Tuesday, 26th November 2024

ಗರ್ಭಿಣಿಯರಿಗಾಗಿ ಪ್ರತ್ಯೇಕ ಒಟಿ ಸ್ಥಾಾಪನೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಗರ್ಭಿಣಿ ಮಹಿಳೆಯರಲ್ಲಿ ಕರೋನಾ ಸೋಂಕು ಹೆಚ್ಚಾಾಗುತ್ತಿರವುದರಿಂದ ಆಸ್ಪತ್ರೆಯ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಆತಂಕ ಹೆಚ್ಚಾಗುವಂತೆ ಮಾಡಿದೆ.
ನಗರದಲ್ಲಿ ಬಹುತೇಕ ಆಸ್ಪತ್ರೆೆಗಳು ಇದೀಗ ಸೋಂಕಿತ ಗರ್ಭಿಣಿ ಮಹಿಳೆಯರಿಗಾಗಿ ಪ್ರತ್ಯೇಕ ಶಸ್ತ್ರಚಿಕಿತ್ಸೆೆ ನಡೆಸಲು ಮುಂದಾಗಿದೆ.
ಕೆಲ ದಿನಗಳ ಹಿಂದಷ್ಟೇ ಇಎಸ್‌ಐ ಆಸ್ಪತ್ರೆೆಯಲ್ಲಿ ಗರ್ಭಿಣಿ ಮಹಿಳೆಯೊಬ್ಬರಿಗೆ ತುರ್ತುಶಸ್ತ್ರ ಚಿಕಿತ್ಸೆೆ ನಡೆಸಲಾಗಿತ್ತು. ಮಹಿಳೆಗೆ ಸೋಂಕು ಇರುವ ಕುರಿತು ವೈದ್ಯರಿಗೆ ಮಾಹಿತಿಯೇ ಇರಲಿಲ್ಲ. ಅದೃಷ್ಟವಶಾತ್ ಕ್ರಮಗಳನ್ನು ಕೈಗೊಂಡಿದ್ದರು.
ಶಸ್ತ್ರಚಿಕಿತ್ಸೆೆ ಪೂರ್ಣಗೊಂಡ ಬಳಿಕ ಮಹಿಳೆಯಲ್ಲಿ ಕರೋನಾ ವೈರಸ್ ಇರುವುದು ತಿಳಿದಾಗ ಆಸ್ಪತ್ರೆೆಯ ಸಿಬ್ಬಂದಿಗಳು ಹಾಗೂ ವೈದ್ಯರು ಆತಂಕಕ್ಕೊೊಳಗಾಗಿದ್ದರು.  ಇದೇ ರೀತಿ ಮತ್ತೊೊಂದು ಘಟನೆ ಕೆ.ಸಿ ಜನರಲ್ ಆಸ್ಪತ್ರೆೆಯಲ್ಲಿ ಕಳೆದ ಜು.5ರಂದು ನಡೆದಿತ್ತು. ತಮಗೆ ಕರೋನಾ ಇರುವುದನ್ನು ಮುಚ್ಚಿಿಟ್ಟಿಿದ್ದ ಮಹಿಳೆ, ಸಿಸೆರಿಯನ್ ಮಾಡಿಸಿಕೊಂಡಿದ್ದರು.
ಮಹಿಳೆ ನಮ್ಮಿಿಂದ ಸತ್ಯ ಮುಚ್ಚಿಿಟ್ಟದ್ದರು. ಮಾಹಿತಿ ತಿಳಿಯದಿದ್ದರೂ ನಾವು ಪಿಪಿಇ ಕಿಟ್‌ಸ್‌ ಧರಿಸಿಯೇ ಮಹಿಳೆಗೆ ಶಸ್ತ್ರಚಿಕಿತ್ಸೆೆ ನಡೆಸಿದ್ದೆೆವು. ಎಲ್ಲಾಾ  ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಶಸ್ತ್ರಚಿಕಿತ್ಸೆೆ ಪುರ್ಣಗೊಂಡ ಬಳಿಕವೇ ಮಹಿಳೆ ತನಗೆ ಸೋಂಕಿರುವುದಾಗಿ ತಿಳಿಸಿದರು. ಇದರಿಂದ ವಾರ್ಡ್‌ನಲ್ಲಿದ್ದ  ಮಹಿಳೆಯರು, ಆಸ್ಪತ್ರೆೆಯ ಸಿಬ್ಬಂದಿಗಳು ಆತಂಕಕ್ಕೊೊಳಗಾಗಿದ್ದರು ಎಂದು ಆಸ್ಪತ್ರೆೆ ಸಿಬ್ಬಂದಿ ತಿಳಿಸಿದ್ದಾಾರೆ.
ಆಸ್ಪತ್ರೆೆಯಲ್ಲಿ ಕೇವಲ ಒಂದೇ ಒಂದು ಒಟಿ ಇದ್ದು ಕರೋನಾ ಇರುವ ಹಾಗೂ ಕರೋನಾ ಇಲ್ಲದಿರುವ ಎಲ್ಲರಿಗೂ ಇಲ್ಲಿಯೇ ಶಸ್ತ್ರಚಿಕಿತ್ಸೆೆ ನಡೆಸಲಾಗುತ್ತಿಿದೆ. ಇದರಿಂದಾಗಿ ಇತರೆ ಮಹಿಳೆಯರು ಆತಂಕ ವ್ಯಕ್ತಪಡಿಸುತ್ತಿಿದ್ದಾಾರೆ. ಹೀಗಾಗಿ ಸೋಂಕಿತ ಗರ್ಭಿಣಿಯರಿಗೆ ಮುಂದಿನ 3 ರಿಂದ 4 ದಿನಗಳಲ್ಲಿ ಪ್ರತ್ಯೇಕ ಒಟಿ ಸ್ಥಾಾಪಿಸಲಾಗುತ್ತದೆ ಎಂದು ವೈದ್ಯಕೀಯ ಅಧೀಕ್ಷಕರಾದ ಬಿ.ಆರ್.ವೆಂಕಟೇಶಯ್ಯ ತಿಳಿಸಿದರು.
ಈ ಕುರಿತು ಜನರಲ್ ಆಸ್ಪತ್ರೆೆಯ ವೈದ್ಯರು ಮಾತನಾಡಿ, ಕರೋನಾ ಪೀಡಿತ ಗರ್ಭಿಣಿ ಮಹಿಳೆಯರಿಗಾಗಿ ಪ್ರತ್ಯೇಕ ಒಟಿ
ರಚಿಸಲಾಗುತ್ತಿಿದೆ. ಶೀಘ್ರದಲ್ಲೇ ಈ ಒಟಿಗಳು ತಮ್ಮ ಕಾರ್ಯನಿರ್ವಹಣೆ ಆರಂಭಿಸಲಿವೆ ಎಂದು ತಿಳಿಸಿದರು.