Saturday, 11th January 2025

ಸ್ವಚ್ಛತೆಗೆ ಆದ್ಯತೆ: ಪೊಲೀಸ್ ಠಾಣೆಗೆ ವಾಷಿಂಗ್ ಮಿಷನ್

ಬೆಂಗಳೂರು

ಬೆಂಗಳೂರಿನಲ್ಲಿ ಪೊಲೀಸ್ ಪೇದೆಗೆ ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಪೊಲೀಸರ ಸ್ವಚ್ಛತೆಗೆ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಇನ್ನಷ್ಟು ಆದ್ಯತೆ ಕೊಡಲು ಮುಂದಾಗಿದ್ದಾರೆ.

ಹೌದು, ಕೊರೊನಾ ವಾರಿಯರ್ಸ್ ಆಗಿ ದುಡಿಯುತ್ತಿರುವ ಪೊಲೀಸರು ಅಲ್ಲಲ್ಲಿ ಸುತ್ತಾಡುವುದು ಹೆಚ್ಚು. ಈಗಂತೂ ಕೊರೊನಾ ಸೇವೆ ಅಂತ ಇನ್ನಷ್ಟು ಓಡಾಟ. ಇಂತಹ ಸಂದರ್ಭದಲ್ಲಿ ಸ್ವಚ್ಛತೆಗೆ ಇನ್ನೂ ಹೆಚ್ಚು ಗಮನಕೊಡಬೇಕಾಗಿರುವುದು ಮುಖ್ಯ. ಹೀಗಾಗಿ ಪೊಲೀಸ್ ಠಾಣೆಗಳಿಗೆ ವಾಷಿಂಗ್ ಮಿಷನ್ ಅಳವಡಿಸಲು ಇಲಾಖೆ ಮುಂದಾಗಿದೆ.

ಠಾಣೆಯ ಸಿಬ್ಬಂದಿಗಳ ಸಮವಸ್ತ್ರ, ಖರ್ಚಿಫ್ ಸ್ವಚ್ಛತೆ ಸಲುವಾಗಿ ವಾಷಿಂಗ್ ಮಷಿನ್ ಕೊಡಲು ಚಿಂತನೆ ನಡೆಸಿದೆ.
ಪೊಲೀಸರ ಆರೋಗ್ಯದ ದೃಷ್ಟಿಯಿಂದ ಮತ್ತಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಪ್ರಾಯೋಗಿಕವಾಗಿ ಎರಡು ಪೊಲೀಸ್ ಠಾಣೆಗೆ ವಾಷಿಂಗ್ ಮೆಷಿನ್ ನೀಡಲು ಚಿಂತನೆ ನಡೆಸಿದೆ ಎಂದು ಕಮೀಷನರ್ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಕರ್ತವ್ಯ ನಿರತ ಸಿಬ್ಬಂದಿ ಕರ್ತವ್ಯ ಮುಗಿದ ಬಳಿಕ ಮನೆಗೆ ಹೋಗುತ್ತಾರೆ‌. ಅದಕ್ಕಿಂತ ಠಾಣೆಯಲ್ಲಿ ಸಮವಸ್ತ್ರ ಸ್ವಚ್ಛತೆಕೊಳ್ಳಲೆಂದು, ಬಿಸಿನೀರಿನಲ್ಲಿ ಬಟ್ಟೆ ಸ್ವಚ್ಛತೆ ಮಾಡಲು ಬೇಕಾದ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಠಾಣೆಗಳಿಗೆ ವಾಷಿಂಗ್ ಮೆಷಿನ್ ಕೊಡಲು ಸಿದ್ಧತೆ ನಡೆಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.

Leave a Reply

Your email address will not be published. Required fields are marked *