ಬೆಂಗಳೂರು:
ಗಾಂಜಾ ಮತ್ತಿನಲ್ಲಿ ಟ್ರಾಫಿಕ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ಪ್ರಕರಣ ಸಂಬಂಧಿಸಿದಂತೆ ಬಂಧಿತ ಆರೋಪಿಗಳ ವಿರುದ್ಧ ಎನ್ಡಿಪಿಎಸ್ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.
ಅಹ್ಮದ್ ಖುರೇಷಿ, ಸೈಯದ್ ಸಾಧಿಕ್ ಹಾಗೂ ಓರ್ವ ಬಾಲಕನ ಮೇಲೆ ಈ ಕಾಯಿದೆಯಡಿ ದೂರು ದಾಖಲಾಗಿದ್ದು, ಈ ಕಾಯಿದೆ ಡ್ರಗ್ ಪೆಡ್ಲರ್ಗಳ ಮೇಲೆ ಹಾಕಲಾಗುತ್ತದೆ. ಆ. 30ರಂದು ವಿಜಯನಗರ ಮುಖ್ಯ ರಸ್ತೆಯ ಮಾರುತಿ ಮಂದಿರ ಬಳಿ ಗಾಂಜಾ ನಶೆಯಲ್ಲಿ ಅಡ್ಡಾದಿಡ್ಡಿ ಬೈಕ್ನಲ್ಲಿ ಆರೋಪಿಗಳು ಸಂಚರಿಸುತ್ತಿದ್ದರು. ಇನ್ನು ಬೈಕ್ ತಡೆದು ವಿಜಯನಗರ ಸಂಚಾರ ಠಾಣೆ ಕಾನ್ಸ್ಟೇಬಲ್ ವಿದ್ಯಾರ್ಧ ಪ್ರಶ್ನೆ ಮಾಡಿದ್ದರು.
ಈ ವೇಳೆ ಗಾಂಜಾ ಮತ್ತಲ್ಲಿದ್ದ ಆರೋಪಿಗಳು ಏಕಾಏಕಿ ಕಾನ್ಸ್ಟೇಬಲ್ ವಿದ್ಯಾರ್ಧಗೆ ಥಳಿಸಿ ಪರಾರಿಯಾಗಲು ಯತ್ನಿಸಿದ್ದರು. ಇನ್ನು ಆರೋಪಿಗಳನ್ನು ಸ್ಥಳೀಯರ ನೆರವಿನಿಂದ ವಶಕ್ಕೆ ಪಡೆದಿದ್ದ ವಿಜಯನಗರ ಪೊಲೀಸರು ಪರಿಶೀಲನೆ ಮಾಡಿದಾಗ ಬಂಧಿತರ ಜೇಬಿನಲ್ಲಿ ಗಾಂಜಾ ಪತ್ತೆಯಾಗಿತ್ತು.