Tuesday, 26th November 2024

ಖಾಸಗಿ ಆಸ್ಪತ್ರೆಗಳ ಕಳ್ಳಾಟ ಬಯಲು : ಕರ್ತವ್ಯಕ್ಕೆ ಹಾಜರಾಗದ ಬಿಎಲ್ಒಗಳ ವಿರುದ್ಧ ಕ್ರಮಕ್ಕೆ ಡಿಸಿಎಂ ಸೂಚನೆ

ಬೆಂಗಳೂರು,

ಪಶ್ಚಿಮ ವಿಭಾಗದಲ್ಲಿ ಕೋವಿಡ್-19 ಕರ್ತವ್ಯಕ್ಕೆ ಗೈರು ಹಾಜರಾಗುತ್ತಿರುವ ಬೂತ್ ಮಟ್ಟದ ಅಧಿಕಾರಿಗಳ (BLO) ವಿರುದ್ಧ ಅತ್ಯುಗ್ರ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಕೋವಿಡ್ ಕೇರ್ ಕೇಂದ್ರಗಳ ಉಸ್ತುವಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಆದೇಶಿಸಿದರ ಲ್ಲದೆ,ಗುತ್ತಿಗೆ ಆಧಾರಿತ ವೈದ್ಯರ ವೇತನ ಹೆಚ್ಚಿಸುವಂತೆ ಇದೇ ವೇಳೆ ಅವರು ಸೂಚಿಸಿದರು.

ನಗರದಲ್ಲಿಂದು ಪಶ್ಚಿಮ ವಲಯದ ಕೋವಿಡ್ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿದ ಅವರು,ಈ ವಿಭಾಗದಲ್ಲಿ ಒಟ್ಟು 7,000 ಬೂತ್ ಮಟ್ಟದ ಅಧಿಕಾರಿಗಳಿದ್ದಾರೆ.ಆ ಪೈಕಿ ಕೇವಲ 1,200 ಅಧಿಕಾರಿಗಳಷ್ಟೇ ಕರ್ತವ್ಯಕ್ಕೆ ಹಾಜ ರಾಗುತ್ತಿದ್ದು,ಉಳಿದವರು ಎಲ್ಲಿ? ಎಂದು ಹಿರಿಯ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ಬೂತ್ ಮಟ್ಟದ ಅಧಿಕಾರಿಗಳ ಬಗ್ಗೆ ಸಿಕ್ಕಾಪಟ್ಟೆ ದೂರುಗಳು ಬರುತ್ತಿವೆ.ಅನೇಕರು ಹಿರಿಯ ಅಧಿಕಾರಿಗಳಿಗೆ ವರದಿ ಮಾಡಿಕೊಂಡು ಕೂಡ ಕರ್ತವ್ಯಕ್ಕೆ ಗೈರಾಗುತ್ತಿದ್ದಾರೆ.ಇದು ಅಕ್ಷಮ್ಯ ಅಪರಾಧ.ಬೂತ್ ಮಟ್ಟದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಎಎನ್ಎಂಗಳ ಜತೆ ಸೇರಿ ಕೋವಿಡ್ ಸೋಂಕಿತರನ್ನು ಸಂಪರ್ಕಿಸುವುದು,ಕೋವಿ ಡ್ ಪರೀಕ್ಷೆಗೆ ವ್ಯವಸ್ಥೆ ಮಾಡುವುದೂ,ಜಾಗೃತಿ ಮೂಡಿಸುವುದು ಬಿಎಲ್ಓಗಳ ಕೆಲಸ.ಆದರೆ ಅವರು ಈ ವಿಭಾ ಗದ ಮಲ್ಲೇಶ್ವರ, ಗಾಂಧೀನಗರ, ರಾಜಾಜಿನಗರ, ಮಹಾಲಕ್ಷ್ಮೀ ಲೇಔಟ್, ವಿಜಯನಗರ, ಚಿಕ್ಕಪೇಟೆ ಕ್ಷೇತ್ರಗಳಲ್ಲಿ ಇವರು ಕರ್ತವ್ಯಲೋಪ ಎಸಗಿದ್ದಾರೆ.

ಇವರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಿ ಹಾಗೂ ಅವರ ಸೇವಾ ದಾಖಲಾತಿಯಲ್ಲಿ ಲೋಪವೆಸಗಿರುವುದ ನ್ನು ದಾಖಲಿಸಿ ಎಂದು ಸಭೆಯಲ್ಲಿ ಹಾಜರಿದ್ದ ಪಶ್ಚಿಮ ವಿಭಾಗದ ಕೋವಿಡ್ ಉಸ್ತುವಾರಿ ಅಧಿಕಾರಿ ಉಜ್ವಲ್ ಕುಮಾರ್ ಘೋಷ್ ಹಾಗೂ ಬಿಬಿಎಂಪಿ ವಿಶೇಷ ಆಯುಕ್ತರಾದ ರಣದೀಪ್,ಡಾ.ಬಸವರಾಜು ಅವರಿಗೆ ಕಟ್ಟುನಿ ಟ್ಟಿನ ಸೂಚನೆ ನೀಡಿದರು.

ಇಂದಿನ ಸಭೆಯಲ್ಲಿ ಖಾಸಗಿ ಆಸ್ಪತ್ರೆಗಳು ನಡೆಸುತ್ತಿರುವ ಕಳ್ಳಾಟಗಳು ಮತ್ತಷ್ಟು ಬಯಲಿಗೆ ಬಂದವು.ಬಿಬಿಎಂ ಪಿ ವೆಬ್ ತಾಣದಲ್ಲಿ ಖಾಸಗಿ ಆಸ್ಪತ್ರೆಗಳು ನೇರ ಲಿಂಕ್ ಆಗಿ ತಮ್ಮಲ್ಲಿರುವ ಖಾಲಿ ಹಾಸಿಗೆ,ಕೋವಿಡ್ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ ಮತ್ತಿತರೆ ವಿಷಯಗಳ ರಿಯಲ್ ಟೈಮ್ ನಲ್ಲಿ ಅಪ್ ಲೋಡ್ ಮಾಡಬೇಕಾಗತ್ತದೆ.ಆಗ ಆ ಮಾಹಿತಿಯೂ ಪಾಲಿಕೆ ವೆಬ್ ನಲ್ಲಿಯೂ ಇರುತ್ತದೆ.ಸರಕಾರದ ಎಚ್ಚರಿಕೆಗೆ ಮಣೆ ಹಾಕುತ್ತಿರುವಂತೆ ಕಳ್ಳಾಟ ಆಡುತ್ತಿರುವ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಕೋವಿಡ್ ಗೆ ಮೀಸಲಾದ ಹಾಸಿಗೆಗಳು ಖಾಲಿ ಇವೆ ಎಂದು ಮಾಹಿತಿ ಎಂದು ಹಾಕುತ್ತಿವೆ.ಆದರೆ, ಪಾಲಿಕೆ ವೈದ್ಯರು ಕೋವಿಡ್ ರೋಗಿಗಳನ್ನು ಆ ಆಸ್ಪತ್ರೆಗಳಿಗೆ ಕಳಿಸಿದರೆ,ಅವು ಹಾಸಿಗೆಗಳು ಖಾಲಿ ಇಲ್ಲ ಎಂದು ರೋಗಿಗಳನ್ನು ವಾಪಸ್ ಕಳಿಸುತ್ತಿವೆ.ರಿಯಲ್ ಟೈಮ್ ಅನ್ನು ಹಾಕದೇ ಅತ್ತ ಸರಕಾರವನ್ನೂ ಇತ್ತ ಜನರನ್ನು ಹಾದಿ ತಪ್ಪಿಸುತ್ತಿವೆ.ಸುಳ್ಳು ಮಾಹಿತಿ ನೀಡುತ್ತಿವೆ.ಇಂಥ ಆಸ್ಪತ್ರೆಗಳ ವಿರುದ್ಧ ನೇರವಾಗಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಉಪ ಮುಖ್ಯಮಂತ್ರಿ ಅಧಿಕಾರಿಗಳಿಗೆ ಖಡಕ್ಕಾಗಿ ಸೂಚಿಸಿದರು.

ನಗರದಲ್ಲಿರುವ ಸುಮಾರು 400ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ತಲಾ ಒಬ್ಬರಂತೆ ’ಆಪ್ತಮಿತ್ರ’ಸಿಬ್ಬಂದಿಯನ್ನು ನೇಮಿ ಸಲಾಗಿದೆ.ಇವರು ಏನು ಮಾಡುತ್ತಿದ್ದಾರೆ ಎಂದು ಗರಂ ಆದ ಅವರು ಈ ಸಿಬ್ಬಂದಿ ಸೇರಿದಂತೆ ಹಿರಿಯ ಅಧಿಕಾರಿ ಗಳು ಇಂಥ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ.ತಪ್ಪು,ಸುಳ್ಳು ಕಂಡುಬಂದರೆ ಸ್ಥಳದಲ್ಲೇ ಕ್ರಮ ಜರುಗಿಸಿ.ನಿಮ್ಮ ಜತೆ ಸರಕಾರವಿದೆ ಎಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕೋವಿಡ್ ಹಿನ್ನೆಲೆಯಲ್ಲಿ ಹೊಸದಾಗಿ ನೇಮಕವಾಗುತ್ತಿರುವ ಗುತ್ತಿಗೆ ವೈದ್ಯರಿಗೆ 80,000 ರೂ.ಮಾಸಿಕ ವೇತನ ನಿಗದಿ ಮಾಡಲಾಗಿದೆ.ಇದೇ ರೀತಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಹಾಲಿ ಗುತ್ತಿಗೆ ವೈದ್ಯರಿಗೆ 60,000 ರೂ. ವೇತನ ನೀಡಲಾಗುತ್ತಿದ್ದು,20,000 ರೂ.ಕೋವಿಡ್ ಭತ್ಯೆ ಸೇರಿಸಿ ಒಟ್ಟು 80,000 ರೂ.ವೇತನ ನೀಡಿ.ಇದನ್ನು ಕೂಡಲೇ ಮಾಡಿ ಎಂದು ಉಪ ಮುಖ್ಯಮಂತ್ರಿ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಾಗೆಯೇ ಎಎನ್ಎಂಗಳಿಗೂ ವೇತನದ ಜತೆಗೆ 5,000 ರೂ.ಕೋವಿಡ್ ಭತ್ಯೆ ನೀಡಲು ಸೂಚಿಸಿದರಲ್ಲದೆ,ಹಾಗೆ ಯೇ ಕೋವಿಡ್ ವಾರಿಯರ್ ಗಳಾಗಿ ಕೆಲಸ ಮಾಡುತ್ತಿರುವ ಸ್ವಯಂ ಸೇವಕರಿಗೂ ಹಾಗೂ ಗಂಟಲು ದ್ರವ ಸಂಗ್ರ ಹ ಮಾಡುವ ಲ್ಯಾಬ್ ಟೆಕ್ನಿಷಿಯನ್ನುಗಳಿಗೂ ಕೋವಿಡ್ ಭತ್ಯೆ ನೀಡುವ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಕಳಿಸುವಂ ತೆ ಅಶ್ವಥ್ ನಾರಾಯಣ್ ಅಧಿಕಾರಿಗಳಿಗೆ ಸೂಚಿಸಿದರು.

ಇತ್ತೀಚೆಗೆ ಹೆಚ್ಚುತ್ತಿರುವ ಸಾವುಗಳು ಕೋವಿಡ್ ನಿಂದ ಆಗುತ್ತಿವೆಯೇ ಅಥವಾ ಸೋಂಕು ತಗುಲಿದ ಮೇಲೆ ತಡ ವಾಗಿ ಬಂದು ಚಿಕಿತ್ಸೆ ಪಡೆದಿದ್ದರಿಂದ ಆಗುತ್ತಿವೆಯೇ ಇಲ್ಲವೇ ಬೇರೆ ಯಾವುದಾದರೂ ಕಾಯಿಲೆಯಿಂದ ಮೃತ ಪಟ್ಟರೆ ಎಂಬ ಬಗ್ಗೆ ವಿಶ್ಲೇಷಣೆ ನಡೆಸಿ ವರದಿ ನೀಡುವಂತೆ ಅವರು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.