ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೋನಾ ಸೋಂಕು ಅಧಿಕವಾಗಿ ಹರಡುತ್ತಿರುವುದಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ. ಈ ನಡುವೆ ಕ್ವಾರಂಟೈನ್ ನಲ್ಲಿ ಇರಬೇಕಾದವರು ಸರಕಾರದ ನಿಯಮ ಗಾಳಿಗೆ ತೂರಿ ಹೊರಗಡೆ ಅಡ್ಡಾಡುತ್ತಿರುವುದು ಅಧಿಕಾರಿಗಳಿಗೆ ಮತ್ತೊೊಂದು ತಲೆನೋವಾಗಿ ಪರಿಣಮಿಸಿದೆ.
ನಗರದಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಸಿದ ಮೂವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ನಗರದ ಗಾರೆಬಾವಿಪಾಳ್ಯದ ಕೃಷ್ಣ, ಹೊಸಪಾಳ್ಯ ನಿವಾಸಿ ಚಕ್ರಧರ್, ಕೂಡ್ಲುಗೇಟ್ ನೋವೆಲ್ ಟೆಕ್ ಪಾರ್ಕ್ನ ಗೌತಮ್ಗೆ ಕ್ವಾರಂಟೈನ್ಗೆ ಒಳಗಾಗಲು ಬಿಬಿಎಂಪಿ ಅಧಿಕಾರಿಗಳು ಸೂಚಿಸಿದ್ದರು. ಆದರೂ, ಈ ಮೂವರು ಅಧಿಕಾರಿಗಳ ಸೂಚನೆ ಲೆಕ್ಕಿಸದೇ ಮನೆಯಿಂದ ಹೊರಗಡೆ ಹೋಗಿದ್ದರು. ಇದನ್ನು ಗಮನಿಸಿ ತಕ್ಷಣ ಸ್ಥಳೀಯರು ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು.
ನಂತರ ಸ್ಥಳೀಯರ ಆರೋಪವನ್ನು ಗಂಭೀರವಾಗಿ ತೆಗೆದುಕೊಂಡ ಪಾಲಿಕೆ ಅಧಿಕಾರಿಗಳು ತಕ್ಷಣವೇ ಮೂವರ ಮನೆಗೆ ಭೇಟಿ ನೀಡಿದ್ದಾರೆ. ಆದರೆ, ಆ ವೇಳೆಯಲ್ಲಿ ಈ ಮೂವರು ಮನೆಯಲ್ಲಿ ಇರಲಿಲ್ಲ. ಹೀಗಾಗಿ ಸರಕಾರದ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ ಆರೋಪದಡಿ ಬಿಬಿಎಂಪಿ ಅಧಿಕಾರಿಗಳು ಈ ಮೂವರ ವಿರುದ್ಧ ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.