಳೂರಿನ 70 ವರ್ಷದ ವೃದ್ಧೆ. ವಿಷಮ ಶೀತ ಜ್ವರದ ಲಕ್ಷಣಗಳು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೂನ್ 21ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ದಾಖಲಾದ ದಿನವೇ ವೃದ್ಧೆ ಸಾವನ್ನಪ್ಪಿದ್ದಾರೆ. ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.
13) ರೋಗಿ 9962: ಬೆಂಗಳೂರಿನ 50 ವರ್ಷದ ಮಹಿಳೆ. ವಿಷಮ ಶೀತ ಜ್ವರದ ಲಕ್ಷಣಗಳು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೂನ್ 21ರಂದ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ದಾಖಲಾದ ದಿನವೇ ಮಹಿಳೆ ಸಾವನ್ನಪ್ಪಿದ್ದಾರೆ. ಮಹಿಳೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.
14) ರೋಗಿ 9966: ಬೆಂಗಳೂರಿನ 68 ವರ್ಷದ ವೃದ್ಧೆ. ವಿಷಮ ಶೀತ ಜ್ವರದ ಲಕ್ಷಣಗಳು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೂನ್ 21ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ದಾಖಲಾದ ದಿನವೇ ವೃದ್ಧೆ ಸಾವನ್ನಪ್ಪಿದ್ದಾರೆ.