Wednesday, 30th October 2024

ಮತದಾರರ ಪಟ್ಟಿಿ ಪರಿಶೀಲನೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಪ್ರಸ್ತುತ ಚಾಲ್ತಿಯಲ್ಲಿರುವ  ವಿಧಾನಸಭಾ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು ವಾರ್ಡ್‌ವಾರು ಮತದಾರರ ಪಟ್ಟಿಯನ್ನು ತಯಾರಿಸಲು ವಿಶೇಷ ಆಯುಕ್ತರು ತಿಳಿಸಿದ್ದಾರೆ.

ರಾಜ್ಯ ಚುನಾವಣಾ ಆಯೋಗದ ಆಯುಕ್ತರು ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನಿರ್ದೇಶನದ ಮೇರೆಗೆ ಆ.26ರಿಂದ ಸೆ.14ರವರೆಗೆ  ಮತದಾರರ ಮಾಹಿತಿ ಯಾವ ವಾರ್ಡ್‌ನ ವ್ಯಾಪ್ತಿಯಲ್ಲಿ ಇರಬೇಕೆಂಬುದನ್ನು ಕುರಿತು ಮನೆ ಮನೆಗೂ ಭೇಟಿ ನೀಡಿ ಮತದಾರರ ಪಟ್ಟಿ ಪರಿಶೀಲನೆ ಮಾಡುವ ಕಾರ್ಯಚಟುವಟಿಕೆಯನ್ನು  ಬಿ.ಎಲ್.ಓ ಮೇಲ್ವಿಚಾರಕರುಗಳು ಕೈಗೊಳ್ಳಲಿದ್ದಾರೆ.

ಸಾರ್ವಜನಿಕರು ಈ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಂಡು, ಮತದಾರರ ಪಟ್ಟಿ ಪರಿಶೀಲನೆ ಮಾಡುವ  ಬಿ.ಎಲ್.ಓ ಮೇಲ್ವಿಚಾರಕರುಗಳಿಗೆ ಸಹಕಾರ ನೀಡಬೇಕೆಂದು ವಿಶೇಷ ಆಯುಕ್ತರು ತಿಳಿಸಿದ್ದಾರೆ.