ವಿಶ್ವವಾಣಿ ಸುದ್ದಿಮನೆ ಬೆಂಗಳೂರು:
ಸ್ಯಾಾಂಡಲ್‌ವುಡ್‌ನಲ್ಲಿ ನಟ-ನಟಿಯರು ಮಾದಕ ದ್ರವ್ಯ ಸೇವನೆ ಪ್ರಕರಣ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದ್ದು, ನಟಿ ರಾಗಿಣಿ ದ್ವಿವೇದಿ ಮತ್ತು ಆಕೆಯ ಸ್ನೇಹಿತ ರವಿ ಶಂಕರ್ ಅವರಿಗೆ ಸಿಸಿಬಿ ಪೋಲೀಸರು ನೋಟೀಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಗುರುವಾರ ಬೆಳೆಗ್ಗೆ 10 ಗಂಟೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಿಸಿಬಿಗೆ ನೀಡಿರುವ ಹೆಸರಿನ ಪಟ್ಟಿಯಲ್ಲಿ ಸ್ಟಾರ್ ದಂಪತಿ ಸ್ಟಾರ್ ನಟಿ ಸೇರಿದಂತೆ ಹಲವರಿದ್ದಾರೆ. ಕನ್ನಡದಲ್ಲೂ ಹಲವು ದಿನಗಳಿಂದ ಮಾದಕ ದ್ರವ್ಯ ಸೇವನೆ ಪ್ರಕರಣ ಸದ್ದು ಮಾಡುತ್ತಿದೆ.
ನಟಿ ರಾಗಿಣಿ ಅವರ ಸ್ನೇಹಿತ ರವಿಶಂಕರ್ ಅವರನ್ನು ಸಿಸಿಬಿ ವಶಕ್ಕೆ ಪಡೆದ ವಿಚಾರಣೆ ಒಳಪಡಿಸಿದ ಬೆನ್ನಲ್ಲೇ ರಾಗಿಣಿಗೆ ನೋಟಿಸ್ ಜಾರಿ ಮಾಡಲಾಗಿದೆ.