ಬೆಂಗಳೂರು: ರಾಜ್ಯದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ದಿನಾಂಕ ಪ್ರಕಟಗೊಂಡಿದೆ. ಮೇ 24 ರಿಂದ ಜೂನ್ 10ರವರೆಗೆ ಪರೀಕ್ಷೆ ನಡೆಯಲಿದೆ ಎಂದು ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ.
ದ್ವಿತೀಯು ಪಿಯುಸಿ ಪರೀಕ್ಷೆಗಳು ( ಈ ಮೊದಲು ಮಾರ್ಚ್‌ನಲ್ಲಿ ನಡೆಯುತ್ತಿತ್ತು) ಕೊರೊನಾದಿಂದಾಗಿ ಮೇ ತಿಂಗಳಿನಲ್ಲಿ ಆರಂಭ ವಾಗಲಿವೆ. ಕೊರೊನಾ ಲಾಕ್‌ಡೌನ್ ಕಾರಣದಿಂದಾಗಿ ಕಾಲೇಜುಗಳನ್ನು ಮುಚ್ಚಲಾಗಿತ್ತು.
ತರಗತಿಗಳನ್ನು ತಡವಾಗಿ ಆರಂಭಿಸಿರುವ ಕಾರಣ ಪಠ್ಯಗಳನ್ನು ಪೂರೈಸಲು ಹಾಗೂ ಮಕ್ಕಳಿಗೂ ಓದಿಕೊಳ್ಳಲು ಹೆಚ್ಚು ಸಮಯ ಬೇಕಾಗಿರುವ ಕಾರಣ ಮೇ 24 ರಿಂದ ವಾರ್ಷಿಕ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಕಳೆದ ವರ್ಷ ದ್ವಿತೀಯ ಪರೀಕ್ಷೆ ಸಂದರ್ಭದಲ್ಲೇ ಕೊರೊನಾ ರಾಜ್ಯಕ್ಕೆ ಎಂಟ್ರಿ ಕೊಟ್ಟಿದ್ದ ಕಾರಣ, ಇಂಗ್ಲಿಷ್ ಪರೀಕ್ಷೆಯನ್ನು ತಿಂಗಳುಗಳ ಬಳಿಕ ನಡೆಸಲಾಗಿತ್ತು. ಕರ್ನಾಟಕ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಈ ಶೈಕ್ಷಣಿಕ ವರ್ಷಕ್ಕೆ ರಾಜ್ಯದ ಎಲ್ಲಾ ಶಾಲೆಗಳು ಬೋಧನಾ ಶುಲ್ಕದ ಶೇ.70ರಷ್ಟು ಮಾತ್ರ ಸಂಗ್ರಹಿಸಬೇಕು ಎಂದು ನಿರ್ಧರಿಸಿದೆ.
ಅಭಿವೃದ್ಧಿ ಶುಲ್ಕ ಮತ್ತು ದೇಣಿಗೆ ಯಂತಹ ಯಾವುದೇ ಶುಲ್ಕವನ್ನು ಶಾಲೆಗಳು ವಿಧಿಸುವುದಿಲ್ಲ ಎಂದು ತಿಳಿಸಿದ್ದಾರೆ.