Friday, 22nd November 2024

ದಿ.ಎಂ.ಡಿ.ಶಿರೋಮಣಿ ಪುಣ್ಯತಿಥಿ

ಇಂಡಿ : ಗಡಿ ತಾಲೂಕಿನಲ್ಲಿ ಇಂಡಿ ಪಟ್ಟಣದಲ್ಲಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರಳು ಶ್ರಮಿಸಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ ಗೋಕಾಕ ಚಳುವಳಿಯ ಸಂದರ್ಭದಲ್ಲಿ ಏಂಜಲ್ಸ ಆಂಗ್ಲ್ ಮಾಧ್ಯಮ ಶಾಲೆಗೆ ಅನುಮತಿ ಪಡೆದುಕೊಂಡು ಶೈಕ್ಷ ಣಿಕ ಕ್ರಾಂತಿ ಮಾಡಿದ ದಿ. ಎಂ. ಡಿ ಶಿರೋಮಣಿ ಅವರ ಪುಣ್ಯತಿಥಿ ಆ.೩ ರಂದು ಪಟ್ಟಣದ ಏಂಜೆಲ್ಸ ಆಂಗ್ಲಮಾದ್ಯಮ ಶಾಲೆ ಯಲ್ಲಿ ಹಮ್ಮಿಕೊಳ್ಳಲಾಗಿದೆ.

ರೂರಲ್ ಡೆವಲೆಪಮೆಂಟ್ ಅಸೋಸಿಯೇಷನ್ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿ ಏಂಜಲ್ಸ್ ಇಂಗ್ಲೀಷ ಮಾಧ್ಯಮ ಶಾಲೆ ಯನ್ನು ೧೯೭೯ ರಲ್ಲಿ ಇಂಡಿ ಪಟ್ಟಣದಲ್ಲಿ ಸ್ಥಾಪಿಸಿ, ಗಡಿಭಾಗದ ಸಾವಿರಾರು ವಿದ್ಯಾರ್ಥಿಗಳ ಜ್ಞಾನ ದಾಸೋಹಕ್ಕೆ ಕಾರಣರಾಗಿದ್ದರು.

೧೯೭೧ ರಲ್ಲಿ ಇಂಡಿ ತಾಲೂಕಿನಲ್ಲಿ ಅಂದು ಭೀಕರ ಬರಗಾಲದ ಸಮಯ. ತಾಲೂಕಿನ ಟಿಡಿಬಿ ಆಡಳಿತದಲ್ಲಿ ಮೆಕ್ಯಾನಿಕ್-ಕಂ- ಎಕ್ಸಟೆನಶನ್ ಸುಪ್ರೆöÊಸರ್ ಆಗಿ ಸೇವೆಗೆ ಸೇರಿದ ಶಿರೋಮಣಿಯವರು ತಮ್ಮ ನೌಕರಿಯೊಂದಿಗೆ ಸಾಮಾಜಿಕ ಶೈಕ್ಷಣಿಕ ಸೇವೆಯತ್ತ ಗಮನಹರಿಸಿದರು.

ನಂತರ ಸಾಮಾಜಿಕ, ಶೈಕ್ಷಣಿಕ ,ರಾಜಕೀಯ ಚಟುವಟಿಕೆಗಳಲ್ಲಿ ಹೆಚ್ಚಿನÀ ಒಲವು ತೊರಿ ಸರ್ಕಾರಿ ನೌಕರಿ ತ್ಯಜಿಸಿ ಶಿಕ್ಷಣದ ಶ್ರೇಯೋಭಿವೃದ್ಧಿಗಾಗಿ ಟೊಂಕಕಟ್ಟಿ ನಿಂತರು.ಆ.೩ ರಂದು ಅವರ ಪುಣ್ಯಸ್ಮರಣೆ ನಿಮಿತ್ಯ ವಿವಿಧ ಕಾರ್ಯಕ್ರಮಗಳು ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷೆ ಡಿ.ಶಿರೋಮಣಿ,ಕಾರ್ಯದರ್ಶಿ ಸ್ಟೀಪನ್ ಶಿರೋಮಣಿ,ನಿವೃತ್ ಪ್ರಾಚಾರ್ಯ ಐ.ಸಿ.ಪೂಜಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.