ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆೆ ಕರೋನಾ ಪ್ರಕರಣಗಳೂ ಹೆಚ್ಚಾಾಗುತ್ತಲ್ಲೇ ಇವೆ. ಈಗ ಪುಟ್ಟ ಮಕ್ಕಳನ್ನೂ ಮಹಾಮಾರಿ ಕರೋನಾ ಬಾಧಿಸುತ್ತಿದೆ. ಒಂದೇ ವಾರದಲ್ಲಿ 150ಕ್ಕೂ ಹೆಚ್ಚು ಮಕ್ಕಳಿಗೆ ಕರೋನಾ ಸೋಂಕು ದೃಢಪಟ್ಟಿದೆ.
ನಗರದಲ್ಲಿ ಜನರು ಮಕ್ಕಳ ಮೇಲೆ ವಿಶೇಷ ಕಾಳಜಿ ವಹಿಸಬೇಕಾದ ಸಮಯ. ಇದರಿಂದ ಜನರಲ್ಲಿ ಆತಂಕ ಹೆಚ್ಚಾಾಗಿದೆ. ಕರೋನಾ ಸೋಂಕು 10 ವರ್ಷದೊಳಗಿನ ಮಕ್ಕಳಿಗೂ ಸೋಂಕು ಕಾಣಿಸಿಕೊಳ್ಳತ್ತಿದೆ. ಪ್ರತಿನಿತ್ಯವೂ ಮಕ್ಕಳಲ್ಲಿ ಕರೋನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಒಂದೇ ವಾರದಲ್ಲಿ 150ಕ್ಕೂ ಮಕ್ಕಳಿಗೆ ಸೋಂಕು ಪಾಸಿಟಿವ್ ಬಂದಿದೆ.
ಜೂ.27 ರಂದು 14ಮಕ್ಕಳಿಗೆ ಸೋಂಕು ತಗುಲಿದ್ದು, ಜೂ.28ರಂದು 23 ಮಕ್ಕಳಿಗೆ ಪಾಸಿಟಿವ್ ಬಂದಿದೆ. ಜೂ.30ರಂದು 20 ಮಕ್ಕಳಿಗೆ ಸೋಂಕು ದೃಢಪಟ್ಟಿದ್ದು, ಜು.1 ರಂದು 19 ಮಕ್ಕಳಲ್ಲಿ ಕರೋನಾ ಕಾಣಿಸಿಕೊಂಡಿದೆ. ಜು.2ರಂದು ಬರೋಬ್ಬರಿ 31 ಮಕ್ಕಳಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದ್ದು, ಪೋಷಕರು ಮಕ್ಕಳನ್ನು ಬಹಳ ಸುರಕ್ಷಿತವಾಗಿ ನೋಡಿಕೊಳ್ಳಬೇಕಾಗಿದೆ.