Tuesday, 22nd October 2024

ಕರ್ನಾಟಕ ಕರೋನಾ ಬ್ರೇಕಿಂಗ್: 1,708 ಪಾಸಿಟಿವ್ ಪ್ರಕರಣ ಪತ್ತೆ

ಬೆಂಗಳೂರು : ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 1,708 ಜನರಿಗೆ ಕರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಸೋಂಕಿತರಾದ 36 ಜನರು ಮೃತಪಟ್ಟಿ ದ್ದಾರೆ.

ರಾಜ್ಯ ಆರೋಗ್ಯ ಇಲಾಖೆ ಈ ಕುರಿತಂತೆ ಕರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ 386 ಸೇರಿದಂತೆ ರಾಜ್ಯಾದ್ಯಂತ 1,708 ಜನರಿಗೆ ಕರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 28,83,947ಕ್ಕೆ ಏರಿಕೆಯಾಗಿದೆ. 28,18,476 ಸೋಂಕಿತರು ಗುಣಮುಖರಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ 29,291 ಸಕ್ರೀಯ ಸೋಂಕಿತರು ಇರುವುದಾಗಿ ತಿಳಿಸಿದೆ.

ಬೆಂಗಳೂರು ನಗರದಲ್ಲಿ 9, ದಕ್ಷಿಣ ಕನ್ನಡದಲ್ಲಿ 6 ಮೈಸೂರು 4 ಸೇರಿದಂತೆ ರಾಜ್ಯಾಧ್ಯಂತ ಸೋಂಕಿತರಾದ 36 ಜನರು ಮೃತಪಟ್ದಿದ್ದಾರೆ. ಬಲಿಯಾದವರ ಸಂಖ್ಯೆ 36,157ಕ್ಕೆ ಏರಿಕೆಯಾಗಿದೆ.