Thursday, 12th December 2024

ಚಿರಂಜೀವಿ ಸರ್ಜಾ ವಿಧಿವಶ: ಕಂಬನಿ ಮಿಡಿದ ಚಿತ್ರರಂಗ

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು
ಕನ್ನಡ ಚಿತ್ರರಂಗದ ಯುವ ನಟ ಚಿರಂಜೀವಿ ಸರ್ಜಾ ಹಠಾತ್ ಆಗಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 39 ವರ್ಷ ವಯಸ್ಸಾಾಗಿತ್ತು.
ಉಸಿರಾಟದ ಸಮಸ್ಯೆೆ ಕಾಣಿಸಿಕೊಂಡ ಹಿನ್ನೆೆಲೆಯಲ್ಲಿ ಭಾನುವಾರ ಮಧ್ಯಾಾಹ್ನ 2.20ಕ್ಕೆೆ ಜಯನಗರದ ಸಾಗರ್ ಅಪಲೋ ಆಸ್ಪತ್ರೆೆಗೆ ದಾಖಲಿಸಲಾಗಿತ್ತು. ಆಸ್ಪತ್ರೆೆಗೆ ತರುವಾಗಲೇ ಅವರು ಚಿಕಿತ್ಸೆೆಗೆ ಸ್ಪಂದಿಸದ ರೀತಿಯಲ್ಲಿದ್ದರು. ಆದರೆ ಅಂತಿಮವಾಗಿ 3.48ಕ್ಕೆೆ ನಿಧನರಾದರು ಎಂದು ಆಸ್ಪತ್ರೆೆಯ ವೈದ್ಯರು ತಿಳಿಸಿದ್ದಾಾರೆ.
ವಾಯುಪುತ್ರ ಚಿತ್ರದ ಮೂಲಕ ಸ್ಯಾಾಂಡಲ್ ವುಡ್ ಗೆ ಕಾಲಿಟ್ಟ ಚಿರಂಜೀವಿ ಸರ್ಜಾ ಅವರು, ದಂಡಂ ದಶಗುಣಂ, ವರದನಾಯಕ, ಸಿಂಗ ಸೇರಿದಂತೆ 22ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ನಿಧನಕ್ಕೆೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.
ಚಿರಂಜೀವಿ ಸರ್ಜಾರ ಅವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾಾರ ತುಮಕೂರಿನ ಜಕ್ಕೇನಹಳ್ಳಿಿಯಲ್ಲಿ ಸೊಮವಾರ ನೆರವೇರಲಿದೆ. ತಮ್ಮ ಅಜ್ಜಿಿಯ ಮನೆಯಾದ ಜಕ್ಕೇನ ಹಳ್ಳಿಿಯಲ್ಲಿ ತಾತ ಶಕ್ತಿಿ ಪ್ರಸಾದ್ ಅವರ ಸಮಾಧಿ ಪಕ್ಕದಲ್ಲಿ ಅಂತ್ಯ ಸಂಸ್ಕಾಾರ ಮಾಡಲಾಗುವುದು ಎಂದು ಅವರ ಕುಟುಂಬ ಮೂಲಗಳು ಹೇಳಿವೆ.
ಚಿರಂಜೀವಿ ಸರ್ಜಾ ಅವರ ನಿಧನಕ್ಕೆೆ ಮುಖ್ಯಮಂತ್ರಿಿ ಬಿ.ಎಸ್. ಯಡಿಯೂರಪ್ಪ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಚಿರಂಜೀವಿ ಸರ್ಜಾ ಅವರ ನಿಧನದಿಂದ ಕನ್ನಡ ಚಲನಚಿತ್ರ ರಂಗ ಓರ್ವ ಉತ್ತಮ ನಟನನ್ನು ಕಳೆದುಕೊಂಡಂತಾಗಿದೆ. ಭಗವಂತ ಅವರ ಆತ್ಮಕ್ಕೆೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಿ ನೀಡಲಿ ಎಂದು ಪ್ರಾಾರ್ಥಿಸುವುದಾಗಿ
ಮುಖ್ಯಮಂತ್ರಿಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಿ ಸಿದ್ದರಾಮಯ್ಯ ಟ್ವೀಟ್ ಮಾಡಿ, ಕನ್ನಡ ಚಿತ್ರರಂಗದ ಯುವ ನಟ ಚಿರಂಜೀವಿ ಸರ್ಜಾ ಅವರ ಸಾವಿನ ಸುದ್ದಿ ನೋವುಂಟುಮಾಡಿದೆ. ಇನ್ನಷ್ಟು ಕಾಲ ನಟಿಸುತ್ತಾಾ, ಎಲ್ಲರನ್ನು ರಂಜಿಸುತ್ತಾಾ ನಮ್ಮ ನಡುವೆ ಈ ಹುಡುಗ ಇರಬೇಕಿತ್ತು. ಅವರ ದುಃಖತಪ್ತ ಕುಟುಂಬ ವರ್ಗದವರಿಗೆ ಹಾಗೂ ಅಭಿಮಾನಿಗಳಿಗೆ ನನ್ನ ಸಂತಾಪಗಳು ಎಂದು ತಿಳಿಸಿದ್ದಾಾರೆ.
ಸಾಗರ್ ಅಪಲೋ ಆಸ್ಪತ್ರೆೆ ಮತ್ತು ಬಸವನಗುಡಿ ಅವರ ನಿವಾಸಕ್ಕೆೆ ಹಲವಾರು ಚಿತ್ರರಂಗದ ಗಣ್ಯರು ತೆರೆಳಿ ಅಂತಿಮ ದರ್ಶನ ಪಡೆದರು.
ನಟಿ, ಸಂಸದೆ ಸುಮಲತ ಅಂಬರೀಷ್ ಮಾತನಾಡಿ, ಈ ವಿಷಯ ತಮತೆ ಆಘಾತ ಮೂಡಿಸಿದೆ. ಚಿರುಗೆ ತುಂಬಾ ಒಳ್ಳೆೆಯ
ಭವಿಷ್ಯವಿತ್ತು. ಚಿತ್ರರಂಗದಲ್ಲಿ ಉತ್ತಮವಾಗಿ ಬೆಳೆಯುತಿದ್ದ ನಟ. ನಮ್ಮ ಮನೆಗೆ ಸದಾ ಬರುತ್ತಿಿದ್ದ. ಏನೇ ಸಮಸ್ಯೆೆ ಇದ್ದರು ಸಹ ಮೊದಲಿಗೆ ಮನೆಗೆ ಬಂದು ತಿಳಿಸುತ್ತಿಿದ್ದ. ಆಂಬರೀಷ್ ಜತೆಯೂ ಉತ್ತಮ ಬಾಂಧವ್ಯ ಹೊಂದಿದ್ದ ಎಂದರು.
ಚಿರಂಜೀವಿ ಸರ್ಜಾ ಅವರ ಒಡನಾಡಿ ಸೃಜನ್ ಲೋಕೇಶ್, ನಾವೆಲ್ಲಾ ಒಟ್ಟಿಿಗೆ ಬೆಳೆದವರು, ಸರ್ಜಾ ನಮ್ಮ ಜತೆ ಇಲ್ಲ ಎಂದು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಿಲ್ಲ. ಹೀಗಿರುವಾಗ ಏನೆಂದು ಪ್ರತಿಕ್ರಿಿಯೆ ನೀಡಲಿ ಎಂದು ಕಣ್ಣೀರಾದರು.
ನಟ ಶಿವರಾಜ್ ಕುಮಾರ್ ಮಾತನಾಡಿ, ನನ್ನ ಸ್ವಂತ ತಮ್ಮನನ್ನೇ ಕಳೆದುಕೊಡ ನೋವು ನನಗಾಗಿದೆ. ಬೆಳೆಯುತಿದ್ದ ಹುಡುಗ.
ಇತ್ತೀಚಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದ. ಅತ್ಯಂತ ಸಂಭಾವಿತ ಎಂದರು.
ನಿರ್ಮಾಪಕ ಮುನಿರತ್ನ ಮಾತನಾಡಿ, ಕನ್ನಡ ಚಿತ್ರರಂಗಕ್ಕೆೆ ಇತ್ತೀಚೆಗೆ ತುಂಬಾ ನಷ್ಟವಾಗುತ್ತಿಿದ್ದು, ಮೊನ್ನೆೆ ಬುಲೇಟ್ ಪ್ರಾಾಕಶ್ ಈಗ ಚಿರಂಜೀವಿ ಸರ್ಜಾ ಅಗಲಿದ್ದಾರೆ ಎಂದರು.
ಸಾಹಿತಿ, ನಿರ್ದೇಶಕ ನಾಗತಿಹಳ್ಳಿಿ ಚಂದ್ರಶೇಖರ್ ಮಾತನಾಡಿ, ಚಿರಂಜೀವಿ ಎಂದು ಹೆಸರು ಇಟ್ಟುಕೊಂಡು ಅಕಾಲಿಕ ವಿಧಿವಶರಾಗಿರುವುದು ನಿಜಕ್ಕೂ ದುರಂತ. ನಾನು ಅವರ ಜತೆ ಸಿನಿಮಾ ಮಾಡಿಲ್ಲ ಅದರೆ ಅವರೊಂದಿಗೆ ಉತ್ತಮ ಒಡನಾಟ ಇತ್ತು ಎಂದರು.  ಸುಧಾರಾಣಿ, ತಾರಾ,  ಮತ್ತಿಿತರರು ಚಿರಂಜೀವಿ ಸರ್ಜಾ ಒಡನಾಟ ಸ್ಮರಿಸಿಕೊಂಡು ಕಣ್ಣೀರ್ ಇಟ್ಟಿಿದ್ದಾಾರೆ.