ಬೆಂಗಳೂರು:
ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ 19 ವೈರಸ್ ಹಾವಳಿ ತೀವ್ರಗೊಂಡಿದೆ. ಹೀಗಾಗಿ ಪ್ರತಿ ವಾರ್ಡ್ಗೊಂದು ಜ್ವರ ತಪಾಸಣಾ ಕೇಂದ್ರಗಳನ್ನು ರಾಜ್ಯ ಸರಕಾರ ತೆರೆಯುತ್ತಿದೆ.
ಇದರ ಭಾಗವಾಗಿಯೇ ನಗರದಲ್ಲಿ ಮತ್ತೆ 60 ಫೀವರ್ ಕ್ಲಿನಿಕ್ಸ್ ಶುರು ಮಾಡಲಾಗಿದೆ. ಈಗಾಗಲೇ 50 ಫೀವರ್ ಕ್ಲಿನಿಕ್ಗಳು ಇವೆ. ಇದೀಗ ಖಾಸಗಿ ಆಸ್ಪತ್ರೆ ಸೇರಿದಂತೆ ಮೆಡಿಕಲ್ ಕಾಲೇಜುಗಳಲ್ಲಿಯೂ ಮತ್ತೆ 60 ಫೀವರ್ ಕ್ಲಿನಿಕ್ಸ್ ಸ್ಥಾಪಿಸಿದ ಪರಿಣಾಮ ಇದರ ಸಂಖ್ಯೆ 110 ಆಗಿದೆ.
ಇನ್ನು, ನಗರದಾದ್ಯಂತ ಜ್ವರ ಚಿಕಿತ್ಸಾಲಯಗಳನ್ನು 24*7 ಕಾರ್ಯನಿರ್ವಹಣೆ ಮಾಡಲಿವೆ. ಕೊರೋನಾ ಶಂಕಿತರಿಗೆ ಜ್ವರ ತಪಾಸಣಾ ಕೇಂದ್ರದಲ್ಲಿ ಸ್ವಾಬ್ ಶೇಖರಣೆ ಮಾಡಲಾಗುವುದು. ನಂತರ ಅದನ್ನು ಕೋವಿಡ್-19 ಟೆಸ್ಟಿಂಗ್ ಲ್ಯಾಬ್ಗೆ ಕಳಿಸಿಕೊಡಲಾಗುವುದು. ಇದಾದ ಬಳಿಕ ಶಂಕಿತ ರೋಗಿಯ ಕೋವಿಡ್-19 ರಿಪೋರ್ಟ್ ಬರಲಿದೆ.
ರಾಜ್ಯ ಸರಕಾರ,ವೂ ಸ್ವಾಬ್ ಶೇಖರಣೆ ಮತ್ತು ಅದನ್ನು ಲ್ಯಾಬ್ಗೆ ತಲುಪಿಸುವ ಸಲುವಾಗಿ ರೋಗಿಯಿಂದ ಗರಿಷ್ಠ 350 ರೂಪಾಯಿ ಪಡೆಯಬಹುದು. ಜ್ವರ ಚಿಕಿತ್ಸಾಲಯಕ್ಕೆ ಜಿಲ್ಲೆಯ ಸಮುದಾಯ ಕೇಂದ್ರಗಳನ್ನು ಶೇ.100ರಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಶೇ.50ರಷ್ಟು ಮೀಸಲಿಟ್ಟಿವೆ. ಇಲ್ಲಿ ಈ ಎಲ್ಲಾ ಟೆಸ್ಟ್ಗಳನ್ನು ಮಾಡಲಾಗುತ್ತದೆ.
ಕ್ಲಿನಿಕ್ಗಳು ಬೆಳಗ್ಗೆ 9 ಗಂಟೆಯಿಂದ ಸಂಜೆ 4.30ರವರೆಗೆ ಕಾರ್ಯನಿರ್ವಹಿಸುತ್ತವೆ. ಫೀವರ್ ಕ್ಲಿನಿಕ್ಗಳಲ್ಲಿ ಜ್ವರ, ಕಫ ಹಾಗೂ ಸ್ಕ್ರೀನಿಂಗ್ ಟೆಸ್ಟ್ ಮಾಡಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಒಂದೊಂದು ಕ್ಲಿನಿಕ್ನಲ್ಲೂ ವೈದ್ಯಾಧಿಕಾರಿ, ಶುಶ್ರೂಶಕಿ, ಹಿರಿಯ ಹಾಗೂ ಕಿರಿಯ ಆರೋಗ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ಸ್ಯಾನಿಟೈಸರ್, ಒಬ್ಬರಿಂದ ಒಬ್ಬರು ಸಾಕಷ್ಟು ದೂರದಲ್ಲಿ ನಿಲ್ಲುವುದು, ಮುಂತಾದ ಜಾಗರೂಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಕ್ಲಿನಿಕ್ಗೆ ಬರುವ ರೋಗಿಗಳಿಗೆ ಜ್ವರ ಇದ್ದಾಗ ಅವರಿಗೆ ಅಗತ್ಯವಾದ ಪ್ಯಾರಾಸಿಟಮಾಲ್, ಓಆರ್ಎಸ್ ಮತ್ತು ನೆಗಡಿಯ ಔಷಧಗಳನ್ನು ಸಿದ್ದ ಮಾಡಿಟ್ಟುಕೊಳ್ಳಲಾಗಿದೆ. ಸಾಮಾನ್ಯ ಜ್ವರವಾದರೆ ಈ ಔಷಧಗಳನ್ನು ನೀಡಿ ಸ್ವಲ್ಪ ಸಮಯ ಕಾದು ನೋಡುವಂತೆ ತಿಳಿಸಲಾಗುತ್ತದೆ. ಪ್ರತಿಯೊಬ್ಬ ರೋಗಿಯ ಸಂಪೂರ್ಣ ವಿವರ ಪಡೆಯಲಾಗುತ್ತದೆ.