ಬೆಂಗಳೂರು:
15 ದಿನಗಳ ಹಿಂದಷ್ಟೇ ನನ್ನ ಬಳಿಗೆ ಬಂದು, ಕಾಂಗ್ರೆಸ್ ಗೆ ಸೇರಿಸಿಕೊಳ್ಳಿ ಎಂದು ಕಾಲಿಗೆ ಬಿದ್ದಿದ್ದ ಸಿ.ಪಿ ಯೋಗೇಶ್ವರ್ ಈ ರೀತಿ ಯಾಕೆ ಮಾತನಾಡಿದ್ದಾನೆ ಗೊತ್ತಿಲ್ಲ. ಅವನಿಗೆ ಹುಚ್ಚು ಹಿಡಿದಿದೆಯಾ? ಎಂದು ಟೀಕಿಸಿದರು.
ಯೋಗೇಶ್ವರ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು…
‘ಹದಿನೈದು ದಿನಗಳ ಹಿಂದೆ
ಸಿ. ಪಿ ಯೋಗೇಶ್ವರ್ ನನ್ನ ಬಳಿ ಬಂದಿದ್ದ. ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಿ ಎಂದು ಮನವಿ ಮಾಡಿದ.
ಶೀಘ್ರದಲ್ಲೇ ಯಡಿಯೂರಪ್ಪ ಅವರನ್ನ ಕೆಳಗೆ ಇಳಿಸ್ತಾರೆ, ಹೀಗಾಗಿ ಕಾಂಗ್ರೆಸ್ ಬರ್ತಿನಿ ಅಂತ ನನ್ನ ಬಳಿ ಚರ್ಚೆ ಮಾಡಿದ. ನೀನು ಪಕ್ಷಕ್ಕೆ ಬರುವುದು ಬೇಡ ಬಿಜೆಪಿಯಲ್ಲೇ ನಿಷ್ಠೆಯಿಂದ ಇರು ಎಂದು ಹೇಳಿ ಕಳುಹಿಸಿದೆ. ಈಗ ಯಾಕೆ ಹೀಗೆ ಮಾತಾಡಿದ್ದಾನೋ ಗೊತ್ತಿಲ್ಲ.’