Monday, 28th October 2024

ಗೃಹ ಬಳಕೆ  ವಸ್ತುಗಳ ಬೆಲೆ ಏರಿಕೆ ಗ್ರಾಹಕರಿಗೆ ತಲೆ ಬಿಸಿ 

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು
ಕಳೆದ ಎರಡು ತಿಂಗಳ ಲಾಕ್‌ಡೌನ್ ಅವಧಿಯಲ್ಲಿ ಅಗತ್ಯವಸ್ತುಗಳ ಪೂರೈಕೆಯಲ್ಲಿ ಏರುಪೇರಾಗಿರುವುದರಿಂದ ಕೆಲವು ಅಗತ್ಯ ವಸ್ತುಗಳ ಬೆಲೆ ಶೇ.5 ರಿಂದ 10 ರಷ್ಟು ಏರಿಕೆಯಾಗಿದೆ.
ಲಾಕ್‌ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳು ಪೂರೈಕೆಯಾಗುತ್ತಿಿದ್ದವು. ಇವುಗಳ ಬೆಲೆ ಅಲ್ಪಮಟ್ಟಿಿಗೆ ಹೆಚ್ಚಳವಾದರೂ ಗ್ರಾಾಹಕರಿಗೆ ಹೊರೆ ಎನಿಸಲಿಲ್ಲ. ಆದರೆ ಕೆಲವು ಮನೆ ಬಳಕೆಯ ವಸ್ತುಗಳ ಬೆಲೆ ಹೆಚ್ಚಳವಾಗಿದ್ದು ಗ್ರಾಾಹಕರಿಗೆ ಶಾಕ್ ನೀಡಿದೆ.
ಕರೋನಾ ಹಿನ್ನೆೆಲೆಯಲ್ಲಿ ಲಾಕ್‌ಡೌನ್ ಮಾಡಿದ್ದರಿಂದ ಮನೆ ಬಳಕೆಯ ವಸ್ತುಗಳಾದ ಎಲೆಕ್ಟ್ರಿಿಕ್, ಎಲೆಕ್ಟ್ರಾಾನಿಕ್, ಡಿಜಿಟಲ್ ವಸ್ತುಗಳು,ಮೊಬೈಲ್, ಬೆಳ್ಳಿಿ, ಬಂಗಾರ, ಪೀಠೋಪಕರಣ ಮತ್ತಿಿತರ ವಸ್ತುಗಳ ಬೆಲೆಯಲ್ಲಿ ದಿಢೀರ್ ಎಂದು ಏರಿಕೆಯಾಗಿದೆ. ಲಾಕ್‌ಡೌನ್‌ಗಿಂತ ಮುಂಚೆ ಇದ್ದ ಬೆಲೆಗೂ ಈಗಿನ ಬೆಲೆಗೂ ಶೇ5 ರಿಂದ 10ರಷ್ಟು ಹೆಚ್ಚಳವಾಗಿದೆ.
ಅಂಗಡಿಗಳಲ್ಲಿ ಹೋಗಿ ಖರೀದಿ ಮಾಡಲಾಗುತ್ತಿಿದ್ದ ಮೊಬೈಲ್ ದರ ಈಗ 1000 ರು ಏರಿಕೆಯಾಗಿದೆ. ಹವಾನಿಯಂತ್ರಿಿತ, ಫ್ರಿಿಡ್‌ಜ್‌,ವಾಷಿಂಗ್ ಮಿಷಿನ್ ಮತ್ತಿಿತರ ಎಲೆಕ್ಟ್ರಾಾನಿಕ್ ವಸ್ತುಗಳ ಬೆಲೆ ಶೇ.10ರವರೆಗೆ ಹೆಚ್ಚಳವಾಗಿದೆ. ಇದು  ಮಾತ್ರವಲ್ಲದೆ ಧೂಮಪಾನ ಮಾಡುವವರಿಗೆ ವ್ಯಾಾಪಾರಿಗಳು ಮತ್ತಷ್ಟು ಶಾಕ್ ನೀಡಿದ್ದಾಾರೆ. 10 ಸಿಗರೇಟ್ ಇರುವ ಪ್ಯಾಾಕ್‌ನ ಬೆಲೆ 40 ರಿಂದ 50 ರು ಹೆಚ್ಚಳವಾಗಿದೆ.
ಬೆಂಗಳೂರಿನ ಎಸ್.ಪಿ ರಸ್ತೆೆಯಲ್ಲಿ ಎಲೆಕ್ಟ್ರಾಾನಿಕ್ ವಸ್ತುಗಳು ಹಾಗೂ ಅದರ ಬಿಡಿಭಾಗ ಮಾರಾಟಕ್ಕೆೆ ಅತ್ಯಂತ ಪ್ರಶಸ್ತ ತಾಣವಾಗಿದೆ. ಇನ್ನು ಮಲ್ಲೇಶ್ವರ, ಕತ್ರಿಿಗುಪ್ಪೆೆ, ಗಾಂಧಿನಗರ,ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್, ಎಲೆಕ್ಟ್ರಾಾನಿಕ್ ಉತ್ಪನ್ನಗಳ ಮಾರಾಟ ತಾಣಗಳಾಗಿವೆ. ಕಳೆದ ಎರಡು ತಿಂಗಳಿಂದ ಈ ಭಾಗಗಳಲ್ಲಿ ವ್ಯಾಾಪಾರ ಇರಲಿಲ್ಲ. ಇದರಿಂದ ನಷ್ಟದಲ್ಲಿರುವ ವ್ಯಾಾಪಾರಸ್ಥರು ವ್ಯಾಾಪಾರ ಆರಂಭಿಸಿದ್ದಾಾರೆ. ಖರೀದಿಗೆ ಜನರೂ ಬರುತ್ತಿಿದ್ದಾಾರೆ. ಆದರೆ ಬೆಲೆ ಏರಿಕೆ ವಿಷಯ ತಿಳಿದು ಅಸಮಾಧಾನ ವ್ಯಕ್ತಪಡಿಸುತ್ತಿಿದ್ದಾಾರೆ.