ಬೆಂಗಳೂರು:
ಜ್ವರ, ಕೆಮ್ಮು, ನೆಗಡಿಯ ಔಷಧ ಮಾರಾಟದ ಮಾಹಿತಿಯನ್ನು ಸಲ್ಲಿಸದೆ ನಿರ್ಲಕ್ಷ್ಯ ತೋರಿದ ಬನಶಂಕರಿ 2 ನೇ ಹಂತದ ಸೌಜನ್ಯ ಮೆಡಿಕಲ್ಸ್ ನ ಪರವಾನಗಿಯನ್ನು ಐದು ದಿನ ಅಮಾನತ್ತಿನಲ್ಲಿಡಲಾಗಿದೆ.
ಕೊರೊನಾ ಸೋಂಕಿತರನ್ನು ಪತ್ತೆ ಮಾಡಲು ಜ್ವರ, ನೆಗಡಿ, ಕೆಮ್ಮು ಮೊದಲಾದ ಔಷಧಗಳನ್ನು ಖರೀದಿ ಮಾಡುವವರ ವಿವರವನ್ನು ನೀಡಲು ಔಷಧ ನಿಯಂತ್ರಣ ಇಲಾಖೆಯು ಆದೇಶಿಸಿತ್ತು. ಪ್ರತಿ ದಿನ ಕರ್ನಾಟಕ ಫಾರ್ಮಾ ವೆಬ್ ಸೈಟ್ ನಲ್ಲಿ ಮಾಹಿತಿ ಸಲ್ಲಿಸಲು ಸೂಚನೆ ನೀಡಲಾಗಿತ್ತು. ಸೌಜನ್ಯ ಮಳಿಗೆಯು ಮೇ 25 ರಂದು ಮಾಹಿತಿ ಸಲ್ಲಿಸಿರಲಿಲ್ಲ. ಇದಕ್ಕೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು.
ಈ ನೋಟಿಸ್ ಗೂ ಉತ್ತರ ನೀಡದಿರುವುದರಿಂದ ಔಷಧ ಮತ್ತು ಕ್ರಾಂತಿವರ್ಧಕ ಅಧಿನಿಯಮದಡಿ ಕ್ರಮ ಜರುಗಿಸಲಾಗಿದೆ. ಜು.6 ರಿಂದ ಜು.10 ರವರೆಗೆ ಮಳಿಗೆಯ ಪರವಾನಗಿಯನ್ನು ಅಮಾನತ್ತಿನಲ್ಲಿಡಲು ಆದೇಶಿಸಲಾಗಿದೆ.