ಬೆಂಗಳೂರು:
ದೇಶದಲ್ಲಿ ಈ ವರೆಗೆ 9,70,169 ಜನರು ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. ಅವರಲ್ಲಿ 24,929 ಮೃತಪಟ್ಟಿದ್ದು, 6,13,735 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಸೋಂಕಿತರು ಗುಣಮುಖರಾಗಲು ವೈದ್ಯರು ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಸೋಂಕಿತರಿಗೆ ಚಿಕಿತ್ಸೆ ಕೊಡುವಾಗ ಸೋಂಕಿಗೆ ತುತ್ತಾಗಿ ಮೃತ ಪಟ್ಟಿರುವ ವೈದ್ಯರ ಸಂಖ್ಯೆ 99.
ಹೀಗಾಗಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ವೈದ್ಯರಿಗೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಸೋಂಕಿನಿಂದ ಈವರೆಗೆ ಮೃತಪಟ್ಟಿರುವ ವೈದ್ಯರ ವಿವರವಾದ ವರದಿಯನ್ನು ಐಎಂಎ ಮೊದಲ ಬಾರಿ ಬಿಡುಗಡೆ ಮಾಡಿದೆ. ಸಂಪೂರ್ಣ ವಿವರ ಮುಂದಿದೆ.
ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ಕೊಡುತ್ತಿದ್ದ 99 ವೈದ್ಯರ ಪ್ರಾಣವನ್ನು ಕಳೆದು ಕೊಂಡಿದ್ದಾರೆಂದು ಭಾರತೀಯ ವೈದ್ಯಕೀಯ ಸಂಘ ತನ್ನ ವರದಿಯಲ್ಲಿ ತಿಳಿಸಿದೆ. ದೇಶದ ವೈದ್ಯಕೀಯ ವೃತ್ತಿಪರರ ಮೇಲೆ ಸೋಂಕಿನ ಪ್ರಭಾವದ ಮೊದಲ ವರದಿಯನ್ನು ಬಹಿರಂಗಪಡಿಸಿದ್ದು, ಆತಂಕಕಾರಿ ವಿಷಯಗಳು ಬಹಿರಂಗವಾಗಿವೆ.
ದೇಶಾದ್ಯಂತ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದ 1302 ವೈದ್ಯರು ಕರೋನಾಗೆ ತುತ್ತಾಗಿದ್ದಾರೆ. ಅವರಲ್ಲಿ 586 ಸಾಮಾನ್ಯ ವೈದ್ಯರು, 566 ನಿವಾಸಿ ವೈದ್ಯರು ಹಾಗೂ 150 ಹೌಸ್ ಸರ್ಜನ್ಗಳು ಸೇರಿದ್ದಾರೆ. ಈ ಎಲ್ಲ ವೈದ್ಯರು ತಮ್ಮ ಕರೋನಾ ಸೋಂಕಿತ ರೋಗಿಗಳಿಂದಲೇ ಸೋಂಕಿಗೆ ತುತ್ತಾಗಿದ್ದರು ಎಂದು ಐಎಂಎ ವರದಿಯಲ್ಲಿ ಹೇಳಿದೆ.
ಕಿರಿಯ ವಯಸ್ಸಿನ ವೈದ್ಯರು ಸಾವು: ಮೃತ ವೈದ್ಯರ ವಯಸ್ಸು ಕೂಡ ವೈದ್ಯ ವೃತ್ತಿಯಲ್ಲಿರುವವ ಆತಂಕ ಹೆಚ್ಚಾಗಲು ಕಾರಣವಾಗಿದೆ. ಕರೋನಾ ವೈರಸ್ ಸೋಂಕಿಗೆ ತುತ್ತಾಗಿ ಮೃತಪಟ್ಟ 73 ವೈದ್ಯರು 50 ವರ್ಷಗಳಿಗಿಂತ ಮೇಲ್ಪಟ್ಟವರು, 19 ಮಂದಿ 35-50 ವಯಸ್ಸಿನವರು ಮತ್ತು 7 ಮಂದಿ 35 ವರ್ಷದೊಳಗಿನವರು ಎಂಬುದು ಆತಂಕಕಾರಿ ವಿಷಯ.
…….
ವೈದ್ಯರಿಗೆ ಸೌಲಭ್ಯ ಕಲ್ಪಿಸಿ
ವೈದ್ಯರು ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ತಮ್ಮ, ಅವರ ಕುಟುಂಬಗಳು, ಅವರ ಸಹೋದ್ಯೋಗಿಗಳು ಮತ್ತು ಸಿಬ್ಬಂದಿ ಸುರಕ್ಷತೆಗೆ ಗಮನ ಕೊಡಬೇಕು. ಇದೀಗ ವೈದ್ಯಕೀಯ ಸಂಸ್ಥೆಗಳ ಹಿರಿಯ ವೈದ್ಯರು ತಮ್ಮ ಸುಪರ್ದಿಯ ವೈದ್ಯರನ್ನು ನೋಡಿಕೊಳ್ಳುವಲ್ಲಿ ಜವಾಬ್ದಾರಿ ಹೆಚ್ಚಾಗಿದೆ ಎಂದು ಐಎಂಎ ಸಲಹೆ ಕೊಟ್ಟಿದೆ. ವೈಜ್ಞಾನಿಕ ತಪಾಸಣೆ, ಜತೆಗೆ ಗುಣಮಟ್ಟದ ಪಿಪಿಇ ಕಿಟ್ ಒದಗಿಸುವುದು, ದೈಹಿಕ ಅಂತರದ ಚಿಕಿತ್ಸೆ ಕೊಡಬೇಕು. ಪ್ರತಿದಿನ ಸರಿಯಾಗಿ ಸ್ಯಾನಿಟೈಸ್ ಮಾಡಬೇಕು. ಜತೆಗೆ ಆಪರೇಷನ್ ಥಿಯೇಟರ್ಗಳು, ಕಾರ್ಮಿಕ ಕೊಠಡಿಗಳು, ಪ್ರಯೋಗಾಲಯಗಳಲ್ಲಿ ಕೋವಿಡ್ ಸಮಯದ ಪ್ರಟೊಕಾಲ್ನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಐಸಿಯುಗಳು ಮತ್ತು ಕ್ರಿಟಿಕಲ್ ಕೇರ್ ಯುನಿಟ್ಗಳಲ್ಲಿ ಪ್ರೋಟೋಕಾಲ್ಗಳನ್ನು ಖಡ್ಡಾಯ ಪಾಲನೆ ಮಾಡಬೇಕು ಎಂದು ರೆಡ್ ಅಲರ್ಟ್ನಲ್ಲಿ ಘೊಷಣೆ ಮಾಡಿದೆ.
|
|